ಬ್ರಹ್ಮಾವರ: ದೇವಸ್ಥಾನ ಭೇಟಿ ಜತೆಗೆ ಮನುಷ್ಯನ ಸ್ವಪ್ರಯತ್ನ ಇದ್ದಾಗ ನಿಜವಾದ ಶಾಂತಿ, ನೆಮ್ಮದಿ ಮನಸ್ಸಿಗೆ ಸಿಗುತ್ತದೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಹೇಳಿದರು.
ಉಪ್ಪಿನಕೋಟೆಯಲ್ಲಿ ಗ್ರಾಮಾಭಿವೃದ್ಧಿ ಯೋಜನೆಯ ಬ್ರಹ್ಮಾವರ ತಾ| ಕಚೇರಿ ಉದ್ಘಾಟಿಸಿ ಅವರು ಮಾತನಾಡಿದರು.
ಕರ್ತವ್ಯ ಪ್ರಜ್ಞೆ ಬೆಳೆಸುವುದು ಗ್ರಾಮಾಭಿವೃದ್ಧಿ ಯೋಜನೆಯ ಮುಖ್ಯ ಉದ್ದೇಶ. ಸಂಘಟನೆಯಿಂದ ಜವಾಬ್ದಾರಿ, ಹೊಣೆಗಾರಿಕೆ ಜನರಲ್ಲಿ ಬಂದಿದೆ. ಪರಿವರ್ತನೆ ಆಗಿದೆ. ಸಮಾಜದಲ್ಲಿ ಮಹಿಳೆಯರಿಗೆ ಸಮಾನತೆ, ಉನ್ನತ ಸ್ಥಾನ ಯೋಜನೆ ನೀಡಿದ್ದು ಅನೇಕ ಮಹಿಳೆಯರು ಸ್ವಾವಲಂಬಿಯಾಗಿದ್ದಾರೆ ಎಂದರು.
ಸಮಾರಂಭದಲ್ಲಿ ವಾರಂಬಳ್ಳಿ ಗ್ರಾ.ಪಂ. ಅಧ್ಯಕ್ಷ ನವೀನ್‌ಚಂದ್ರ ನಾಯಕ್, ಜನಜಾಗೃತಿ ವೇದಿಕೆಯ ಅಧ್ಯಕ್ಷ ನವೀನ್, ಬ್ರಹ್ಮಾವರ ವಲಯ ಅಧ್ಯಕ್ಷ ರಾಜು ಪೂಜಾರಿ ಉಪ್ಪೂರು, ಸ್ಥಳೀಯರಾದ ಜಗನ್ನಾಥ ಪೂಜಾರಿ, ಯೋಜನೆಯ ಉಡುಪಿ ಪ್ರಾದೇಶಿಕ ನಿರ್ದೇಶಕ ಕೆ. ಮಹಾವೀರ ಅಜ್ರಿ, ಜಿಲ್ಲಾ ನಿರ್ದೇಶಕ ಗಣೇಶ್ ಉಪಸ್ಥಿತರಿದ್ದರು.
ಕಾರ್ಯನಿರ್ವಾಹಕ ನಿರ್ದೇಶಕ ಡಾ| ಎಲ್. ಎಚ್.ಮಂಜುನಾಥ್ ಸ್ವಾಗತಿಸಿ, ಯೋಜನಾಧಿಕಾರಿ ದಿನೇಶ್ ಶೇರಿಗಾರ್ ವಂದಿಸಿದರು. ಕೊಕ್ಕರ್ಣೆ ವಲಯದ ಮೇಲ್ವಿಚಾರಕ ಹರೀಶ್ ನಿರೂಪಿಸಿದರು.