ವಾಡಿ: ಸಮಾಜವನ್ನು ಬದಲಿಸುವ ಹಂಬಲ ಹೊತ್ತು ನೈಜ ಬವಣೆಯನ್ನೆ ಬರೆದು ಬದುಕಿದ ನಿಜಶರಣ ಅಂಬಿಗರ ಚೌಡಯ್ಯನ ಜೀವನ ನಮಗೆ ಆದರ್ಶವಾಗಿದೆ ಎಂದು ಹಳಕರ್ಟಿ ಸಿದ್ದೇಶ್ವರ ಧ್ಯಾನ ಧಾಮದ ಶ್ರೀ ರಾಜಶೇಖರ ಸ್ವಾಮೀಜಿ ನುಡಿದರು.
ನಿಜಶರಣ ಅಂಬಿಗರ ಚೌಡಯ್ಯ ಜಯಂತಿ ನಿಮಿತ್ತ ಕೋಲಿ ಸಮಾಜದ ವತಿಯಿಂದ ಪಟ್ಟಣದ ಚೌಡೇಶ್ವರ ಕಾಲೋನಿಯಲ್ಲಿ ಏರ್ಪಡಿಸಲಾಗಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರದ ಬಹಿರಂಗ ಸಭೆ ಸಾನ್ನಿಧ್ಯ ವಹಿಸಿ ಸ್ವಾಮೀಜಿ ಆಶೀರ್ವಚನ ನೀಡಿದರು. ಮಾನವೀಯ ಬದುಕು ಮರೆತವರನ್ನು ಎಚ್ಚರಿಸಲು ವಚನ ಸಾಹಿತ್ಯದ ಮೂಲಕ ಕ್ರಾಂತಿಕಾರಕ ಸಂದೇಶ ನೀಡಿದ ಚೌಡಯ್ಯ, 12ನೇ ಶತಮಾನದ ವಚನ ಚಳವಳಿಗೆ ಒಂದು ಶಕ್ತಿಯಾಗಿದ್ದರು. ಅಂದಿನ ಸಮಾಜದ ಲೋಪಗಳನ್ನು ಸಾಹಿತ್ಯದ ಮೂಲಕ ಎತ್ತಿ ತೋರಿಸಿ ತಿದ್ದಲು ಶ್ರಮಿಸಿದ್ದರು. ಅವರ ಜಯಂತಿಗಳು ಕಾಟಾಚಾರದಿಂದ ಕೂಡಿರದೆ, ಅರ್ಥಪೂರ್ಣವಾಗಿರಬೇಕು ಎಂದು ಹೇಳಿದರು.
ಬಿಜೆಪಿ ಅಧ್ಯಕ್ಷ ಬಸವರಾಜ ಪಂಚಾಳ, ಕಾಂಗ್ರೆಸ್ ಮುಖಂಡ ಟೋಪಣ್ಣ ಕೋಮಟೆ ಮಾತನಾಡಿದರು. ಪುರಸಭೆ ಉಪಾಧ್ಯಕ್ಷ ಮಲ್ಲಯ್ಯ ಗುತ್ತೇದಾರ, ಜಂಗಮ ಸಮಾಜದ ತಾಲೂಕು ಅಧ್ಯಕ್ಷ ನೀಲಯ್ಯಸ್ವಾಮಿ ಮಠಪತಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸೈಯ್ಯದ್ ಮಹೆಮೂದ್ ಸಾಹೇಬ, ತಾಲೂಕು ಆರೋಗ್ಯ ಇಲಾಖೆಯ ಡಾ| ಪವಾರ, ಡಾ| ಜುನೈದ್ ಖಾನ್, ಡಾ| ಸಹಾರಾ ಮಝರ್, ಮುಸ್ಲಿಂ ಸಮಾಜದ ಅಧ್ಯಕ್ಷ ಮುಕುºಲ್ ಜಾನಿ, ಎಪಿಎಂಸಿ ಮಾಜಿ ಅಧ್ಯಕ್ಷ ಶಂಕ್ರಯ್ಯಸ್ವಾಮಿ ಮದರಿ, ವಾಡಿ-ಶಹಾಬಾದ ನಗರ ಯೋಜನೆ ಪ್ರಾಧಿಕಾರ ಮಾಜಿ ಅಧ್ಯಕ್ಷ ಚಂದ್ರಸೇನ ಮೇನಗಾರ, ಪುರಸಭೆ ಸದಸ್ಯರಾದ ಸುಗಂದಾ ನಾಗೇಂದ್ರ, ರಾಜೇಶ ಅಗರವಾಲ, ಭೀಮಶಾ ಜಿರೊಳ್ಳಿ, ತಿಮ್ಮಯ್ಯ ಪವಾರ, ಮರಗಪ್ಪ ಭೋವಿ, ಭೀಮರಾಯ ನಾಯಕೋಡಿ, ಪೃಥ್ವಿರಾಜ ಸೂರ್ಯವಂಶಿ, ಮುಖಂಡರಾದ ಬಾಬುಮಿಯ್ನಾ, ರಾಧಾಕೃಷ್ಣ ಅಂಬೇಕರ, ಬಸವರಾಜ ಚಿತ್ತಾಪುರ, ಭೀಮರಾಯ ಚಿತ್ತಾಪುರ, ದೇವಿಂದ್ರ ನಾಟೀಕಾರ, ಬಸವರಾಜ ಭಂಕೂರ, ಶಿವಪ್ಪ ಕಬ್ಬೇರ, ಭೀಮರಾಯ ನಾಟೀಕಾರ, ರಘು ನಾಯಕೋಡಿ, ದೇವಿಂದ್ರ ಕರದಳ್ಳಿ, ವಿಜಯಕುಮಾರ ಸಿಂಗೆ, ಸೂರ್ಯಕಾಂತ ರದ್ದೇವಾಡಿ, ಇಂದ್ರಜೀತ ಸಿಂಗೆ, ಶರಣಬಸು ಸಿರೂರಕರ ಪಾಲ್ಗೊಂಡಿದ್ದರು.
ಕೋಲಿ ಸಮಾಜದ ಅಧ್ಯಕ್ಷ ನಾಗೇಂದ್ರ ಜೈಗಂಗಾ ಸ್ವಾಗತಿಸಿದರು. ಪುರಸಭೆ ಸದಸ್ಯ ದೇವಿಂದ್ರ ಕರದಳ್ಳಿ ನಿರೂಪಿಸಿದರು. ದೇವಿಂದ್ರಪ್ಪ ನಾಟೀಕಾರ ವಂದಿಸಿದರು. ಆರೋಗ್ಯ ಶಿಬಿರದಲ್ಲಿ ತಾಲೂಕು ಆರೋಗ್ಯ ಇಲಾಖೆ ವೈದ್ಯ ಸಿಬ್ಬಂದಿ 140ಕ್ಕೂ ಹೆಚ್ಚು ರೋಗಿಗಳ ತಪಾಸಣೆ ಮಾಡಿ ಚಿಕಿತ್ಸೆ ನೀಡಿದರು.