Advertisement

ತಾಲೂಕು ಘೋಷಣೆಗೆ ಪ್ರಯತ್ನ

03:45 PM Dec 05, 2022 | Team Udayavani |

ಮಹಾಲಿಂಗಪುರ: ತಾಲೂಕು ಘೋಷಣೆಗೆ ಆಗ್ರಹಿಸಿ, ಇದೇ ಡಿ. 19ರಂದು ಪ್ರಾರಂಭವಾಗುವ ಬೆಳಗಾವಿ ಅಧಿವೇಶನದಲ್ಲಿ ಧ್ವನಿ ಎತ್ತುವುದಾಗಿ ಹಾಗೂ ಅಗತ್ಯ ಬಿದ್ದರೆ ಸದನದಲ್ಲಿ ಧರಣಿ ಮಾಡುವುದಾಗಿ ಶಾಸಕ ಸಿದ್ದು ಸವದಿ ಹೇಳಿದರು.

Advertisement

ಪಟ್ಟಣದಲ್ಲಿ ರವಿವಾರ ನಡೆದ ಮಹಾಲಿಂಗಪುರ ತಾಲೂಕು ಹೋರಾಟ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ಮಹಾಲಿಂಗಪುರ ತಾಲೂಕು ಘೋಷಣೆಗೆ ಶೇ. 100ರಷ್ಟು ಅರ್ಹವಾಗಿದೆ. 1.42 ಲಕ್ಷಕ್ಕೂ ಅಧಿಕ ಜನಸಂಖ್ಯೆ ಮತ್ತು ಆರ್ಥಿಕ, ಶೈಕ್ಷಣಿಕ, ಸಾಮಾಜಿಕ, ಧಾರ್ಮಿಕ, ರಾಜಕೀಯ ವಾಣಿಜ್ಯಿಕವಾಗಿ ಸಾಕಷ್ಟು ಅಭಿವೃದ್ಧಿ ಹೊಂದಿದ ಪಟ್ಟಣವಾಗಿದೆ.

ಮುಧೋಳ ತಾಲೂಕಿನಷ್ಟೇ ವ್ಯಾಪ್ತಿ ಹೊಂದಿರುವ ಜಮಖಂಡಿ ತಾಲೂಕನ್ನು ಈಗಾಗಲೇ 3 ತಾಲೂಕುಗಳಾಗಿ ವಿಂಗಡಿಸಲಾಗಿದೆ. ಮುಧೋಳ ತಾಲೂಕಿನ ಕೆಲ ಹಳ್ಳಿಗಳನ್ನು ಸೇರಿಸಿ ಮಹಾಲಿಂಗಪುರ ಪಟ್ಟಣವನ್ನು ತಾಲೂಕು ಘೋಷಣೆ ಮಾಡಲು ಸಾಕಷ್ಟು ಅನುಕೂಲತೆಗಳಿವೆ. ಇಲ್ಲಿನ ಸಾರ್ವಜನಿಕರಿಗೆ ಅನುಕೂಲಕ್ಕಾಗಿ ತಾಲೂಕು ಘೋಷಣೆ ಮಾಡಲು ತಾವು ಜಾತಿಭೇದ ಮತ್ತು ಪಕ್ಷಭೇದ ಮರೆತು ಮುಂದಾಳತ್ವ ವಹಿಸಿ, ಮತ್ತೂಮ್ಮೆ ಮುಖ್ಯಮಂತ್ರಿಗಳ ಭೇಟಿಗೆ ಕಾಲಾವಕಾಶ ಪಡೆದು ನಿಯೋಗದೊಂದಿಗೆ ತೆರಳಿ ಮಹಾಲಿಂಗಪುರ ತಾಲೂಕು ಘೋಷಣೆಯ ಅವಶ್ಯಕತೆ, ಅನಿವಾರ್ಯತೆ, ಅರ್ಹತೆಗಳ ಬಗ್ಗೆ ಸಮಗ್ರ ಮಾಹಿತಿ ನೀಡಿ ತಾಲೂಕು ಘೋಷಣೆಗಾಗಿ ಶಕ್ತಿ ಮೀರಿ ಶ್ರಮಿಸುವುದಾಗಿ ಹೋರಾಟ ವೇದಿಕೆಯ ಸದಸ್ಯರಿಗೆ ಭರವಸೆ ನೀಡಿದರು.

ಇದೇ ವೇಳೆ 235 ದಿನಗಳಿಂದ ಹೋರಾಟ ನಡೆಸುತ್ತಿರುವ ಮಹಾಲಿಂಗಪುರ ತಾಲೂಕು ಹೋರಾಟ ಸಮಿತಿಗೆ 1 ಲಕ್ಷ ದೇಣಿಗೆ ನೀಡುವುದಾಗಿ ಘೋಷಿಸಿದರು. ತಾಲೂಕು ಹೋರಾಟ ಸಮಿತಿಯ ಅಧ್ಯಕ್ಷ ಸಂಗಪ್ಪ ಹಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಧ್ಯಕ್ಷ ಧರೆಪ್ಪ ಸಾಂಗ್ಲಿಕರ, ಢವಳೇಶ್ವರ ಮುಖಂಡ ಎಸ್‌. ಎಂ.ಪಾಟೀಲ ಮಾತನಾಡಿದರು.

ಪುರಸಭೆ ಅಧ್ಯಕ್ಷ ಬಸವರಾಜ ಹಿಟ್ಟಿನಮಠ, ಬಿಡಿಸಿಸಿ ಬ್ಯಾಂಕ್‌ ನಿರ್ದೇಶಕ ಬಸನಗೌಡ ಪಾಟೀಲ, ಜಿಪಂ ಮಾಜಿ ಸದಸ್ಯ ಮಹಾಂತೇಶ ಹಿಟ್ಟಿನಮಠ, ಯಲ್ಲನಗೌಡ ಪಾಟೀಲ, ಗಂಗಾಧರ ಮೇಟಿ, ಚನಬಸು ಹುರಕಡ್ಲಿ, ನಿಂಗಪ್ಪ ಬಾಳಿಕಾಯಿ, ಈರಪ್ಪ ದಿನ್ನಿಮನಿ, ಸಿದ್ದುಗೌಡ ಪಾಟೀಲ, ಮಹಾಲಿಂಗಪ್ಪ ಸನದಿ, ಮಲ್ಲಪ್ಪ ಸಿಂಗಾಡಿ, ಪರಪ್ಪ ಬ್ಯಾಕೋಡ, ಮಾರುತಿ ಕರೋಶಿ, ಸುಭಾಸ್‌ ಶಿರಬೂರ, ಅರ್ಜುನ ಹಲಗಿಗೌಡರ, ಶಿವಾನಂದ ತಿಪ್ಪಾ, ಶೇಖರ ಅಂಗಡಿ, ಮಲ್ಲಪ್ಪ ಕೌಜಲಗಿ, ಚೆನ್ನು ದೇಸಾಯಿ, ಭೀಮಪ್ಪ ಸಸಾಲಟ್ಟಿ, ಹನಮಂತ ಜಮಾದಾರ, ಪರಪ್ಪ ಸತ್ತಿಗೇರಿ, ಶಿವಲಿಂಗಪ್ಪ ಕೌಜಲಗಿ, ಚನ್ನಪ್ಪ ಪಟ್ಟಣಶೆಟ್ಟಿ, ಮುಸ್ತಾಕ್‌ ಚಿಕ್ಕೋಡಿ, ಪ್ರಕಾಶ ಚನ್ನಾಳ, ಮಹಾದೇವ ಮೇಟಿ, ಚನ್ನಬಸು ಯರಗಟ್ಟಿ, ಬಸವರಾಜ ಶಿರೋಳ ಇತರರು ಹಾಜರಿದ್ದರು.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next