Advertisement

ಗುಜರಾತ್‌: ಟ್ರಕ್‌ ಗಟಾರಕ್ಕೆ ಬಿದ್ದು 28 ಮಂದಿ ದುರ್ಮರಣ 

10:38 AM Mar 06, 2018 | |

ಭಾವ್‌ನಗರ್‌: ಟ್ರಕ್ಕೊಂದು ನಿಯಂತ್ರಣ ತಪ್ಪಿ ಕೊಳಚೆ ನೀರು ತುಂಬಿದ್ದ ಗಟಾರಕ್ಕೆ ಬಿದ್ದ ಪರಿಣಾಮ 25 ಮಂದಿ ದಾರುಣವಾಗಿ ಸ್ಥಳದಲ್ಲೇ ಸಾವನ್ನಪ್ಪಿದ ಘೋರ ದುರಂತ ಮಂಗಳವಾರ ಬೆಳ್ಳಂಬೆಳಗ್ಗೆ ನಡೆದಿದೆ.

Advertisement

ಮದುವೆ ಸಮಾರಂಭಕ್ಕಾಗಿ ಜನರನ್ನು ಸಾಗಿಸುತ್ತಿದ್ದ ಟ್ರಕ್‌  ಭಾವ್‌ನಗರ್‌ -ರಾಜ್‌ಕೋಟ್‌ ಹೆದ್ದಾರಿಯ ಉಮ್ರಾಲಾ ಎಂಬಲ್ಲಿ ನಿಯಂತ್ರಣ ತಪ್ಪಿ ಗಟಾರಕ್ಕೆ ಬಿದ್ದಿದ್ದು  ಸ್ಥಳದಲ್ಲೇ ಹಲವರು ಕೊನೆಯುಸಿರೆಳೆದಿದ್ದಾರೆ ಎಂದು ವರದಿಯಾಗಿದೆ.

12 ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದು ಅವರನ್ನು ರಕ್ಷಣಾ ಕಾರ್ಯ ನಡೆಸಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಸಾವನ್ನಪ್ಪಿದ ದುರ್ದೈವಿಗಳಲ್ಲಿ ಹೆಚ್ಚಿನವರು ಮಹಿಳೆಯರು ಮತ್ತು ಮಕ್ಕಳು ಎಂದು ತಿಳಿದು ಬಂದಿದೆ. 

ರಕ್ಷಣಾ ಕಾರ್ಯದಲ್ಲಿ ಸ್ಥಳೀಯರು,ಪೊಲೀಸರು,ಅಗ್ನಿಶಾಮಕ ದಳದ ಸಿಬಂದಿಗಳು ಪಾಲ್ಗೊಂಡಿದ್ದಾರೆ. 

Advertisement
Advertisement

Udayavani is now on Telegram. Click here to join our channel and stay updated with the latest news.

Next