Advertisement

ರಸ್ತೆ ಕಾಮಗಾರಿ ವೇಳೆ ಹೊಂಡಕ್ಕೆ ಉರುಳಿದ ಟ್ರಕ್: ನಾಲ್ವರು ಕಾರ್ಮಿಕರಿಗೆ ಗಂಭೀರ ಗಾಯ

05:44 PM Feb 06, 2023 | Team Udayavani |

ಪಣಜಿ: ರಸ್ತೆಯ ಪಕ್ಕದ ಹೊಂಡದಲ್ಲಿ ಚಕ್ರ ಸಿಲುಕಿ ಇಟ್ಟಿಗೆಗಳನ್ನು ಸಾಗಿಸುತ್ತಿದ್ದ ಟ್ರಕ್ ಪಲ್ಟಿಯಾಗಿರುವ ಘಟಕೆ ಗೋವಾ ರಾಜಧಾನಿ ಪಣಜಿಯಲ್ಲಿ ನಡೆದಿದೆ.

Advertisement

ಸೋಮವಾರ ಮಧ್ಯಾಹ್ನ 2 ಗಂಟೆ ಸುಮಾರಿಗೆ ಕಾಕುಲೋ ಮಾಲ್ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಘಟನೆಯಲ್ಲಿ 4 ಕಾರ್ಮಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಕಳೆದ ಐದಾರು ತಿಂಗಳಿಂದ ಈ ರಸ್ತೆಯ ಕಾಮಗಾರಿ ನಡೆಯುತ್ತಿದೆ. ರಸ್ತೆಯ ಎರಡೂ ಬದಿಗಳನ್ನು ಅಗೆಯಲಾಗಿದೆ. ಇಟ್ಟಿಗೆಗಳನ್ನು ಹೇರಿಕೊಂಡು ಬಂದ ಟಿಪ್ಪರ್ ರಸ್ತೆಯಲ್ಲಿ ಅಗೆದ ಹೊಂಡಕ್ಕೆ ಬಿದ್ದಿದೆ ಪರಿಣಾಮ ಹೊಂಡದಲ್ಲಿ ಕೆಲಸ ಮಾಡುತ್ತಿದ್ದ ನಾಲ್ವರು ಕಾರ್ಮಿಕರು ಗಂಭೀರ ಗಾಯಗೊಂಡಿದ್ದು ಕೂಡಲೇ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

ಘಟನೆಯಿಂದ ಲಾರಿಯ ಹಿಂಬದಿ ಚಕ್ರ ಸಂಪೂರ್ಣ ಹಳ್ಳದಲ್ಲಿ ಸಿಲುಕಿಕೊಂಡಿದೆ. ಲಾರಿಯಲ್ಲಿದ್ದ ಇಟ್ಟಿಗೆಗಳು ಹೊಂಡಕ್ಕೆ ಬಿದ್ದಿವೆ.

ಏತನ್ಮಧ್ಯೆ, ಪಣಜಿ ಮೇಯರ್ ರೋಹಿತ್ ಮೊನ್ಸೆರಾಟ್ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಈ ರಸ್ತೆಯಲ್ಲಿ ಬ್ಯಾರಿಕೇಡ್ ಹಾಕಿ ಸಂಚಾರ ಬಂದ್ ಮಾಡಲಾಗಿದೆ. ಈ ಟ್ರಕ್‍ನಲ್ಲಿರುವ ವಸ್ತುಗಳನ್ನು ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಕೆಲಸಕ್ಕಾಗಿ ಸಾಗಿಸಲಾಗುತ್ತಿದೆಯೇ ಎಂದು ಕೇಳಿದಾಗ, ಮಾನ್ಸೆರಾಟ್ ರವರು ನನಗೆ ಅದರ ಬಗ್ಗೆ ತಿಳಿದಿಲ್ಲ ಎಂದು ಹೇಳಿದರು.

Advertisement

ಇದನ್ನೂ ಓದಿ: 2 ಕಿ.ಮೀ. ಉದ್ದದ ರೈಲ್ವೆ ಟ್ರ್ಯಾಕನ್ನೇ ಕದ್ದ ಖತರ್ನಾಕ್ ಕಳ್ಳರು… ಇಬ್ಬರು ಅಧಿಕಾರಿಗಳ ವಜಾ

Advertisement

Udayavani is now on Telegram. Click here to join our channel and stay updated with the latest news.

Next