Advertisement

JDS ವೈಎಸ್ ವಿ ದತ್ತಾಗೆ ಮತ್ತೆ ಸಂಕಷ್ಟ; ಬಂಧನ ವಾರೆಂಟ್

03:05 PM Apr 15, 2023 | Team Udayavani |

ಬೆಂಗಳೂರು: ಮಾಜಿ ಶಾಸಕ ಜೆಡಿಎಸ್ ಅಭ್ಯರ್ಥಿ ವೈಎಸ್ ವಿ ದತ್ತಾ ಅವರಿಗೆ ಮತ್ತೆ ಸಂಕಷ್ಟ ಎದುರಾಗಿದ್ದು, ಚೆಕ್ ಬೌನ್ಸ್ ಪ್ರಕರಣದಲ್ಲಿ ಬಂಧನ ವಾರೆಂಟ್ ಹೊರಡಿಸಲಾಗಿದೆ.

Advertisement

ಕೋರ್ಟ್ ಗೆ ನೀಡಿದ ಭರವಸೆಯಂತೆ ಶನಿವಾರ (ಎ ೧೫) ಹಣ ಪಾವತಿಸಬೇಕಿತ್ತು,ಆದರೆ ಕೋರ್ಟ್ ಗೆ ಗೈರಾಗಿ ಹಾಜರಾತಿಯಿಂದ ವಿನಾಯಿತಿ ಕೋರಿದ್ದರು.ಹಾಜರಾತಿಯಿಂದ ವಿನಾಯಿತಿ ನೀಡಲು ಜನಪ್ರತಿನಿಧಿಗಳ ಕೋರ್ಟ್ ನಿರಾಕರಿಸಿ ಜಾಮೀನು ರಹಿತ ವಾರೆಂಟ್ ಜಾರಿಗೊಳಿಸಿದೆ.

ಸಿ.ಎಸ್ ಸೋಮೇಗೌಡ ಎಂಬುವರು ವೈ ಎಸ್ ವಿ ದತ್ತಾ ವಿರುದ್ಧ ಚೆಕ್ ಬೌನ್ಸ್ ಖಾಸಗಿ ದೂರು ದಾಖಲಿಸಿದ್ದರು. ಎ. 26 ರಂದು ವೈಎಸ್ ವಿ ದತ್ತಾ ಅವರನ್ನು ಕೋರ್ಟ್ ಗೆ ಹಾಜರುಪಡಿಸಲು 42 ನೇ ಎಸಿಎಂಎಂ ಕೋರ್ಟ್ ಜಡ್ಜ್ ಜೆ. ಪ್ರೀತ್ ಆದೇಶ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next