Advertisement
ಜೊತೆಗೆ ಅಮೆರಿಕದ ಗುಪ್ತಚರ ಇಲಾಖೆಯ ಸಿಬ್ಬಂದಿ, ಭಾರತದ ರಾಷ್ಟ್ರೀಯ ಭದ್ರತಾ ಪಡೆ (ಎನ್‌ಎಸ್‌ಜಿ), ವಿಶೇಷ ಭದ್ರತಾ ಪಡೆಗಳು, ಕ್ಷಿಪ್ರ ಕಾರ್ಯಪಡೆ, ಗುಜರಾತ್ ರಾಜ್ಯದ ಪೊಲೀಸ್ ಸಶಸ್ತ್ರ ಮೀಸಲು ಪಡೆ, ಚೇತಕ್ ಕಮಾಂಡೊ, ಉಗ್ರ ನಿಗ್ರಹ ದಳ, ಬಾಂಬ್ ಪತ್ತೆ ಹಾಗೂ ನಿಷ್ಕ್ರಿಯ ದಳಗಳನ್ನು ನಿಯೋಜಿಸಲಾಗಿದೆ. ರಾಷ್ಟ್ರ ರಾಜಧಾನಿ ದೆಹಲಿ ಹಾಗೂ ಆಗ್ರಾದಲ್ಲೂ ಬಿಗಿಭದ್ರತೆ ಕೈಗೊಳ್ಳಲಾಗಿದೆ.
ಅಹ್ಮದಾಬಾದ್‌ನಲ್ಲಿ ಟ್ರಂಪ್ ಅವರಿಗೆ ಕೋಸುಗಡ್ಡೆಯ ಸಮೋಸಾ, ಗುಜರಾತ್‌ನ ಖ್ಯಾತ ತಿನಿಸಾದ ಖಮನ್ ಹಾಗೂ ಬಹುಧಾನ್ಯದ ರೋಟಿಗಳನ್ನು ನೀಡಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.
Related Articles
ಸಾಬರಮತಿ ಆಶ್ರಮದಿಂದ ನೇರವಾಗಿ ಮೊಟೇರಾ ಕ್ರಿಕೆಟ್ ಕ್ರೀಡಾಂಗಣಕ್ಕೆ ಮೋದಿ ಮತ್ತು ಟ್ರಂಪ್ ರೋಡ್ ಶೋ ಮೂಲಕ ಸಾಗಲಿದ್ದಾರೆ. ರಸ್ತೆಯ ಎರಡೂ ಬದಿಯಲ್ಲಿ 28 ವಿಶಾಲ ವೇದಿಕೆಗಳನ್ನು ನಿರ್ಮಿಸಲಾಗಿದ್ದು, ವಿವಿಧ ರಾಜ್ಯಗಳ ಕಲಾವಿದರು ತಮ್ಮ ರಾಜ್ಯಗಳ ಸಂಸ್ಕೃತಿಯನ್ನು ಸಾರುವ ನೃತ್ಯ, ಗಾಯನ ಹಾಗೂ ಇನ್ನಿತರ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರದರ್ಶಿಸಲಿದ್ದಾರೆ.
Advertisement
ಮಹತ್ವದ ವಿಚಾರಗಳು ಚರ್ಚೆಯಾಗಲಿ: ಕಾಂಗ್ರೆಸ್ಈ ಬಾರಿಯ ಟ್ರಂಪ್ ಭೇಟಿ ವೇಳೆ, ಎಚ್-1ಬಿ ವೀಸಾ, ಜಿಎಸ್‌ಪಿ ಸ್ಥಾನಮಾನ ಹಾಗೂ ತಾಲಿಬಾನ್ ಉಗ್ರರ ಸಮಸ್ಯೆ ಬಗ್ಗೆ ಚರ್ಚೆ ನಡೆಸುವಂತೆ ಪ್ರಧಾನಿ ಮೋದಿ ಅವರನ್ನು ಪ್ರಮುಖ ವಿಪಕ್ಷವಾದ ಕಾಂಗ್ರೆಸ್ ಆಗ್ರಹಿಸಿದೆ. 21 ಸಾವಿರ ಕೋಟಿ ರೂ. ರಕ್ಷಣಾ ಸಾಮಗ್ರಿಗಳನ್ನು ಅಮೆರಿಕದಿಂದ ಖರೀದಿಸುವ ಒಪ್ಪಂದಕ್ಕೆ ಪ್ರತಿಯಾಗಿ ಅಗ್ಗದಲ್ಲಿ ಕಚ್ಚಾ ತೈಲ ನೀಡುವಂತೆ ಟ್ರಂಪ್ ಮೇಲೆ ಮೋದಿ ಒತ್ತಡ ಹೇರಬೇಕು ಎಂದು ಅವರು ಆಗ್ರಹಿಸಿದ್ದಾರೆ. ಬಾಹುಬಲಿಯಾದ ಟ್ರಂಪ್!
ಭಾರತದ ಭೇಟಿಗಾಗಿ ಎದುರು ನೋಡುತ್ತಿರುವುದಾಗಿ ಟ್ವೀಟ್ ಮಾಡಿರುವ ಟ್ರಂಪ್, ಈ ಕಿರು ಸಂದೇಶದ ಜೊತೆಗೆ ಭಾರತ-ಅಮೆರಿಕ ಬಾಂಧವ್ಯವನ್ನು ತೋರ್ಪಡಿಸುವ 81 ಸೆಕೆಂಡ್‌ಗಳ ವಿಡಿಯೋ ಕ್ಲಿಪ್‌ವೊಂದನ್ನು ಟ್ವೀಟ್ ಮಾಡಿದ್ದಾರೆ. ಇದು 2018ರ ಬಂಪರ್ ಹಿಟ್ ಚಿತ್ರವಾದ “ಬಾಹುಬಲಿ’ ಸಿನಿಮಾದ ದೃಶ್ಯಗಳನ್ನು ಮಾಸ್ಕ್ ತಂತ್ರಜ್ಞಾನದಡಿ ತಿದ್ದುಪಡಿ ಮಾಡಿ, ನಾಯಕ ಪ್ರಭಾಸ್ ಅವರ ಪಾತ್ರಕ್ಕೆ ಟ್ರಂಪ್ ಅವರ ಮುಖ ಜೋಡಿಸಲಾಗಿದೆ. ವಿಡಿಯೋದಲ್ಲಿ, ಟ್ರಂಪ್ ಅವರೇ ಭಾರತದ ಶತ್ರುಗಳನ್ನು ಸದೆಬಡಿದು ಬಂದು ಮೋದಿಯವರಿಗೆ ಕಮಲದ ಹೂಗಳನ್ನು ಸಮರ್ಪಿಸಿದ ರೀತಿಯಲ್ಲಿ ತೋರ್ಪಡಿಸಲಾಗಿದೆ.