ವಾಷಿಂಗ್ಟನ್: ಜಗತ್ತಿಗೆ ಕೋವಿಡ್ ಹರಡಲು ಚೀನ ಕಾರಣವೆಂದು ಪ್ರತಿಪಾದಿಸುತ್ತಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಚೀನದಲ್ಲಿ ಉದ್ದಿಮೆ ನಡೆಸಲು ಪ್ರಯತ್ನ ನಡೆಸಿದ್ದರು ಎಂಬ ಅಂಶ ಬೆಳಕಿಗೆ ಬಂದಿದೆ. ಅಲ್ಲಿನ ಸರ್ಕಾರದ ಉದ್ದಿಮೆ ಗಳಲ್ಲಿ ಸಹಭಾಗಿತ್ವ ಪಡೆದುಕೊಂಡು ಉದ್ದಿಮೆ ನಡೆಸುವ ಬಗ್ಗೆ ದಶಕಗಳಿಂದ ಪ್ರಯತ್ನ ನಡೆಸುತ್ತಿದ್ದರು ಎಂದು “ದ ನ್ಯೂಯಾರ್ಕ್ ಟೈಮ್ಸ್’ ವರದಿ ಮಾಡಿದೆ. ಇದರ ಜತೆಗೆ ಚೀನ, ಐರ್ಲೆಂಡ್ ಮತ್ತು ಬ್ರಿಟನ್‌ಗಳಲ್ಲಿ ಟ್ರಂಪ್ ಬ್ಯಾಂಕ್ ಖಾತೆಗಳನ್ನು ಹೊಂದಿದ್ದಾರೆ ಎಂದು ಪತ್ರಿಕೆ ತನ್ನ ವರದಿಯಲ್ಲಿ ಹೇಳಿದೆ.
ಚೀನದಲ್ಲಿ ಟ್ರಂಪ್ ಹೊಂದಿರುವ ಖಾತೆಯನ್ನು ಟ್ರಂಪ್ ಇಂಟರ್‌ನ್ಯಾಷನಲ್ ಹೊಟೇಲ್ಸ್ ಮ್ಯಾನೇಜ್‌ಮೆಂಟ್ ಎಲ್‌ಎಲ್‌ಸಿ ನಿರ್ವಹಿಸುತ್ತಿದೆ. ಅದು 2013- 2015ರ ಅವಧಿಯಲ್ಲಿ ಚೀನ ಸರ್ಕಾರಕ್ಕೆ 1,88, 561 ಅಮೆರಿಕನ್ ಡಾಲರ್ ತೆರಿಗೆ ಪಾವತಿ ಮಾಡಿದೆ.
ವರದಿಗಳ ಬಗ್ಗೆ ಪ್ರತಿಕ್ರಿಯೆ ನೀಡಿದ ಟ್ರಂಪ್ ಸಂಸ್ಥೆಯಲ್ಲಿ ವಕೀಲರಾಗಿರುವ ಅಲನ್ ಗಾರ್ಟನ್ ಉದ್ದಿಮೆ ನಡೆಸುವ ನಿಟ್ಟಿನಲ್ಲಿ ಚೀನದಲ್ಲಿ ಬ್ಯಾಂಕ್ ಖಾತೆ ತೆರೆಯಲಾಗಿದೆ. ಸ್ಥಳೀಯ ಸಂಸ್ಥೆಗಳ ಜತೆಗೆ ವಹಿವಾಟು ನಡೆಸಲು ಇದರಿಂದ ಅನುಕೂಲವಾಗಿದೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ. 2015ರ ಬಳಿಕ ಟ್ರಂಪ್ ಸಂಸ್ಥೆಯಿಂದ ಯಾವುದೇ ರೀತಿ ವಹಿವಾಟು ನಡೆಸಲಾಗಿಲ್ಲ.
ಭಾರಿ ಅಂತರದಿಂದ ಜಯ: ಮತ್ತೂಂದೆಡೆ ನ.3ರ ಚುನಾವಣೆಗೆ ಅಮೆರಿಕದಲ್ಲಿ ಪ್ರಚಾರ ಬಿರುಸಾಗಿದೆ. ಕ್ಯಾಲಿಫೋರ್ನಿಯಾದ ಈರಿ ನಗರದಲ್ಲಿ ಆಯೋಜಿಸಲಾಗಿದ್ದ ಪ್ರಚಾರ ಕಾರ್ಯಕ್ರಮದಲ್ಲಿ ಮಾತನಾಡಿದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ “2016ರ ಚುನಾವಣೆಗಿಂತ ಹೆಚ್ಚಿನ ಮತಗಳ ಅಂತರದಲ್ಲಿ ಗೆಲವು ಸಾಧಿಸುವೆ. ಈ ಮೂಲಕ ಪ್ರತಿಸ್ಪರ್ಧಿ ಜೋ ಬೈಡೆನ್ ಅವರಿಗೆ ಹೀನಾ ಯ ಸೋಲು ಉಣಿಸುವೆ’ ಎಂದು ಘೋಷಿಸಿದ್ದಾರೆ.
56ನೇ ವರ್ಷಕ್ಕೆ ಕಾಲಿಟ್ಟ ಕಮಲಾ: ಡೆಮಾಕ್ರಾಟಿಕ್ ಪಕ್ಷದ ಉಪಾಧ್ಯಕ್ಷ ಹುದ್ದೆಯ ಅಭ್ಯರ್ಥಿ ಕಮಲಾ ಹ್ಯಾರಿಸ್ ಮಂಗಳವಾರ 56ನೇ ವರ್ಷಕ್ಕೆ ಕಾಲಿರಿಸಿ ದ್ದಾರೆ. ಮುಂದಿನ ವರ್ಷ ಶ್ವೇತ ಭವನದಲ್ಲಿ ಹುಟ್ಟು ಹಬ್ಬ ಆಚರಿಸುವಂತಾಗಲಿ ಎಂದು ಬೆಂಬಲಿಗರು ಹಾರೈಸಿದ್ದಾರೆ.