Advertisement
ಇಂದು ಟ್ರೂ ಕಾಲರ್ ಎಂಬುದು ಪ್ರಪಂಚದಾದ್ಯಂತ ಸದ್ದು ಮಾಡುತ್ತಿದೆ. ಕಾರಣವೇನೆಂದರೇ ಇದಕ್ಕೆ ತಿಂಗಳಿನಲ್ಲಿ ಸುಮಾರು 250 ಮಿಲಿಯನ್ ಸಕ್ರಿಯ ಬಳಕೆದಾರರಿದ್ದು, ಭಾರತದಲ್ಲೇ 185 ಮಿಲಿಯನ್ ಜನರು ನಿಯಮಿತವಾಗಿ ಬಳಸುತ್ತಾರೆ. ತಿಂಗಳ ಸಕ್ರಿಯ ಬಳಕೆದಾರರನ್ನು MAU (monthly Active users) ಎಂದು ಪರಿಗಣಿಸಲಾಗುತ್ತದೆ.
Related Articles
Advertisement
ಎಲ್ಲರೊಂದಿಗಿನ ಫೋನ್ ಸಂವಹನವನ್ನು ಉತ್ಕೃಷ್ಟಗೊಳಿಸಿಲು ಟ್ರೂಕಾಲರ್ ಅನ್ನು ರೂಪಿಸಲಾಗಿದೆ. ಕಳೆದೊಂದು ವರ್ಷದಿಂದ ಈ ಅಪ್ಲಿಕೇಷನ್ ಅತ್ಯುತ್ತಮ ಬೆಳವಣಿಗೆಯನ್ನು ಕಂಡಿದೆ. ಟ್ರೂ ಕಾಲರ್ ಸ್ಥಾಪನೆಯಾಗಿದ್ದೇ ಕಾಲರ್ ಐಡಿ ಗುರುತಿಸಲು. ಅದರೀಗ ಇದೀಗ SMS ಬ್ಲಾಕಿಂಗ್ ಸೇರಿದಂತೆ ಅತ್ಯುತ್ತಮ ಫೀಚರ್ ಹೊಂದಿದ್ದೇವೆ. ಇದನ್ನು ಮುಂದಿನ ಹಂತಕ್ಕೆ ಕೊಂಡೊಯ್ಯಲು ಉತ್ಸುಕರಾಗಿದ್ದೇವೆ. ಬಳಕೆದಾರರು ನಮ್ಮ ಮೇಲಿರಿಸಿದ ನಂಬಿಕೆಗೆ ಕೃತಜ್ಞರಾಗಿದ್ದೇವೆ ಎಂದು ಟ್ರೂ ಕಾಲರ್ ಸಿಇಒ ಮತ್ತು ಸಹ ಸಂಸ್ಥಾಪಕ ಅಲನ್ ಮಮೇದಿ ತಿಳಿಸಿದ್ದಾರೆ.
ಟ್ರೂ ಕಾಲರ್ ಮುಖ್ಯ ಕಚೇರಿ ಸ್ವೀಡನ್ ನ ಸ್ಟಾಕ್ ಹೋಮ್ ನಲ್ಲಿದೆ. ಭಾರತದಲ್ಲಿ ಬೆಂಗಳೂರು, ಗುರುಗಾಂವ್, ಮುಂಬೈ ನಲ್ಲೂ ಕಚೇರಿಗಳನ್ನು ಹೊಂದಿದೆ. 2009ರಲ್ಲಿ ಅಲನ್ ಮಮೇದಿ ಮತ್ತು ನಮಿ ಜರಿಂಗ್ ಹಾಮ್ ಸೇರಿ ಈ ಕಂಪೆನಿಯನ್ನು ಆರಂಭಿಸಿದರು.
ಟ್ರೂ ಕಾಲರ್ ಉಚಿತ ಅಪ್ಲಿಕೇಶನ್ ಆಗಿದ್ದು, ಕಾಲರ್ ಗಳನ್ನು ಗುರುತಿಸಲು ಮತ್ತು ಸ್ಪ್ಯಾಮ್ ಕರೆಗಳನ್ನು ಫೀಲ್ಟರ್ ಮಾಡಲು ನೆರವಾಗುತ್ತದೆ. ಇದು ಯಾವುದೇ ಮೊಬೈಲ್ ನಂಬರ್ ಗಳನ್ನು ನಿರ್ಬಂಧಿಸುವುದಿಲ್ಲ. ಬದಲಿಗೆ ಕೇವಲ ಗುರುತಿಸವಿಕೆ ಮತ್ತು ಮ್ಯಾನುವಲ್ ಬ್ಲಾಕ್ ಮಾಡಲು ನೆರವಾಗುತ್ತದೆ. ಇದರಲ್ಲಿ ಕಾಲರ್ ಐಡೆಂಟಿಫಿಕೇಶನ್, ಕಾಲ್ ಬ್ಲಾಕಿಂಗ್, ಫ್ಲ್ಯಾಶ್ ಮೆಸೆಂಜಿಂಗ್, ಕಾಲ್ ರೆಕಾರ್ಡಿಂಗ್ ಮುಂತಾದ ಹಲವು ಆಯ್ಕೆಗಳಿವೆ.