Advertisement

ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ ಟ್ರಂಪ್‌ ಸಿದ್ಧ

07:50 PM Mar 18, 2023 | Team Udayavani |

ವಾಷಿಂಗ್ಟನ್‌: ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ ಮಾಜಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಮತ್ತೆ ಸಿದ್ಧತೆ ಶುರು ಮಾಡಿದ್ದಾರೆ. ಅಲ್ಲಿಗೆ ರಿಪಬ್ಲಿಕನ್‌ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ತಾನೇ ಎನ್ನುವುದನ್ನು ಅಧಿಕೃತ ಮಾಡಲು ಹೊರಟಿದ್ದಾರೆ. ಮಾರ್ಚ್‌ ಮಾಸಾಂತ್ಯದಲ್ಲಿ ಟೆಕ್ಸಾಸ್‌ನ ವ್ಯಾಕೊದಲ್ಲಿ ಮೊದಲನೇ ಚುನಾವಣೆ ರ‍್ಯಾಲಿ ನಡೆಸಲಿದ್ದಾರೆ ಎಂದು ತಿಳಿದುಬಂದಿದೆ.

Advertisement

ಹಲವು ಆರೋಪಗಳ ಮೇರೆಗೆ ಅಮೆರಿಕದ ತನಿಖಾ ಸಂಸ್ಥೆಗಳಿಂದ ತನಿಖೆ ಎದುರಿಸುತ್ತಿರುವ ಟ್ರಂಪ್‌, ಆ ಸಂಸ್ಥೆಗಳೆಂದರೆ ಕಿಡಿಕಾರುವ ವ್ಯಾಕೊ ಪ್ರದೇಶದಲ್ಲೇ ತಮ್ಮ ಮೊದಲ ರ‍್ಯಾಲಿ ನಡೆಸಲಿದ್ದಾರೆ. 1993ರಲ್ಲಿ ಫೆಡರಲ್‌ ಏಜೆಂಟ್ಸ್‌ಗಳ ಮುತ್ತಿಗೆಯಿಂದ 51 ದಿನಗಳ ಹತ್ಯಾಕಾಂಡ ವ್ಯಾಕೊದಲ್ಲಿ ನಡೆದಿತ್ತು. ಹಾಗಾಗಿ ಇಲ್ಲಿನ ಜನ ಈ ತನಿಖಾಸಂಸ್ಥೆಗಳ ಬಗ್ಗೆ ಒಳ್ಳೆಯ ಭಾವನೆ ಹೊಂದಿಲ್ಲ.

2020ರಲ್ಲಿ ಟ್ರಂಪ್‌ ಗೆದ್ದಿದ್ದ ಮೆಕ್‌ಲೆನನ್‌ ಕೌಂಟಿಯ ಭಾಗವೇ ಆಗಿರುವ ವ್ಯಾಕೊ, ಈ ಬಾರಿಯೂ ಟ್ರಂಪ್‌ ಗೆಲುವಿಗೆ ಮುನ್ನುಡಿ ಬರೆಯುವ ಸಾಧ್ಯತೆಗಳಿವೆ. ಒಂದು ವೇಳೆ ಟ್ರಂಪ್‌ ಅಧ್ಯಕ್ಷೀಯ ಚುನಾವಣೆಯಲ್ಲಿ ಜಯಗಳಿಸಿದರೇ, ಅಮೆರಿಕ ಇತಿಹಾಸದಲ್ಲೇ ಕಾನೂನು ತನಿಖೆ ಎದುರಿಸಿ ಅಧ್ಯಕ್ಷಸ್ಥಾನಕ್ಕೇರಿದ ಇತಿಹಾಸ ಸೃಷ್ಟಿಸಲಿದ್ದಾರೆ.

ಭಾರತೀಯರಾದ ನಿಕ್ಕಿ ಹ್ಯಾಲೆ, ವಿವೇಕ್‌ ಪೈಪೋಟಿ
ಟ್ರಂಪ್‌ ಅದೆಷ್ಟೇ ಮುಂಚೆ ಅಧ್ಯಕ್ಷೀಯ ಚುನಾವಣೆಗೆ ಸಿದ್ಧವಾಗಿರಬಹುದು. ಆದರೆ ಸ್ಥಿತಿ ಅಷ್ಟು ಸುಲಭವಾಗಿಲ್ಲ. ಅಪಾರ ಬೆಂಬಲಿಗರನ್ನು ಹೊಂದಿದ್ದರೂ, ಅವರಿಗೆ ರಿಪಬ್ಲಿಕನ್‌ ಪಕ್ಷದೊಳಗೆಯೇ ಪೈಪೋಟಿ ಇದೆ. ಭಾರತೀಯ ಮೂಲದ ಪ್ರಭಾವಿ ರಾಜಕಾರಣಿ ನಿಕ್ಕಿ ಹ್ಯಾಲೆ, ಯುವ ಉದ್ಯಮಿ ವಿವೇಕ್‌ ರಾಮಸ್ವಾಮಿ ಕೂಡ ರಿಪಬ್ಲಿಕನ್‌ ಪಕ್ಷದ ಅಧ್ಯಕ್ಷೀಯ ಸ್ಥಾನದ ಆಕಾಂಕ್ಷಿಗಳೆಂದು ಈಗಾಗಲೇ ಖಚಿತಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next