ಮಧ್ಯಪ್ರದೇಶ: ಬಸ್ ನಿಲ್ದಾಣದಲ್ಲಿ ಜನರ ಮೇಲೆ ಟ್ರಕ್ ಡಿಕ್ಕಿ ಹೊಡೆದು 6 ಮಂದಿ ಮೃತಪಟ್ಟು, 12 ಮಂದಿ ಗಾಯಗೊಂಡ ಘಟನೆ ಇಲ್ಲಿನ ರತ್ಲಾಮ್ ಜಿಲ್ಲೆಯಲ್ಲಿ ಸಂಭವಿಸಿದೆ.
Advertisement
ರತ್ಲಂ ಜಿಲ್ಲೆಯಿಂದ 35 ಕಿ.ಮೀ. ದೂರದಲ್ಲಿರುವ ರತ್ಲಾಮ್-ಲೆಬಾದ್ ರಸ್ತೆಯಲ್ಲಿರುವ ಸತ್ರುಂಡಾ ಗ್ರಾಮದ ಬಳಿಯ ಟ್ರಾಫಿಕ್ ನಲ್ಲಿ ಈ ಅಪಘಾತ ಸಂಭವಿಸಿದೆ.
ರತ್ಲಾಮ್‌ನಿಂದ ಬದ್ನಾವರ್‌ಗೆ ಪ್ರಯಾಣಿಸುತ್ತಿದ್ದಾಗ ಟ್ರಕ್ ನ ಚಕ್ರ ಒಡೆದು ವೇಗವಾಗಿ ಬಂದ ವಾಹನ ಟ್ರಾಫಿಕ್ ಪಕ್ಕದಲ್ಲಿದ್ದ ಬಸ್ ನಿಲ್ದಾಣದಲ್ಲಿ ಕಾಯುತ್ತಿದ್ದ ಜನರ ಗುಂಪಿಗೆ ನುಗ್ಗಿದೆ ಎಂದು ತಿಳಿದು ಬಂದಿದೆ.
ಗಾಯಗೊಂಡವರನ್ನು ಚಿಕಿತ್ಸೆಗಾಗಿ ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ.