Advertisement

ಟಾಟಾ ಕ್ರೋಮಾದಿಂದ ಸ್ವದೇಶಿ ಟ್ರೂ ವಯರ್ ಲೆಸ್‍ ಇಯರ್ ಬಡ್‍

07:29 PM Jul 18, 2022 | Team Udayavani |

ಭಾರತೀಯ ಗ್ರಾಹಕರಿಗೆ ಟಾಟಾ ಕಂಪೆನಿಯ ಉತ್ಪನ್ನಗಳು ಎಂದರೆ ಒಂದು ನಂಬಿಕೆ, ಅಭಿಮಾನ ಇದೆ. ಟಾಟಾ ಕಂಪೆನಿ ಎಲೆಕ್ಟ್ರಾನಿಕ್‍ ಉತ್ಪನ್ನಗಳ ಮಾರಾಟಕ್ಕಾಗಿ ಕ್ರೋಮಾ ಬ್ರಾಂಡ್‍ನಲ್ಲಿ ಸ್ಟೋರ್ ಗಳನ್ನು ತೆರೆದಿದೆ. ಇತ್ತೀಚಿಗೆ ಕ್ರೋಮಾ ಬ್ರಾಂಡ್‍ ಹೆಸರಿನಲ್ಲಿ ನಾನಾ ರೀತಿಯ ಎಲೆಕ್ಟ್ರಾನಿಕ್‍ ಗ್ಯಾಜೆಟ್‍ ಗಳು, ಅನೇಕ ಬಗೆಯ ಎಲೆಕ್ಟ್ರಿಕ್‍ ಉತ್ಪನ್ನಗಳನ್ನೂ ಮಾರಾಟ ಮಾಡುತ್ತಿದೆ. ಇದರಲ್ಲಿ ಟಿವಿ, ಟ್ರೂ ವಯರ್ ಲೆಸ್ ಇಯರ್ ಬಡ್ಸ್ , ಪವರ್ ಬ್ಯಾಂಕ್‍, ಇಯರ್ ಫೋನ್‍ ಇತ್ಯಾದಿ ಅಲ್ಲದೇ ಫ್ರಿಜ್‍. ಎಸೊ  ಮಿಕ್ಸರ್, ಎಲೆಕ್ಟ್ರಿಕ್‍ ಕೆಟಲ್‍ ಇತ್ಯಾದಿ ಸೇರಿವೆ.

Advertisement

ಹೀಗೆ ಕ್ರೋಮಾ ಬ್ರಾಂಡ್‍ ನಿಂದ ಇತ್ತೀಚಿಗೆ ಬಿಡುಗಡೆಯಾಗಿರುವ ಹೊಸ ಉತ್ಪನ್ನ ಕ್ರೋಮಾ ಟ್ರೂ  ವೈರ್ ಲೆಸ್‍ ಇಯರ್ ಬಡ್ಸ್. ಇದರ ದರ 1290 ರೂ. ಇದೆ. ಕ್ರೋಮಾ ಆಫ್‍ಲೈನ್ ‍ಹಾಗೂ ಆನ್‍ಲೈನ್‍ ಸ್ಟೋರ್ ಗಳಲ್ಲಿ ಮಾತ್ರವಲ್ಲದೇ, ಅಮೆಜಾನ್‍, ಫ್ಲಿಪ್‍ಕಾರ್ಟ್ ನಲ್ಲೂ ದೊರಕುತ್ತದೆ. ಇದು ಮೇಡ್‍ ಇನ್‍ ಇಂಡಿಯಾ ಸ್ವದೇಶಿ ಇಯರ್‍ ಬಡ್‍.  ಈ ಇಯರ್ ಬಡ್‍ ಗುಣ ವಿಶೇಷಗಳ ವಿವರ ಇಲ್ಲಿದೆ.

ವಿನ್ಯಾಸ:  ಈ ಇಯರ್ ಬಡ್‍ ನೋಡಲು ಥೇಟ್‍ ಆಪಲ್‍ ಇಯರ್ ಪಾಡ್ಸ್ ತರಹವೇ ಇದೆ! ಅದರ ಚಾರ್ಜಿಂಗ್‍ ಕೇಸ್‍ ಹಾಗೂ ಇಯರ್ ಬಡ್ಸ್ ಬಿಳಿಯ ಬಣ್ಣದ ನುಣುಪಾದ ವಿನ್ಯಾಸ ಹೊಂದಿವೆ. ಚಾರ್ಜಿಂಗ್‍ ಕೇಸ್‍ ನ ಮೇಲೆ ಬ್ಯಾಟರಿ ಎಷ್ಟು ಶೇಕಡಾ ಚಾರ್ಜ್‍ ಆಗಿದೆ ಎಂದು ತಿಳಿಯಲು ನಾಲ್ಕು ಪುಟ್ಟ ಪುಟ್ಟ ಲೈಟ್‍ಗಳಿವೆ. ಈ ನಾಲ್ಕು ಲೈಟ್‍ ಗಳ ಮಿನುಗುವಿಕೆ ನಿಂತ ಬಳಿಕ ಪೂರ್ತಿ ಚಾರ್ಜ್‍ ಆಗಿದೆ ಎಂದರ್ಥ. ಕೇಸ್‍ನ ತಳಭಾಗದಲ್ಲಿ ಟೈಪ್‍ ಸಿ ಯುಎಸ್‍ಬಿ ಪೋರ್ಟ್‍ ಇದೆ.

ಇಯರ್‍ ಬಡ್‍ ಕಡ್ಡಿಗಳು ಹೆಚ್ಚು ಉದ್ದವಿಲ್ಲದೇ ಪುಟ್ಟದಾಗಿವೆ. ಈ ಇಯರ್ ಬಡ್‍ಗಳು ಕಿವಿಯ ಒಳಭಾಗಕ್ಕೆ ಹಾಕಿಕೊಳ್ಳುವ ರೀತಿಯದಲ್ಲ. ಹೊರ ಕಿವಿಯಲ್ಲಿ ಕೂರುವ ಇಯರ್ ಪಾಡ್‍ ಮಾದರಿಯದ್ದು. ಕೇಸ್‍ ಹಾಗೂ ಇಯರ್‍ ಬಡ್‍ನ ವಿನ್ಯಾಸ ಸರಳವಾಗಿದೆ.

ಸಂಪರ್ಕ: ಬ್ಲೂಟೂತ್‍  5.1 ಹೊಂದಿದೆ. ತುಂಬಾ ವೇಗವಾಗಿ ಮೊಬೈಲ್‍ಗೆ ಸಂಪರ್ಕ ಕಲ್ಪಿಸುತ್ತದೆ. ಕೇಸ್‍ನಿಂದ ಇಯರ್ ಬಡ್‍ ತೆಗೆದಂತೆ , ಮೊಬೈಲ್‍ ನ ಬ್ಲೂಟೂತ್‍ ಲಿಸ್ಟ್ ನಲ್ಲಿ ಇದರ ಹೆಸರು ಕಾಣುತ್ತದೆ.  ಅದನ್ನು ಟಚ್‍ ಮಾಡಿದರೆ ಫೋನ್‍ ಗೆ ಸಂಪರ್ಕವಾಗುತ್ತದೆ. ಹೀಗಾಗಿ ಸಂಪರ್ಕ ಬಹಳ ಸುಲಭವಾಗಿ ಆಗುತ್ತದೆ.

Advertisement

ಧ್ವನಿ ಗುಣಮಟ್ಟ: ಈ ಇಯರ್ ಬಡ್‍ ಗಳು 13 ಎಂಎಂ ಡ್ರೈವರ್ ಹೊಂದಿವೆ.  ಮೊದಲೇ ಹೇಳಿದಂತೆ ಇದು ಕಿವಿಯ ಒಳಗೆ ಕೂರದ, ಕಿವಿಯ ಹೊರಭಾಗದಲ್ಲೇ ಇರುವ ಇಯರ್ ಬಡ್‍ ಆದ್ದರಿಂದ ಸಂಗೀತದ ಬಾಸ್‍ ಎಫೆಕ್ಟ್ ಅಷ್ಟಾಗಿ ಕೇಳಿಬರಲ್ಲ. ಆದರೆ ಬಾಸ್‍ ಹೊರತುಪಡಿಸಿದರೆ ಹಾಡುಗಳು ಸ್ಪಷ್ಟವಾಗಿ ಕೇಳುತ್ತವೆ.  ಇದು ಕಿವಿಯೊಳಗೆ ಕೂರುವ ಇಯರ್ ಬಡ್‍ ಕಿರಿಕಿರಿಯಾಗುತ್ತದೆ, ವಾತಾವರಣದ ಶಬ್ದ ಕೇಳುವುದಿಲ್ಲ ಎಂದು ದೂರುವವರಿಗೆ ಇಂಥ ಇಯರ್ ಬಡ್‍ ಗಳು ಸೂಕ್ತ. ಹಾಗಾಗಿ 1300 ರೂ. ದರಪಟ್ಟಿಯ ದೃಷ್ಟಿಯಲ್ಲಿ ನೋಡಬಹುದಾದರೆ ಇದು ಪರವಾಗಿಲ್ಲ ಎಂದು ಹೇಳಬಹುದು.

ಎರಡು ಮೈಕ್ರೋಫೊನ್‍ ಗಳನ್ನು ಇಯರ್ ಬಡ್ ‍ಹೊಂದಿದೆ. ಹೀಗಾಗಿ ಮಾತನಾಡಲು ಸಹ  ಈ ಇಯರ್ ಬಡ್‍ ಬಳಸಬಹುದು. ಗಾಳಿಯಿರುವ ಹೊರ ಆವರಣದಲ್ಲಿ ಆ ಕಡೆಯವರಿಗೆ ಸ್ವಲ್ಪ ಕರೆ ಸ್ಪಷ್ಟವಾಗಿ ಕೇಳುವುದಿಲ್ಲ. ಒಳಾಂಗಣದಲ್ಲಿ ಕರೆ ಮಾಡಲು ಬಳಸಬಹುದು.

ಬ್ಯಾಟರಿ: ಇದರ ಕೇಸ್‍ನಲ್ಲಿ 20 ಗಂಟೆಗಳ ಬ್ಯಾಟರಿ ಇರುತ್ತದೆ. ಬಡ್‍ ಗಳಲ್ಲಿ 4.5 ಗಂಟೆಗಳ ಕಾಲ ಬ್ಯಾಟರಿ ಬಾಳಿಕೆ ಬರುತ್ತದೆ.

ಈಗ ಟ್ರೂ ವಯರ್  ಲೆಸ್‍ ಇಯರ್  ಬಡ್‍ ಗಳ ಟ್ರೆಂಡ್‍ ಇದೆ. ಅಗ್ಗದ ದರದಲ್ಲಿ ಒಂದು ಸಾವಿರದ ಆಸುಪಾಸಿನಲ್ಲಿ ಟಿಡಬ್ಲೂಎಸ್‍ ಬೇಕು, ಸ್ವದೇಶಿ ಬ್ರಾಂಡ್‍ ಬೇಕು ಎನ್ನುವವರು ಕ್ರೋಮಾ ಇಯರ್ ಬಡ್‍ ಪರಿಗಣಿಸಬಹುದು.

-ಕೆ.ಎಸ್‍. ಬನಶಂಕರ ಆರಾಧ್ಯ

Advertisement

Udayavani is now on Telegram. Click here to join our channel and stay updated with the latest news.

Next