Advertisement
ಒಬ್ಬೊಬ್ಬರೇ ದನಕರುಗಳ ಸ್ಥಿತಿ-ಗತಿ ಬಗ್ಗೆ ಹೇಳತೊಡಗಿದರು. ದನಕರುಗಳಿಗೆ ಮೇವು, ಹೊಟ್ಟು ಬೇಕೆಂದರು, ಎಲ್ಲಕ್ಕಿಂತ ಮೊದಲು ಅವುಗಳಿಗೆ ಸೂರು ಬೇಕಿದೆ ಎಂದರು. ಅಜ್ಜಿಯೊಬ್ಬರು, ‘ಯಪ್ಪಾ, ದನಗಳ ಸ್ಥಿತಿ ನೆನಿಸಿಕೊಂಡರ ಅರ್ಧ ರೊಟ್ಟಿನೂ ಬಾಯಾಗ ಇಳಿಯಂಗಿಲ್ಲ’ ಎಂದಿದ್ದು ಬೆಣ್ಣೆಹಳ್ಳ-ತುಪ್ಪರಿ ಹಳ್ಳಗಳ ಪ್ರವಾಹದಿಂದ ರಾಸುಗಳ ಮೇಲಾದ ಕೆಟ್ಟ ಪರಿಣಾಮವನ್ನು ಬಿಂಬಿಸುತ್ತಿತ್ತು.
Related Articles
Advertisement
ವಿಶೇಷ ಅಭಿಯಾನ: ದನಕರುಗಳ ಸ್ಥಿತಿಯನ್ನು ಮನಗಂಡ ತಾಲೂಕಾ ಪಶುಸಂಗೋಪನಾ ಇಲಾಖೆ ಕಚೇರಿ ದನಕರುಗಳ ಆರೋಗ್ಯ ತಪಾಸಣೆಗಾಗಿ ವಿಶೇಷ ಅಭಿಯಾನ ಮಾಡಲು ನಿರ್ಧರಿಸಿದೆ. ಗ್ರಾಮಗಳಲ್ಲಿ ಡಂಗುರ ಹೊಡಿಸಿ ಪಶುಗಳ ಆರೋಗ್ಯ ತಪಾಸಣೆ ಮಾಡಲು ತೀರ್ಮಾನಿಸಿದೆ. ತಾಲೂಕಿನ ಎಲ್ಲ ಪಶು ಆಸ್ಪತ್ರೆಗಳಲ್ಲಿ ಔಷಧ, ಲಸಿಕೆ ಕೊರತೆಯಾಗದಂತೆ ಕ್ರಮ ಕೈಗೊಂಡಿದೆ.
ಬರದಿಂದಾಗಿ ಮೇ ತಿಂಗಳವರೆಗೆ ಮೇವು ಬ್ಯಾಂಕ್ ನಿರ್ವಹಿಸಲಾಯಿತು. ಆದರೆ ಮೇವಿನ ಬೇಡಿಕೆ ಕಡಿಮೆಯಾಗುತ್ತಿದ್ದಂತೆ ಮೇವು ಬ್ಯಾಂಕ್‌ಗಳನ್ನು ಬಂದ್ ಮಾಡಲಾಯಿತು. ಇದೀಗ ಮತ್ತೆ ಮೇವಿನ ಬೇಡಿಕೆಯನ್ನು ಪರಿಗಣಿಸಿ ಅವಶ್ಯಕವೆನಿಸಿದರೆ ಮೇವು ಬ್ಯಾಂಕ್ ಆರಂಭಿಸಲು ತಾಲೂಕು ಆಡಳಿತ ಸಿದ್ಧವಾಗಬೇಕಿದೆ. ಕೇವಲ ಜನರಿಗೆ ಪುನರ್ವಸತಿ ಕಲ್ಪಿಸುವುದಕ್ಕೆ ಆದ್ಯತೆ ನೀಡದೇ ದನಕರುಗಳಿಗೂ ಪುನರ್ವಸತಿ ವ್ಯವಸ್ಥೆ ಮಾಡಬೇಕು.
ವಿವಿಧ ಸಂಘ-ಸಂಸ್ಥೆಗಳು ಪುನರ್ವಸತಿ ಕೇಂದ್ರದಲ್ಲಿ ಆಹಾರ ಸಾಮಗ್ರಿಗಳನ್ನು ನೀಡುತ್ತಿವೆ. ಇದರೊಂದಿಗೆ ಹಸು-ಎಮ್ಮೆಗಳಿಗೆ ಮೇವು-ಹೊಟ್ಟು ಕೂಡ ನೀಡುವುದು ಅವಶ್ಯಕವಾಗಿದೆ. ನಿರೀಕ್ಷಿತ ಪ್ರಮಾಣದಲ್ಲಿ ದಾನಿಗಳಿಂದ ಹೊಟ್ಟು ದೊರೆಯದಿರುವುದು ಅನ್ನದಾತರ ಆತಂಕಕ್ಕೆ ಕಾರಣವಾಗಿದೆ.
ಔಷಧ ಕೊರತೆಆಗದಂತೆ ವ್ಯವಸ್ಥೆ: ದನಕರುಗಳಿಗೆ ರೋಗ ನಿರೋಧಕ ಶಕ್ತಿ ಹೆಚ್ಚಿರುತ್ತದೆ. ಸಾಮಾನ್ಯವಾಗಿ ಅವು ಶೀತ ಸ್ಥಿತಿ ತಡೆದುಕೊಳ್ಳುತ್ತವೆ. ಆದರೆ ಈ ಬಾರಿ ಪ್ರವಾಹದಿಂದ ಹಲವು ದನಗಳ ಆರೋಗ್ಯ ಸಮಸ್ಯೆಯಾಗಿದೆ. ನೀರು ಹಾಗೂ ಕೆಸರಿನಲ್ಲಿ ಬಹಳ ಕಾಲ ಇರುವುದರಿಂದ ಅವುಗಳ ದೇಹದ ಉಷ್ಣತೆ ಕ್ಷೀಣಿಸುತ್ತದೆ. ಅವುಗಳಿಗೆ ಆ್ಯಂಟಿಬಯೋಟಿಕ್ ನೀಡಲಾಗುತ್ತದೆ. ಸ್ಥಿತಿ ಇನ್ನೂ ಕೆಟ್ಟದಾಗಿದ್ದರೆ ಅವುಗಳಿಗೆ ಸಲಾಯನ್ ಮೂಲಕ ಕ್ಯಾಲ್ಸಿಯಂ ನೀಡಬೇಕಾಗುತ್ತದೆ. ಡಿಎನ್‌ಎಸ್ ಕೂಡ ನೀಡಿ ಅವುಗಳಿಗೆ ತ್ರಾಣ ಬರುವಂತೆ ಮಾಡಲಾಗುವುದು. ತಾಲೂಕಿನಲ್ಲಿ 17 ಗ್ರಾಮಗಳಲ್ಲಿ ಪಶು ಆಸ್ಪತ್ರೆಗಳಿವೆ. ಎಲ್ಲ ಆಸ್ಪತ್ರೆಗಳಲ್ಲಿ ಔಷಧ ಕೊರತೆಯಾಗದಂತೆ ವ್ಯವಸ್ಥೆ ಮಾಡಲಾಗುತ್ತಿದೆ. ಸಿಬ್ಬಂದಿ ಸದಾ ಕ್ರಿಯಾಶೀಲರಾಗಿದ್ದು, ದನಗಳ ಆರೋಗ್ಯ ತಪಾಸಣೆಗೆ ಆದ್ಯತೆ ನೀಡುವಂತೆ ಸಿಬ್ಬಂದಿಗೆ ಸೂಚಿಸಲಾಗಿದೆ. ಈವರೆಗೆ ಪ್ರವಾಹದಿಂದಾಗಿ ತಾಲೂಕಿನಲ್ಲಿ 86 ಕುರಿಗಳು ಹಾಗೂ 4 ರಾಸುಗಳು ಜೀವ ಕಳೆದುಕೊಂಡಿವೆ ಎಂದು ನವಲಗುಂದ ಪಶುಸಂಗೋಪನಾ ಇಲಾಖೆ ಸಹಾಯಕ ನಿರ್ದೇಶಕ ಡಾ| ಕೆ.ಎಚ್. ಖ್ಯಾಡದ ಮಾಹಿತಿ ನೀಡಿದರು.
.ವಿಶ್ವನಾಥ ಕೋಟಿ