ತಿ.ನರಸೀಪುರ: ಮೂರು ದಶಕಗಳ ಬಳಿಕ ಕೆಆರ್‌ಎಸ್ ಮತ್ತು ಕಬಿನಿ ಜಲಾಶಯಗಳಿಂದ ನದಿಗೆ ಅಧಿಕ ನೀರು ಬಿಟ್ಟಿರುವುದರಿಂದ ಶ್ರೀರಂಗಪಟ್ಟಣ ಕಡೆಯಿಂದ ಹರಿದು ಬರುವ ಕಾವೇರಿ, ನಂಜನಗೂಡು ಕಡೆಯಿಂದ ಹರಿದು ಬರುವ ಕಪಿಲಾ ಹಾಗೂ ಇಲ್ಲಿಯೇ ಉದ್ಭವಿಸಿ ಅಂತರ್ಗಾಮಿ (ಗುಪ್ತ ಗಾಮಿನಿ)ಯಾಗಿ ಹರಿವ ಸ್ಫಟಿಕ ಸರೋವರಗಳು ಸೇರುವ ತ್ರಿವೇಣಿ ಸಂಗಮ ಮೈದುಂಬಿ ಹರಿಯುತ್ತಿದೆ.
ಕೇರಳದ ವೈನಾಡು, ಕಾವೇರಿ ಕಣಿವೆಗಳಲ್ಲಿ ಸುರಿಯುತ್ತಿರುವ ವ್ಯಾಪಕ ವರ್ಷ ಧಾರೆಯಿಂದ ಕಪಿಲಾ – ಕಾವೇರಿ – ಗುಪ್ತಗಾಮಿನಿ ನದಿಗಳ ತ್ರಿವೇಣಿ ಸಂಗಮ ಮೈದುಂಬಿ ಹರಿಯುತ್ತಿದೆ. ನದಿಪಾತ್ರದಲ್ಲಿ ನೀರಿನ ಪ್ರಮಾಣ ಹೆಚ್ಚಾಗಿ ಪ್ರವಾಹ ಪರಿಸ್ಥಿತಿ ಉಂಟಾಗಿದೆ. ಈ ಭಾಗದಲ್ಲಿ ಇಂತಹ ಪ್ರವಾಹವನ್ನು ಕಂಡು ಮೂರು ದಶಕಗಳೇ ಕಳೆದಿವೆ. ಈ ಹಿನ್ನೆಲೆಯಲ್ಲಿ ತ್ರಿವೇಣಿ ಸಂಗಮ ಮೈದುಂಬಿ ಹರಿಯು
ತ್ತಿರುವುದು ತಾಲೂಕಿನ ಜನರಲ್ಲಿ ಹರ್ಷ ಉಂಟು ಮಾಡಿದೆ. ಭಾನುವಾರದಿಂದ ಪ್ರವಾಸಿಗರ ಸಂಖ್ಯೆಯೂ ಹೆಚ್ಚುತ್ತಿದೆ.
ಹೆಮ್ಮಿಗೆ ಸೇತುವೆ ಮೇಲೆ ಸಂಚಾರ ಸ್ಥಗಿತ: ಪಟ್ಟಣದ ಕಾವೇರಿ ಮತ್ತು ಕಪಿಲಾ ನದಿಗಳಲ್ಲಿ ನೀರಿನ ಹರಿವು ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಯಾವುದೇ ಸಂದರ್ಭದಲ್ಲಿ ತಲಕಾಡು ಹೆಮ್ಮಿಗೆ ಸೇತುವೆ ಮುಳುಗಡೆ ಯಾಗುವ ಸಾಧ್ಯತೆಗಳಿವೆ. ತಿ.ನರಸೀಪುರ- ತಲಕಾಡು ಮಾರ್ಗದಲ್ಲಿ ಸೇತುವೆ ಸಂಚಾರ್ನ ತಾತ್ಕಾಲಿಕವಾಗಿ ಸ್ಥಗಿತಗೊಳಿಸುವಂತೆ ತಹಶೀಲ್ದಾರ್ ರಾಜು ಸೂಚನೆ ನೀಡಿದ್ದಾರೆ.
ಬಿಗಿ ಭದ್ರತೆ: ಕಬಿನಿ ಹಾಗೂ ಕೆಆರ್‌ಎಸ್ ಜಲಾಶಯಗಳಿಂದ 1 ಲಕ್ಷಕ್ಕೂ ಅಧಿಕ ಕ್ಯೂಸೆಕ್ ನೀರು ಹೊರ ಬರುತ್ತಿರುವುದ ರಿಂದ ಕಪಿಲಾ-ಕಾವೇರಿ ನದಿ ಪಾತ್ರಗಳಲ್ಲಿ ನೀರು ಹರಿಯುವ ಪ್ರಮಾಣ ಹೆಚ್ಚಿದೆ. ನದಿ ತೀರ ಪ್ರದೇಶಗಳು ಜಲಾವೃತಗೊಂಡಿವೆ. ಹೆಮ್ಮಿಗೆ ಸೇತುವೆ ಮುಳುಗಡೆ ಯಾಗುವ ಸಾಧ್ಯತೆ ಇದೆ. ಜನಜಾನುವಾರು ಹಾಗೂ ವಾಹನಗಳ ಸಂಚಾರ ನಿಷೇಧಿಸಿ ದಿನದ 24 ಗಂಟೆ ಪೊಲೀಸ್ ಬಿಗಿ ಭದ್ರತೆ ವ್ಯವಸ್ಥೆ ಹಾಗೂ ಬ್ಯಾರಿಕೇಡ್ ಅಳವಡಿಸುವಂತೆ ಸೂಚಿಸಲಾಗಿದೆ.
ನರಸಿಂಹಸ್ವಾಮಿ ದೇಗುಲ ವಿಶೇಷ: ನದಿ ದಂಡೆಯಲ್ಲಿರುವ ಗುಂಜಾ ನರಸಿಂಹ ಸ್ವಾಮಿ ದೇವಾಲಯಕ್ಕೆ ಪ್ರತಿವರ್ಷ ಯುಗಾದಿ ಹಬ್ಬದ ಹಿಂದಿನ ದಿನವೇ ರಾಜ್ಯದ ಮೂಲೆ ಮೂಲೆಗಳಿಂದ ಭಕ್ತರು ಆಗಮಿಸಿ, ದೇವಾಲಯದಲ್ಲಿ ತಂಗಿ, ಯುಗಾದಿ ಹಬ್ಬದ ದಿನ ಮುಂಜಾನೆಯಿಂದಲೇ ತ್ರಿವೇಣಿ ಸಂಗಮದಲ್ಲಿ ಪುಣ್ಯಸ್ನಾನ ಮಾಡಿ, ದೇವರ ದರ್ಶನ ಪಡೆಯುವುದು ಇಲ್ಲಿನ ಸಂಪ್ರದಾಯ ಜೊತೆಗೆ ಪ್ರತಿ ಮೂರು ವರ್ಷಗಳಿಗೊಮ್ಮೆ ಇಲ್ಲಿ ಕುಂಭಮೇಳ ನಡೆಯುತ್ತದೆ. ತ್ರಿವೇಣಿ ಸಂಗಮ ಸೇರಿದಂತೆ ನದಿ ಪಾತ್ರಗಳಲ್ಲಿರುವ ಜನರಿಗೆ ನದಿ ಪಾತ್ರಕ್ಕೆ ತೆರಳಬಾರದು ಹಾಗೂ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಸೂಚಿಸಲಾಗಿ¨