ತುಮಕೂರು: ನಗರದ ಅಂತರಸನಹಳ್ಳಿ ತರಕಾರಿಮಾರು ಕಟ್ಟೆ ಯಲ್ಲಿ ರಸ್ತೆ, ಚರಂಡಿ ನಿರ್ಮಾಣ ಮಾಡಲುಜೆಸಿಬಿಯಿಂದ ಆವರಣದ ರಸ್ತೆಗಳನ್ನು ಅಗೆದ ಕಾರಣ,ವ್ಯಾಪಾರ, ವಹಿವಾಟಿಗೆ ಅಡಚಣೆ ಯಾಗಿ ವ್ಯವಹಾರ ಚಟುವಟಿಕೆಗಳು ಅಸ್ತವ್ಯಸ್ತ ವಾದವು.
ಕಾಮಗಾರಿ ಆರಂಭಿಸುವ ಬಗ್ಗೆ ಇಲ್ಲಿನ ವರ್ತಕರಿಗೆ ಮಾಹಿತಿ ನೀಡದೆ, ವ್ಯಾಪಾರಕ್ಕೆ ಪರ್ಯಾಯವ್ಯವಸ್ಥೆ ಮಾಡದೆ ಏಕಾಏಕಿ ಕಾಮಗಾರಿಗೆ ಮುಂದಾಗಿರುವ ಬಗ್ಗೆ ವರ್ತಕರು ಎಪಿಎಂಸಿ ಅಧಿಕಾರಿಗಳವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ವ್ಯಾಪಾರ ವಹಿವಾಟು ಅಸ್ತವ್ಯಸ್ತ: ಮಳೆಗಾಲದಲ್ಲಿಮಳೆ ನೀರು ಮಾರುಕಟ್ಟೆ ಒಳಗೆ ನುಗ್ಗಿ ಅವಾಂ ತರವಾಗುತ್ತಿತ್ತು. ಇಲ್ಲಿ ಸಮರ್ಪಕವಾದ ಚರಂಡಿ ವ್ಯವಸ್ಥೆ ಇಲ್ಲ. ಹೀಗಾಗಿ, ಎಪಿಎಂಸಿಯಿಂದ ಸುವ್ಯ ವಸ್ಥಿತಚರಂಡಿ ನಿರ್ಮಿಸಿ, ಆವರಣದಲ್ಲಿ ಸಿಮೆಂಟ್‌ಕಾಂಕ್ರೀ ಟ್ ರಸ್ತೆ ನಿರ್ಮಾಣ ಮಾಡ ಲಾಗುತ್ತಿದೆ. ಮಾರು ಕಟ್ಟೆ ಅಭಿವೃದ್ಧಿಗೆ ನಾವು ವಿರೋಧ ಮಾಡುವುದಿಲ್ಲ. ಸುಸಜ್ಜಿತ ಮಾರುಕಟ್ಟೆ ನಿರ್ಮಾಣ ಆಗಬೇಕುಎಂಬ ಒತ್ತಾಯ ಮಾಡುತ್ತಲೇ ಬಂದಿದ್ದೇವೆ. ಆದರೆ,ಕಾಮಗಾರಿ ಆರಂಭಿಸುವ ಮೊದಲು ಇಲ್ಲಿನವ್ಯಾಪಾರಿಗಳಿ ಗಾಗಲಿ, ವ್ಯಾಪಾರಿಗಳ ಸಂಘಕ್ಕಾಗಲಿಎಪಿಎಂಸಿ ಅಧಿಕಾರಿಗಳು ಮಾಹಿತಿ ನೀಡಿಲ್ಲ, ಜೆಸಿಬಿತಂದು ದಿಢೀರನೇ ಆವರಣದ ರಸ್ತೆಗಳನ್ನು ಅಗೆದು ಹೋಗಿದ್ದಾರೆ.
ಗ್ರಾಹಕರ ಓಡಾಟಕ್ಕೂ ತೊಂದರೆಯಾಗಿದೆ. ವ್ಯಾಪಾರಕ್ಕೂ ಅನಾನುಕೂಲವಾಗಿದೆ.ಹೀಗಾಗಿ ವ್ಯಾಪಾರ ವಹಿವಾಟು ಅಸ್ತವ್ಯಸ್ತವಾಗಿದೆಎಂದು ವ್ಯಾಪಾರಿಗಳು ಎಪಿಎಂಸಿ ಅಧಿಕಾರಿಗಳವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.ಮಾರುಕಟ್ಟೆಯಲ್ಲಿ ಅಭಿವೃದ್ಧಿ ಕಾಮಗಾರಿ ಆರಂಭಿಸುವ ಮೊದಲು ಅಧಿಕಾರಿಗಳು ವರ್ತಕರಿಗೆ ವಿಷಯ ತಿಳಿಸಬೇಕಾಗಿತ್ತು. ವ್ಯಾಪಾರಕ್ಕೆ ಪರ್ಯಾಯ ಜಾಗಗುರುತಿಸಿ,ಅಗತ್ಯ ಅನುಕೂಲ ಮಾಡಿಕೊಡಬೇಕಾಗಿತ್ತುಎಂದು ಮಾರುಕಟ್ಟೆಯ ಹಣ್ಣು, ತರಕಾರಿ ವ್ಯಾಪಾರಿಗಳಸಂಘದ ಅಧ್ಯಕ್ಷ ರಘುರಾಮ್ ಹೇಳಿದರು.
ಲೈಸನ್ಸ್ ರದ್ದುಗೊಳಿಸುವ ಬೆದರಿಕೆ: ಈ ಬಗ್ಗೆಅಧಿಕಾರಿಗಳನ್ನು ಕೇಳಿದರೆ, ಲೈಸನ್ಸ್ ರದ್ದು ಮಾಡುವಬೆದರಿಕೆ ಹಾಕಿ, ದೌರ್ಜನ್ಯದಿಂದ ಕಾಮಗಾರಿಆರಂಭಿಸಿದ್ದಾರೆ. ವ್ಯಾಪಾರಕ್ಕೆ ನಮಗೆ ಪರ್ಯಾಯವ್ಯವಸ್ಥೆ ಮಾಡಿಕೊಡಬೇಕು ಎಂದುಒತ್ತಾಯಿಸಿದರು. ಈ ಸಂಬಂಧ ಎಪಿಎಂಸಿಕಾರ್ಯದರ್ಶಿಗಳಿಗೆ ಮನವಿ ಪತ್ರ ನೀಡಿ,ವ್ಯಾಪಾರಕ್ಕೆ ಪರ್ಯಾಯ ವ್ಯವಸ್ಥೆ ಮಾಡುವಂತೆಕೋರುವುದಾಗಿ ವ್ಯಾಪಾರಿಗಳ ಸಂಘದ ಕಾರ್ಯದರ್ಶಿ ಮುತ್ತು ರಾಯಪ್ಪ ಹೇಳಿದರು.