Advertisement

‘ಈಗೋ’ ಒಳ್ಳೆಯದೇ… ಎಲ್ಲಿಯ ತನಕವೆಂದರೇ..

10:09 AM Mar 26, 2021 | ಶ್ರೀರಾಜ್ ವಕ್ವಾಡಿ |

ನಮ್ಮಲ್ಲಿ ಅವಿತಿರುವ ಭಾವಗಳಂತೆ, ಅಹಂ ಅಥವಾ ಈಗೋ ಕೂಡ ಇದ್ದಿರುತ್ತದೆ, ಅದು ಕೆಲವರಲ್ಲಿ ಹೆಚ್ಚು, ಕೆಲವರಲ್ಲಿ ತುಸು ಕಡಿಮೆ ಅಷ್ಟೇ. ಮತ್ತೊಂದು ವಿಚಾರ ಗೊತ್ತಿರಲಿ, ‘ನಾನೇ’ ಎನ್ನುವುದು ಅಹಂ ಅಥವಾ ಈಗೋ ಅಲ್ಲ.

Advertisement

‘ನಾನೇ’ ಎನ್ನುವ ಎರಡೇ ಎರಡು ಪದಗಳಿಗೆ ಅಪಾರವಾದ ಶಕ್ತಿ ಇದೆ ಎಂದರೇ ನೀವದನ್ನು ಒಪ್ಪಲೇ ಬೇಕು. ನನಗೆ ನಾನೇ ಸಾಟಿ ಎನ್ನುವುದನ್ನು ನಾವು ಅಹಂ ಅಥವಾ ಈಗೋ ಎಂದೇ ಅರ್ಥೈಸಿಕೊಳ್ಳಬೇಕೆಂದಿಲ್ಲ. ಅದು ಅವರ ಆತ್ಮ ವಿಶ್ವಾಸವೂ ಆಗಿರಬಹುದು. ನಾವು ಅದನ್ನು ನಮ್ಮ ಸ್ಪಂದನೆಗೆ ಅವರ ಪ್ರತಿ ಸ್ಪಂದನೆಯಂತಲೂ ತಿಳಿದುಕೊಳ್ಳುವುದಕ್ಕೆ ಸಾಧ್ಯವಿದೆ. ಆದರೇ, ನಾವು ಆ ಕೆಲಸಕ್ಕೆ ಮುಂದೆ ಹೋಗುವುದಿಲ್ಲ. ಆದರೇ, ನಾವದನ್ನು ‘ಅಹಂ’ ಅಥವಾ ‘ಈಗೋ’ ಎಂದು ಹೆಸರಿಸಿ ಬಿಡುತ್ತೇವೆ. ನೆನಪಿಟ್ಟುಕೊಳ್ಳಿ ನಮಗೆ ಯಾವುದನ್ನೂ ‘ಇದಮಿತ್ಥಂ’ ಎಂದು ಗಣಿಸುವುದಕ್ಕೆ ಸಾಧ್ಯವಿಲ್ಲ.

ಓದಿ : ನಯನ ತಾರಾ, ವಿಘ್ನೇಶ್ ಶಿವನ್ ಜೋಡಿ ಹಕ್ಕಿಗಳು ಸಾಮಾಜಿಕ ಜಾಲತಾಣಗಳಲ್ಲಿ ಟಾಪ್ ಟ್ರೆಂಡಿಂಗ್..!

ಈ ‘ನಾನು’, ‘ನಾನೇ’ ಎಂಬವುಗಳಲ್ಲಿ ಎರಡು ಮೂರು ವಿಧಗಳಿವೆ. ಒಂದನ್ನು ಆತ್ಮ ವಿಶ್ವಾಸ ಎಂದು ಅರ್ಥೈಸಿಕೊಳ್ಳಬಹುದು, ಇನ್ನೊಂದನ್ನು ಅತಿಯಾದ ಆತ್ಮ ವಿಶ್ವಾಸ ಅಥವಾ ಓವರ್ ಕಾನ್ಫಿಡೆನ್ಸ್ ಎಂದು ತಿಳಿದುಕೊಳ್ಳಬಹುದು, ಕೊನೆಯದ್ದನ್ನು ‘ಅಹಂ’ ಅಥವಾ ‘ಈಗೋ’ ಭಾವ ಎಂದುಕೊಳ್ಳಬಹದು.

ಆತ್ಮ ವಿಶ್ವಾಸಗಳು ಈಗೋ ಅಲ್ಲ. ಅದು ನಮ್ಮೊಳಗಿರುವ ಧನಾತ್ಮಕ ಅಲೆ ಅಥವಾ ನಮ್ಮನ್ನು ಸದಾ ಲವಲವಿಕೆಯಿಂದ ಇರುವ ಹಾಗೆ ಮಾಡುವ ‘ಚಿಮ್ಮು ಹಲಗೆ’ ಎಂದು ಕೂಡ ತಿಳಿದುಕೊಳ್ಳುವುದಕ್ಕೆ ಸಾಧ್ಯವಿದೆ.

Advertisement

‘ಅಹಂ’ ಎಂದರೆ, ಹೊಲದಲ್ಲಿ ಬೆಳೆಯುವ ಹುಲ್ಲುಗಳಂತೆ ಜೊತೆಗೆ ಕಸ ಕಡ್ಡಿಗಳಂತೆ. ಎಲ್ಲಿಯವರೆಗೆ ನಾವು ಆ ಹುಲ್ಲನ್ನು ಬೇರುಸಮೇತ ನಾಶಮಾಡುವುದಿಲ್ಲವೋ, ಅಲ್ಲಿಯವರೆಗೆ ಒಳ್ಳೆಯ ಬೆಳೆಯ ನಿರೀಕ್ಷೆ ಮಾಡಲು ಸಾಧ್ಯವಿಲ್ಲ. ಸಾಧನೆಯ ಉದ್ದೇಶವೇ ಅಹಂಭಾವವನ್ನು ನಾಶ ಮಾಡುವುದಾಗಿದೆ. ಆದರೂ ಮನುಷ್ಯನಲ್ಲಿ ಅಹಂಭಾವವು ಎಷ್ಟು ಬೇರೂರಿರುತ್ತದೆ ಎಂದರೆ ಸಾಧನೆಯನ್ನು ಮಾಡುವಾಗಲೂ ಅದನ್ನು ಸಂಪೂರ್ಣ ನಾಶಮಾಡಲು ಸಹಜ ಸಾಧ್ಯವಾಗುವುದಿಲ್ಲ. ಆದ್ದರಿಂದ ಸಾಧನೆಯಿಂದ ಅಹಂಭಾವವು ತಾನಾಗಿಯೇ ಕಡಿಮೆಯಾಗುವುದು ಎಂದು ವಿಚಾರವನ್ನು ಮಾಡದೇ ಅಹಂಭಾವವನ್ನು ಕಡಿಮೆ ಮಾಡಿಕೊಳ್ಳಲು ಸತತವಾಗಿ ಪ್ರಯತ್ನ ಮಾಡುವುದು ಉತ್ತಮ ಎಂದು ನನ್ನ ನಿಮ್ಮಂತಹ ಸಾಮಾನ್ಯರು ಅರ್ಥೈಸಿಕೊಂಡಿರುತ್ತೇವೆ.

ಆದರೇ, ಅದರಾಚೆಗೂ ಕೆಲವೊಂದಿಷ್ಟಿವೆ.

ಪ್ರಪಂಚದಲ್ಲಿನ ಯಾವ ಜೀವಿಗೆ ಈಗೋ ಅಥವಾ ಅಹಂ ಇಲ್ಲ ಹೇಳಿ..? ಮರಗಳಿಗೆ ನಾನು ನೆರಳು ನೀಡುತ್ತೇನೆ, ಫಲವನ್ನು ನೀಡುತ್ತೇನೆ ಎಂಬ ಅಹಂ ಅಥವಾ ಈಗೋ ಇರಬಹುದು, ನೀರಿಗೆ ನಾನು ದಣಿದವನಿಗೆ ದಾಹ ತೀರಿಸುತ್ತೇನೆ ಎಂಬ ಅಹಂ ಇರಬಹದು. ಅವುಗಳು ತಮ್ಮಲ್ಲಿನ ಈಗೋದಿಂದಲೇ ಬೆಳೆಯುತ್ತವೆ. ಆದರೇ, ನಾವು ಅವುಗಳನ್ನು ‘ಅಹಂ’ ಎಂದು ಪರಿಗಣಿಸುವುದಿಲ್ಲ. ಇದು ಆಶ್ಚರ್ಯ.

ಅಹಂ ಅಥವಾ ಈಗೋ ಕೆಟ್ಟದಲ್ಲ. ಅಹಂ ಎನ್ನುವುದಕ್ಕಿಂತ ‘ಈಗೋ’ ಕೆಟ್ಟದಲ್ಲ. ಅದು ಪ್ರಗತಿಯನ್ನು ಸಾಧಿಸಿಕೊಡುತ್ತದೆ. ಆದರೇ, ಅದು ಅತಿಯಾದರೇ, ಸರ್ವ ನಾಶ ಮಾಡಿಸುತ್ತದೆ ಎನ್ನುವುದರಲ್ಲಿ ಯಾವುದೇ ಅನುಮಾನ ಪಡಬೇಕಾಗಿಲ್ಲ.

ಈಗೋ ಅನ್ನು ಸಮಸ್ಥಿತಿಯಲ್ಲಿ ಇಡುವುದನ್ನು ನಾವು ತಿಳಿದುಕೊಳ್ಳಬೇಕು. ನಮಗೆ ಗೊತ್ತಿಲ್ಲದೇ ನಮ್ಮೊಳಗಿರುವ ಈಗೋ ಅನ್ನು ಹೇಗೆ ಸಮಸ್ಥಿತಿಯಲ್ಲಿ ಇಡುವುದು ಎಂಬ ಪ್ರಶ್ನೆ ನಿಮ್ಮಲ್ಲಿ ಬರಬಹುದು. ಆದರೇ, ಅದನ್ನು ನಿಮ್ಮ ನಡೆತೆಯಲ್ಲಿ ಸ್ವಲ್ಪ ಬದಲಾವಣೆ ಮಾಡಿಕೊಳ್ಳುವುದರಿಂದ ನೀವು ಈಗೋ ಅನ್ನು ಸಮಸ್ಥಿತಿಯಲ್ಲಿಟ್ಟುಕೊಳ್ಳಬಹುದು. ಅದರ ವಿವರಣೆ ನಿಮಗೆ ಅಗತ್ಯವೂ ಇಲ್ಲ. ನಿಮ್ಮ ‘ಈಗೋ’ ನಿಮ್ಮ ವ್ಯಕ್ತಿತ್ವಕ್ಕೆ ಧಕ್ಕೆ ತರುತ್ತಿದೆ ಎಂದಾದಲ್ಲಿ ಅದನ್ನು ನೀವೇ ಸ್ವತಃ ಅರ್ಥೈಸಿಕೊಳ್ಳಬಹದು., ಇದು ಕೂಡ ಒಂದು ರೀತಿಯ ‘ಈಗೋ’ ಎನ್ನುವುದನ್ನು ನೆನಪಿನಲ್ಲಿಟ್ಟುಕೊಳ್ಳಿ.

ಮಿತಿ ಮೀರಿದರೇ ಎಲ್ಲವೂ ಕೆಟ್ಟದ್ದು ಎಂದು ಹೇಳುತ್ತೇವೆ ಅಲ್ವಾ..? ಅದೇ ಸಾಲಿಗೆ ಈ ‘ಈಗೋ’ ಕೂಡ ಸೇರುತ್ತದೆ. ಈಗೋ ಇಲ್ಲದ ಮನುಷ್ಯನನ್ನು ನಮಗೆ ಊಹಿಸಿಕೊಳ್ಳುವುದಕ್ಕೂ ಸಾಧ್ಯವಿಲ್ಲ. ಈಗೋ ಮನುಷ್ಯನ ಸಹಜ ಗುಣ. ಅದನ್ನು ಹೊರತಾಗಿ ಮನುಷ್ಯನಿಗೆ ಉಳಿಯುವುದಕ್ಕೂ ಸಾಧ್ಯವಿಲ್ಲ. ಈಗೋ ಇಲ್ಲದವನನ್ನು ಸನ್ಯಾಸಿ ಎಂದು ಕೂಡ ಹೇಳಬಹುದು. ನಿಮಗೆ ಆಶ್ವರ್ಯ ಅನ್ನಿಸಬಹುದು, ಈಗೋ ಇಲ್ಲದ ಮನುಷ್ಯ ಪ್ರಗತಿ ಕಂಡಿರುವ ಉದಾಹರಣೆಯೇ ಈ ಪ್ರಪಂಚದಲ್ಲಿಲ್ಲ. ಮಿತಿ ಮೀರಿದರೇ,

ಈಗೋ ಒಳ್ಳೆಯದೇ. ಎಲ್ಲಿಯ ತನಕವೆಂದರೇ, ಅದು ನಮ್ಮ ಹಿಡಿತದಲ್ಲಿರುವ ತನಕವಷ್ಟೇ.

-ಶ್ರೀರಾಜ್ ವಕ್ವಾಡಿ

ಓದಿ : ಡಾ. ಲೆವಿನ್, ಅಮೇರಿಕಾ ಶ್ವೇತಭವನದ ಉನ್ನತ ಹುದ್ದೆಗೆ ಆಯ್ಕೆಗೊಂಡ ಮೊದಲ ತೃತೀಯ ಲಿಂಗಿ

Advertisement

Udayavani is now on Telegram. Click here to join our channel and stay updated with the latest news.

Next