Advertisement

ಬ್ರಿಟನ್‌ ತೆರಿಗೆ ಕಡಿತ ಯೋಜನೆ ರದ್ದು: ಲಿಜ್‌ ಟ್ರಸ್‌ 

12:12 AM Oct 04, 2022 | Team Udayavani |

ಲಂಡನ್‌: ಬ್ರಿಟನ್‌ನಲ್ಲಿ ಇತ್ತೀಚೆಗಷ್ಟೇ ಅಧಿಕಾರ ಸ್ವೀಕರಿಸಿರುವ ಲಿಜ್‌ ಟ್ರಸ್‌ ನೇತೃತ್ವದ ಸರಕಾರ ತೆರಿಗೆ ಕಡಿತ ಯೋಜನೆಯನ್ನು ಪರಿಚಯಿಸಿ, ಹತ್ತೇ ದಿನಗಳಲ್ಲಿ ಅದನ್ನು ವಾಪಸು ಪಡೆದುಕೊಂಡಿದೆ.

Advertisement

ವರ್ಷಕ್ಕೆ 1,50,000 ಪೌಂಡ್ಸ್‌ ಗಿಂತ(1.46 ಕೋಟಿ ರೂ.) ಹೆಚ್ಚು ಆದಾಯವಿರುವವರ ತೆರಿಗೆಯನ್ನು ಕಡಿತಗೊಳಿಸುವುದಾಗಿ ಲಿಜ್‌ ಟ್ರಸ್‌ ಸರಕಾರ ಸೆ.23ರಂದು ಘೋಷಿಸಿತ್ತು.

ಆಡಳಿತ ಪಕ್ಷದ ಸದಸ್ಯರೂ ಸೇರಿದಂತೆ ಎಲ್ಲರೂ ಈ ನೀತಿಯನ್ನು ವಿರೋಧಿಸಿದ ಹಿನ್ನೆಲೆ ಇದೀಗ ತಮ್ಮ ಪ್ರಸ್ತಾವವನ್ನು ಹಿಂಪಡೆದಿರುವುದಾಗಿ ಸರಕಾರ ತಿಳಿಸಿದೆ.

“ಆರ್ಥಿಕತೆ ಹೆಚ್ಚಿಸಿ, ಜನತೆಗೆ ಉತ್ತಮ ಮಟ್ಟದ ಸಾರ್ವಜನಿಕ ಸೇವೆ ಕೊಡುವುದು, ವೇತನ ಹೆಚ್ಚಿಸುವುದು ಮತ್ತು ರಾಷ್ಟ್ರಾದ್ಯಂತ ಉದ್ಯೋಗ ಅವಕಾಶ ಸೃಷ್ಟಿ ಸರಕಾರದ ಗುರಿ’ ಎಂದು ಪ್ರಧಾನಿ ಟ್ರಸ್‌ ತಿಳಿಸಿದ್ದಾರೆ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next