Advertisement

ಸ್ವಯಂ ನಿವೃತ್ತಿ ಯೋಜನೆಗೆ ರೆಡ್‌ ಸಿಗ್ನಲ್?

09:11 PM Dec 28, 2020 | Suhan S |

ಸ್ಟೇಟ್‌ ಬ್ಯಾಂಕ್‌ ಆಫ್ ಇಂಡಿಯಾ, ಕಳೆದ ಸೆಪ್ಟೆಂಬರ್‌ ತಿಂಗಳಿನಲ್ಲಿ ತನ್ನ 30000 ಸಿಬ್ಬಂದಿಗಳಿಗೆ ಸ್ವಯಂ ನಿವೃತ್ತಿ ಕೊಡಲುನಿರ್ಧರಿಸಿತ್ತು. ಆ ಯೋಜನೆ ನೆನೆಗುದಿಗೆ ಬಿದ್ದಂತಿದೆ. ತನ್ನ ಸಿಬ್ಬಂದಿ ಸಂಖ್ಯೆಯನ್ನು 2.57 ಲಕ್ಷದಿಂದ 2.49 ಲಕ್ಷಕ್ಕೆ ಇಳಿಸುವ ಮತ್ತು ಆಮೂಲಕ ಬ್ಯಾಂಕಿಗೆ 2170.88 ಕೋಟಿ ಉಳಿಸುವ ಬ್ಯಾಂಕಿನ ಮಹತ್ವಾಕಾಂಕ್ಷಿ ಯೋಜನೆಗೆ ಸದ್ಯಕ್ಕೆ ಹಿನ್ನಡೆಯಾದಂತೆ ಕಾಣುತ್ತದೆ. ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ 2020ರ ಡಿಸೆಂಬರ್‌1ರಂದು ಆರಂಭವಾಗಿ ಫೆಬ್ರವರಿ ಕೊನೆಯವರೆಗೆ ಈ ಯೋಜನೆಜಾರಿಯಲ್ಲಿ ಇರುತ್ತಿತ್ತು. ಆದರೆ ಸದ್ಯಕ್ಕೆ ಅಂತಹ ಸಾಧ್ಯತೆಗಳು ಇಲ್ಲ ಎನ್ನಲಾಗುತ್ತಿದೆ.

Advertisement

ಯಾಕೆ ಈ ರೆಡ್‌ ಸಿಗ್ನಲ್? ವರದಿಗಳ ಪ್ರಕಾರ, ಹಣಕಾಸು ಮಂತ್ರಾಲಯ ಈ ಯೋಜನೆಗೆ ಸಮ್ಮತಿಸಿಲ್ಲ. ಏಕೆಂದರೆ, ಈ ಯೋಜನೆ ಅನುಷ್ಟಾನಗೊಂಡರೆ, ಅನುಭವಿ ಸಿಬ್ಬಂದಿಗಳು ಮತ್ತು ಅಧಿಕಾರಿಗಳು ಇದರ ಪ್ರಯೋಜನ ಪಡೆಯುತ್ತಾರೆ. ಆಗ ಆಯಕಟ್ಟಿನ ಸ್ಥಳದಲ್ಲಿ ಸಿಬ್ಬಂದಿ ಮತ್ತು ಅಧಿಕಾರಿಗಳ ಕೊರತೆಯಾಗುತ್ತದೆ. ಹಾಗೇನಾದರೂಆಗಿಬಿಟ್ಟರೆ, ದೇಶದ ಅತಿದೊಡ್ಡ ಬ್ಯಾಂಕ್‌ ಎಂಬ ಹೆಗ್ಗಳಿಕೆಯ ಎಸ್‌ಬಿಐ ನ ಕಾರ್ಯನಿರ್ವಹಣೆಯಲ್ಲಿ ಏರುಪೇರಾಗುತ್ತದೆ. ಸ್ವಯಂ ನಿವೃತ್ತಿ ಯೋಜನೆಯ ಉದ್ದೇಶಸಾಮಾನ್ಯವಾಗಿ ನಿಷ್ಪ್ರಯೋಜಕ ಸಿಬ್ಬಂದಿಗಳ ಸಂಖ್ಯೆಯನ್ನು ಕಡಿಮೆಗೊಳಿಸುವುದು,ಅನಾರೋಗ್ಯದ ಸಮಸ್ಯೆ ಇದ್ದವರಿಗೆಗೌರವಾನ್ವಿತ ಬೀಳ್ಕೊಡುಗೆ ನೀಡುವುದು, ಪೋಸ್ಟಿಂಗ್‌ ಸರಿಯಾಗಿಲ್ಲ ಎಂದು ಗೊಣಗುವವರಿಗೆ ಸಕಲ ನಿವೃತ್ತಿ ಸೌಲಭ್ಯ ನೀಡಿ ಕೆಲಸ ಬಿಡಲು ಅವಕಾಶ ಕೊಡುವುದು.

ಬ್ಯಾಂಕುಗಳಲ್ಲಿ ಇಂಥ ಸಾಕಷ್ಟು ಪ್ರಕರಣಗಳಿರುತ್ತವೆ. ಕೆಲವರು ಸೆಬಾಟಿಕಲ್‌ರಜೆಯನ್ನು ಪಡೆಯುತ್ತಾರೆ. ಅದರೆ, ಇದುಸಂಬಳ ರಹಿತ ರಜೆಯಾಗಿದ್ದು ಸ್ಕೀಮ್‌ಆಕರ್ಷಕವಾಗಿರುವುದಿಲ್ಲ. ಅಂತೆಯೇಸುದೀರ್ಘ‌ ಸೇವೆಯಿಂದ ಸುಸ್ತಾದವರು,ಆರೋಗ್ಯದ ಸಮಸ್ಯೆ ಇದ್ದವರು ಮತ್ತುಪೋಸ್ಟಿಂಗ್‌ ಬಗ್ಗೆ ಅಸಮಾಧಾನ ಇರುವವರುಈ ಅವಕಾಶವನ್ನು ಬಳಸಿಕೊಳ್ಳುತ್ತಾರೆ.

ಬಹುತೇಕ ಪ್ರಕರಣದಲ್ಲಿ ಇದು ಸತ್ಯವಾದರೂ, ಈ ಅವಕಾಶವನ್ನು ಬಳಸಿಕೊಂಡು ಪ್ರತಿಭಾವಂತರು, ಅನುಭವಿಗಳು ಇನ್ನೂ ಉತ್ತಮ ಉದ್ಯೋಗ, ಭವಿಷ್ಯ,ಅರಸಿ ಪಲಾಯನ ಮಾಡುವುದೂ ನಿಜ. ಇದನ್ನು ಹಣಕಾಸು ಮಂತ್ರಾಲಯ ತನ್ನ ಹಳೆಯಅನುಭವದಿಂದ ಕಂಡುಕೊಂಡಿದೆ.ಅಂತೆಯೇ ಮುಂಜಾಗರೂಕತೆಯಕ್ರಮವೆಂದು, ಸ್ವಯಂ ನಿವೃತ್ತಿಯೋಜನೆಗೆ ರೆಡ್‌ ಸಿಗ್ನಲ್‌ ನೀಡಿದೆ ಎನ್ನಲಾಗುತ್ತಿದೆ.

ಇತ್ತೀಚೆಗೆ ಹಲವಾರು ಖಾಸಗಿಬ್ಯಾಂಕುಗಳು ಆರಂಭವಾಗುತ್ತಿವೆ.ಬ್ಯಾಂಕಿಂಗ್‌ ಕ್ಷೇತ್ರದಲ್ಲಿ ಅನುಭವಇದ್ದವರಿಗೆ ಅಲ್ಲಿ ಬಾರೀ ಬೇಡಿಕೆ ಇದೆ.ರಾಷ್ಟ್ರೀಕೃತ ಬ್ಯಾಂಕುಗಳಿಂದ ನಿವೃತ್ತಿಪಡೆದವರು ಈ ಹೊಸ ಬ್ಯಾಂಕುಗಳಲ್ಲಿನೆಲೆ ಕಂಡುಕೊಳ್ಳುವುದನ್ನುತಡೆಯಲಾಗದು. ಈ ಬ್ಯಾಂಕುಗಳಲ್ಲಿವರ್ಗಾವರ್ಗಿ ಕೆಲವು ಪಟ್ಟಣ ಮತ್ತುನಗರಗಳಿಗೆ ಸೀಮಿತವಾಗಿರು ತ್ತದೆ. ಕಡ್ಡಾಯಗ್ರಾಮಾಂತರ ಸೇವೆಯ ನಿಯಮ ಇಲ್ಲ.ಸಂಬಳ ಮತ್ತು ಸೌಲಭ್ಯಗಳು ಹೆಚ್ಚು .ಇವೆಲ್ಲಕಾರಣಗಳಿಂದ ರಾಷ್ಟ್ರೀಕೃತ ಬ್ಯಾಂಕ್‌ ಗಳಿಂದಸ್ವಯಂ ನಿವೃತ್ತಿ ಪಡೆದವರು ಖಾಸಗಿ ಬ್ಯಾಂಕ್‌ ಸೇರುವ ಸಾಧ್ಯತೆಗಳು ಹೆಚ್ಚು.

Advertisement

ಇದನ್ನು ಗಮನಿಸಿಯೇ ಹಣಕಾಸುಮಂತ್ರಾಲಯವು ಎಸ್‌ಬಿಐನ ಸ್ವಯಂ ನಿವೃತ್ತಿಯೋಜನೆಗೆ ಹಸಿರು ನಿಶಾನೆ ತೋರಿಸಿಲ್ಲಎನ್ನಲಾಗುತ್ತಿದೆ. ಸ್ಟೇಟ್‌ ಬ್ಯಾಂಕ್‌ನಲ್ಲಿ ಹೇಗೆಈ ನಿವೃತ್ತಿ ಯೋಜನೆ ಅನುಷ್ಟಾನಗೊಳ್ಳುತ್ತದೆಎನ್ನುವುದನ್ನು ನೋಡಿಕೊಂಡು ತಮ್ಮ ಬ್ಯಾಂಕ್‌ ಗಳಲ್ಲೂ ಇದನ್ನು ಜಾರಿಗೊಳಿಸುವಯೋಚನೆಯಲ್ಲಿದ್ದ ಉಳಿದ ಬ್ಯಾಂಕುಗಳೂಸದ್ಯಕ್ಕೆ ಅಂತ ನಿರ್ಧಾರದಿಂದ ಆಚೆ ನಿಂತಿವೆ ಎಂದೂ ಹೇಳಲಾಗುತ್ತಿದೆ.

 

-ರಮಾನಂದ ಶರ್ಮ

Advertisement

Udayavani is now on Telegram. Click here to join our channel and stay updated with the latest news.

Next