ಕೋಲ್ಕತಾ: ಕಲ್ಲಿದ್ದಲು ಕಳ್ಳಸಾಗಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಬುಧವಾರ (ಸೆಪ್ಟೆಂಬರ್ 07) ಪಶ್ಚಿಮಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನೇತೃತ್ವದ ಸರ್ಕಾರದಲ್ಲಿ ಕಾನೂನು ಸಚಿವರಾಗಿರುವ ಮೂಲೊಯ್ ಘಟಕ್ ನಿವಾಸದ ಮೇಲೆ ದಾಳಿ ನಡೆಸಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:ಬೆಳಗಾವಿ ಏರ್ ಪೋರ್ಟ್ ನಲ್ಲಿ ಕತ್ತಿ ಪಾರ್ಥಿವ ಶರೀರ ಆಗಮನಕ್ಕೆ ಕಾಯುತ್ತಿರುವ ಅಭಿಮಾನಿಗಳು
ಅಸಾನ್ಸೋಲ್ ನಲ್ಲಿರುವ ಘಟಕ್ ಅವರ ಎರಡು ನಿವಾಸಗಳ ಮೇಲೆ ದಾಳಿ ನಡೆಸಿರುವ ಸಿಬಿಐ ಶೋಧ ಕಾರ್ಯ ನಡೆಸುತ್ತಿದ್ದು, ಕಚೇರಿಯಲ್ಲಿಯೂ ತಪಾಸಣೆ ನಡೆಸಲಾಗುತ್ತಿದೆ ಎಂದು ವರದಿ ವಿವರಿಸಿದೆ.
ಅಸಾನ್ಸೋಲ್ ನ ಘಟಕ್ ನಿವಾಸದ ಮುಖ್ಯ ದ್ವಾರವನ್ನು ಬಂದ್ ಮಾಡಿದ್ದು, ಯಾರನ್ನೂ ಹೊರಗೆ ಹೋಗಲು ಮತ್ತು ಒಳ ಬರಲು ಸಿಬಿಐ ಅಧಿಕಾರಿಗಳು ಬಿಡುತ್ತಿಲ್ಲ ಎಂದು ವರದಿ ಹೇಳಿದೆ. ಕೋಲ್ಕತಾ ಮತ್ತು ಅಸಾನ್ಸೋಲ್ ಸೇರಿದಂತೆ ಸುಮಾರು ಏಳು ಸ್ಥಳಗಳಲ್ಲಿ ಸಿಬಿಐ ದಾಳಿ ನಡೆಸಿದೆ.
ಅಸಾನ್ಸೋಲ್ ನ ಅಫ್ತಾರ್ ರಸ್ತೆ ಗಾರ್ಡನ್ ಮತ್ತು ಜೆಲ್ಲಿದಾಂಗಾದಲ್ಲಿರುವ ನಿವಾಸಗಳ ಮೇಲೆ ಸಿಬಿಐ ಮೊದಲು ದಾಳಿ ನಡೆಸಿದ್ದು, ಬಳಿಕ ಘಟಕ್ ಅವರ ಪೂರ್ವಿಕರ ಮನೆ ಮೇಲೆ ದಾಳಿ ನಡೆಸಿರುವುದಾಗಿ ಮೂಲಗಳು ಹೇಳಿವೆ.