Advertisement

ಬೈಡೆನ್ ಅಪಾಯಕಾರಿ ಅಜೆಂಡಾ ಮೊದಲೇ ಬಹಿರಂಗಪಡಿಸಿದ್ದೇನೆ: ಡೊನಾಲ್ಡ್ ಟ್ರಂಪ್

06:45 PM Oct 03, 2020 | Nagendra Trasi |

ವಾಷಿಂಗ್ಟನ್‌: ಅಮೆರಿಕದ ಕ್ಲೀವ್‌ಲ್ಯಾಂಡ್‌ನ‌ಲ್ಲಿ ಮಂಗಳವಾರ ನಡೆದ ಮೊದಲ ಅಧಿಕೃತ ಅಧ್ಯಕ್ಷೀಯ ಪ್ರಚಾರದಲ್ಲಿ ಜಯ ಗಳಿಸಿದ್ದು ತಾನೇ ಎಂದು ಅಧ್ಯಕ್ಷ
ಡೊನಾಲ್ಡ್‌ ಟ್ರಂಪ್‌ ಹೇಳಿಕೊಂಡಿದ್ದಾರೆ. ವಾಷಿಂಗ್ಟನ್ ನಲ್ಲಿ ಮಾತನಾಡಿದ ಅವರು, ಡೆಮಾಕ್ರಾಟಿಕ್‌ ಪಕ್ಷದ ಅಭ್ಯರ್ಥಿ ಜೋ ಬೈಡೆನ್‌ ಅವರು “ಹೊಂದಿರುವ
ಅಪಾಯಕಾರಿ ಅಜೆಂಡಾ’ವನ್ನು ಬಹಿರಂಗಗೊಳಿಸಿದ್ದಾಗಿ ಟ್ರಂಪ್‌ ಹೇಳಿಕೊಂಡಿದ್ದಾರೆ.

Advertisement

47 ವರ್ಷಗಳ ಕಾಲದ ಅವರ ಸಾರ್ವಜನಿಕ ಜೀವನದಲ್ಲಿ ಸುಳ್ಳುಗಳನ್ನೇ ಹೇಳುತ್ತಾ ಬಂದಿದ್ದಾಗಿ ಅಧ್ಯಕ್ಷರು ಟೀಕಿಸಿದ್ದಾರೆ.”ಉದ್ಯೋಗ ನೀಡಿಕೆಯ ವಿಚಾರದಲ್ಲಿ ಕೂಡ ಬೈಡೆನ್‌ ಸುಳ್ಳು ಭರವಸೆಗಳನ್ನೇ ನೀಡಿದ್ದಾರೆ.

ಅಮೆರಿಕವನ್ನು ಮುನ್ನಡೆಸಲು ಬಿಡೆನ್‌ ದುರ್ಬಲರು. ಮೊದಲ ಅಧಿಕೃತ ಪ್ರಚಾರದಲ್ಲಿಯೇ ಪ್ರತಿಸ್ಪರ್ಧಿ ಸೋತಿದ್ದಾರೆ.ಅದಕೆ R ಬೈಡೆನ್‌ಬೆಂಬಲಿಗರು ಮುಂದಿನ
ಜಂಟಿ ಪ್ರಚಾರ ಸಭೆಗಳನ್ನು ರದ್ದು ಮಾಡಿ ಎಂದು ಹೇಳಿದ್ದೇ ಸಾಕ್ಷಿ’ ಎಂದು ಟ್ರಂಪ್‌ ಹೇಳಿಕೊಂಡಿದ್ದಾರೆ.

ಮಂಗಳವಾರ ನಡೆದಿದ್ದ ಮೊದಲ ಅಧಿಕೃತ ಪ್ರಚಾರದಲ್ಲಿಯೇ ಭಾರೀ ಕೋಲಾಹಲ ಉಂಟಾಗಿದೆ. ಜತೆಗೆ ಅಧ್ಯಕ್ಷ ಟ್ರಂಪ್‌, ಪ್ರತಿಸ್ಪರ್ಧಿ ಜೋ ಬೈಡೆನ್‌
ಮಾತನಾಡುವ ವೇಳೆ ಅಡ್ಡಿಪಡಿಸಿದ ಘಟನೆ ಕೂಡ ನಡೆದಿದೆ.

ಗುರುವಾರದಿಂದ ಅಮೆರಿಕದಲ್ಲಿ ನೂತನ ಹಣಕಾಸು ವರ್ಷ ಶುರುವಾದ ಹಿನ್ನೆಲೆಯಲ್ಲಿ ಸರ್ಕಾರಿವೆಚ್ಚಕ್ಕೆಅನುಮೋದನೆನೀಡುವವಿಧೇಯಕಕ್ಕೆ
ಟ್ರಂಪ್‌ ಸಹಿ ಹಾಕಿದ್ದಾರೆ.

Advertisement

ಮತ್ತೂಂದೆಡೆ, ನ.3ರಂದು ನಡೆಯುವ ಚುನಾವಣೆ ನ್ಯಾಯಸಮ್ಮತವಾಗಿ ಇರಲಿದೆಯೇ ಎಂಬ ಬಗ್ಗೆ ಟ್ರಂಪ್‌ ಶಂಕೆ ವ್ಯಕ್ತಪಡಿಸಿದ್ದಾರೆಂದು ಡೆಮಾಕ್ರಾಟಿಕ್‌
ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಜೋ ಬೈಡೆನ್‌ ಟೀಕಿಸಿದ್ದಾರೆ. ಅವರಿಗೆ ಸೋಲುವ ಭೀತಿ ಉಂಟಾಗಿದ್ದರಿಂದಲೇ ಈ ಮಾತುಗಳನ್ನಾಡಿದ್ದಾರೆಂದು
ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next