Advertisement

Chhattisgarh ಉಪಮುಖ್ಯಮಂತ್ರಿಯಾಗಿ ಟಿಎಸ್ ಸಿಂಗ್ ನೇಮಕ; ಹೊಸ ರಣತಂತ್ರ

10:16 PM Jun 28, 2023 | Team Udayavani |

ಹೊಸದಿಲ್ಲಿ: ಕಾಂಗ್ರೆಸ್ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ ಅವರು ಟಿಎಸ್ ಸಿಂಗ್ ದೇವ್ ಅವರನ್ನು ಛತ್ತೀಸ್‌ಗಢದ ಉಪ ಮುಖ್ಯಮಂತ್ರಿಯಾಗಿ ಬುಧವಾರ ನೇಮಿಸಿದ್ದಾರೆ. ದೆಹಲಿಯ ಕಾಂಗ್ರೆಸ್ ಪ್ರಧಾನ ಕಚೇರಿಯಲ್ಲಿ ಮುಂಬರುವ ಛತ್ತೀಸ್‌ಗಢ ವಿಧಾನಸಭಾ ಚುನಾವಣೆಯ ಕುರಿತು ಚರ್ಚಿಸಲು ನಡೆದ ಪರಿಶೀಲನಾ ಸಭೆಯಲ್ಲಿ ದೇವ್ ಅವರ ನೇಮಕವನ್ನು ಘೋಷಿಸಲಾಗಿದೆ.

Advertisement

ದೇವ್ ಅವರ ನೇಮಕಾತಿಗೆ ಸಿಎಂ ಭೂಪೇಶ್ ಬಘೇಲ್ ಅಭಿನಂದನೆ ಸಲ್ಲಿಸಿ ಚಿತ್ರವನ್ನು ಹಂಚಿಕೊಂಡಿದ್ದಾರೆ, “ನಾವು ಸಿದ್ಧರಿದ್ದೇವೆ” ಎಂದು ಹೇಳಿದ್ದಾರೆ.

ಟಿಎಸ್ ಸಿಂಗ್ ಅವರ ನೇಮಕವನ್ನು ಪ್ರಕಟಿಸಿದ ಕಾಂಗ್ರೆಸ್ ” ಕಾಂಗ್ರೆಸ್ ನಿಷ್ಠಾವಂತ ನಾಯಕ ಮತ್ತು ಸಮರ್ಥ ಆಡಳಿತಗಾರ. ಉಪ ಮುಖ್ಯಮಂತ್ರಿಯಾಗಿ ಅವರ ಸೇವೆಯಿಂದ ರಾಜ್ಯಕ್ಕೆ ಹೆಚ್ಚಿನ ಪ್ರಯೋಜನವಾಗಲಿದೆ” ಎಂದು ಹೇಳಿದೆ.

2013ರ ಅಸೆಂಬ್ಲಿ ಚುನಾವಣೆಯಲ್ಲಿ ಅವರು ಅತ್ಯಂತ ಶ್ರೀಮಂತ ಅಭ್ಯರ್ಥಿಯಾಗಿದ್ದ ಸಿಂಗ್ ಅವರು ಅಂಬಿಕಾಪುರದಲ್ಲಿರುವ ಪ್ರಸ್ತುತ ಸುರ್ಗುಜಾದ ಮಹಾರಾಜ ಎನಿಸಿಕೊಂಡಿದ್ದಾರೆ. ಸುರ್ಗುಜಾದ ಸಿಂಹಾಸನದ ಮೇಲೆ ಕುಳಿತ ಕೊನೆಯ ರಾಜ ಪರಂಪರೆಯವರು. ಸ್ಥಳೀಯ ಕ್ಷೇತ್ರದಲ್ಲಿ ಸಿಂಗ್ ಅವರನ್ನು “ಟಿ.ಎಸ್. ಬಾಬಾ” ಎಂದೇ ಕರೆಯಲಾಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next