ಮುಂಬೈ: ಪೆಟ್ರೋಲ್ ಬೆಲೆ ಏರಿಕೆಯಾಗಿದೆಯೆಂದು ಮಹಾರಾಷ್ಟ್ರದ ವ್ಯಕ್ತಿಯೊಬ್ಬರು ದಿನನಿತ್ಯ ಸಂಚಾರ ಮಾಡುವುದಕ್ಕೆಂದು ಕುದುರೆಯನ್ನೇ ಖರೀದಿಸಿದ್ದಾರೆ.
ಔರಂಗಾಬಾದ್‌ನ ಕಾಲೇಜೊಂದರಲ್ಲಿ ಪ್ರಯೋಗಾಲಯದ ಸಹಾಯಕರಾಗಿರುವ ಶೇಖ್ ಯೂಸುಫ್ ಅವರ ಬೈಕು ಕೊರೊನಾ ಲಾಕ್‌ಡೌನ್ ಸಮಯದಲ್ಲಿ ಹಾಳಾಗಿತ್ತಂತೆ. ಆಗ ಅದನ್ನು ಸರಿ ಮಾಡಿಕೊಡುವುದಕ್ಕೆ ಗ್ಯಾರೇಜ್‌ಗಳೂ ತೆರೆದಿರಲಿಲ್ಲ.
ಹಾಗಾಗಿ ಅವರು 40,000 ರೂ. ಕೊಟ್ಟು ಕುದುರೆಯೊಂದನ್ನು ಖರೀದಿಸಿದ್ದಾರೆ. ಅದರಲ್ಲೇ ಸಂಚರಿಸಲು ಆರಂಭಿಸಿದ್ದಾರೆ.
ಇದನ್ನೂ ಓದಿ:ಆಧುನಿಕತೆ ಬಳಸಿ ಕಲೆಗೆ ರೂಪ ನೀಡಿದ ಕಲಾಕಾರರು;ಬನಹಟ್ಟಿಯಲ್ಲಿ ವೈವಿದ್ಯಮಯ ಕಾಮಣ್ಣನ ಮೂರ್ತಿಗಳು
ನಂತರ ಪೆಟ್ರೋಲ್ ಬೆಲೆ ಏರಿಕೆಯಾದ ಮೇಲೆ ಅವರಿಗೆ ಕುದುರೆಯೇ ವರವಾಯಿತಂತೆ. ಗಾಡಿಗೆ ಪೆಟ್ರೋಲ್ ಹಾಕಿಸುವ ಬದಲು ಅರಾಮಾಗಿ ಕುದುರೆ ಏರಿ ಓಡಾಡುತ್ತೇನೆ ಎಂದಿದ್ದಾರೆ ಯೂಸುಫ್. ಆದರೆ ಮೂಕಪ್ರಾಣಿಗಳನ್ನು ಈ ರೀತಿ ಬಳಸಿಕೊಳ್ಳುತ್ತಿರುವುದು ತಪ್ಪು ಎಂದು ನೆಟ್ಟಿಗರು ಕಿಡಿ ಕಾರಿದ್ದಾರೆ.