Advertisement

ಕಾರನ್ನು 3.ಕಿ.ಮೀ ಎಳೆದೊಯ್ದ ಟ್ರಕ್‌ ! ಪಾನಮತ್ತ ಟ್ರಕ್‌ ಚಾಲಕನ ಅವಾಂತರ

09:24 PM Feb 13, 2023 | Team Udayavani |

ಲಕ್ನೋ: ಕಾರಿಗೆ ಸಿಕ್ಕಿ ಬಿದ್ದ ಯುವತಿಯನ್ನು ಕಿಲೋಮೀಟರ್‌ಗಟ್ಟಲೆ ಎಳೆದೊಯ್ದು, ಆಕೆ ಮೃತಪಟ್ಟ ಘಟನೆ ಬೆನ್ನಲ್ಲೇ, ದೇಶದಲ್ಲೇ ಇದೇ ಮಾದರಿಯ ಮತ್ತೂಂದು ಘಟನೆ ವರದಿಯಾಗಿದೆ.

Advertisement

22 ಚಕ್ರದ ಟ್ರಕ್‌ವೊಂದು ಕಾರಿಗೆ ಡಿಕ್ಕಿ ಹೊಡೆದಿದ್ದಲ್ಲದೇ, 3ಕಿ.ಮೀ. ದೂರದವರೆಗೆ ಕಾರನ್ನು ಎಳೆದೊಯ್ದಿರುವ ಭೀಕರ ದೃಶ್ಯ ಜನರನ್ನು ಬೆಚ್ಚಿಬೀಳಿಸಿದೆ. ಉತ್ತರ ಪ್ರದೇಶದ ಮೀರತ್‌ನಲ್ಲಿ ಘಟನೆ ನಡೆದಿದ್ದು, ಪ್ರತ್ಯಕ್ಷ ದರ್ಶಿಯೊಬ್ಬರು ಮೊಬೈಲ್‌ನಲ್ಲಿ ವಿಡಿಯೋ ಸೆರೆ ಹಿಡಿದಿದ್ದಾರೆ.

ಪಾನಮತ್ತನಾಗಿದ್ದ ಟ್ರಕ್‌ ಚಾಲಕ ಕಾರಿಗೆ ಡಿಕ್ಕಿ ಹೊಡೆದಿದ್ದಾನೆ. ಕಾರಿನಲ್ಲಿದ್ದವರಿಗೂ, ಟ್ರಕ್‌ ಚಾಲಕನಿಗೂ ವಾಗ್ವಾದ ನಡೆದಿದೆ. ಈ ವೇಳೆ ಕೋಪಗೊಂಡ ಚಾಲಕ, ಕಾರಿನ ಸಮೇತ ಟ್ರಕ್‌ ಚಲಾಯಿಸಿದ್ದು, 3 ಕಿ.ಮೀ.ವರೆಗೆ ಕಾರನ್ನು ಎಳೆದೊಯ್ದಿದ್ದಾನೆ. ಅದೃಷ್ಟವಶಾತ್‌ ಕಾರಿನಲ್ಲಿದ್ದ ನಾಲ್ಕು ಮಂದಿ ಸರಿಯಾದ ಸಮಯದಲ್ಲಿ ಕಾರಿನಿಂದ ಇಳಿದಿದ್ದರಿಂದ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಇದನ್ನೂ ಓದಿ: ಬಾವಿಗೆ ಬಿದ್ದ ಚಿರತೆ ಮರಿ: ಬೋನಿನೊಳಗಿಳಿದು ಸೆರೆ ಹಿಡಿದ ವೈಲ್ಡ್ ಲೈಫ್ ಪಶು ವೈದ್ಯೆಯ ಸಾಹಸ

Advertisement

Udayavani is now on Telegram. Click here to join our channel and stay updated with the latest news.

Next