Advertisement

ತ್ರಿವೇಣಿ ಕಾದಂಬರಿ ಓದಿ ವೈದ್ಯನಾದೆ

12:32 PM Oct 24, 2018 | |

ಬೆಂಗಳೂರು: ಓದು ಅಂದರೆ ನನಗೆ ತುಂಬಾ ಆಸಕ್ತಿ. ಶಾಲಾ ಕಾಲೇಜು ದಿನಗಳಲ್ಲೇ ಪುಸ್ತಕಗಳನ್ನು ಓದುವ ಹವ್ಯಾಸ ಬೆಳೆಸಿ ಕೊಂಡೆ, ಹೆಸರಾಂತ ಕಾದಂಬರಿಗಾರ್ತಿ ತ್ರಿವೇಣಿ ಅವರ ಕಾದಂಬರಿಗಳ ಓದೇ ನನ್ನನು ವೈದ್ಯ ಲೋಕಕ್ಕೆ ಕರೆತಂತು ಎಂದು ಮನೋವಿಜ್ಞಾನಿ ಮತ್ತು ವೈದ್ಯ ಸಾಹಿತಿ ಡಾ.ಸಿ.ಆರ್‌.ಚಂದ್ರಶೇಖರ್‌ ಅಭಿಪ್ರಾಯಪಟ್ಟಿದ್ದಾರೆ.

Advertisement

ಕನ್ನಡ ಪುಸ್ತಕ ಪ್ರಾಧಿಕಾರ ಮಂಗಳವಾರ ಮೈಕೋ ಲೇಔಟ್‌ನಲ್ಲಿ ಆಯೋಜಿಸಿದ್ದ ನಿಮ್ಮ ಮನೆಗೆ ನಮ್ಮ ಪುಸ್ತಕ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ತ್ರಿವೇಣಿ ಅವರ ಬಹರಗಳ ಬಗ್ಗೆ ಬೆಳಕು ಚೆಲ್ಲಿದರು. ವೈದ್ಯಸಾಹಿತ್ಯ ಕ್ಷೇತ್ರದ ಬಗ್ಗೆ ಹಲವು ರೀತಿಯ ಪುಸ್ತಕಗಳನ್ನು ಬರೆದಿದ್ದೇನೆ.ಇವೆಲ್ಲವೂ ತ್ರಿವೇಣಿ ಅವರ ಪುಸ್ತಕಗಳ ಓದಿನ ಫ‌ಲ ಎಂದು ಹೇಳಿದರು.

ವೈದ್ಯ ಸಾಹಿತಿ ಡಾ.ಶಿವರಾಂ ಅವರ ಮನ ಮಂಥನ ಕೂಡ ನನ್ನ ಮೇಲೆ ಬಹಳಷ್ಟು ಪ್ರಭಾವ ಬೀರಿದೆ. ಇದರ ಜತೆಗೆ ತ್ರಿವೇಣಿ ಅವರ ಬೆಕ್ಕಿನ ಕಣ್ಣು ಸೇರಿದಂತೆ ಹಲವು ಕಾದಂಬರಿಗಳು ಪ್ರೇರಣೆಯಾಗಿವೆ ಎಂದು ತಿಳಿಸಿದರು.

ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷೆ ಡಾ.ವಸುಂಧರಾ ಭೂಪತಿ ಮಾತನಾಡಿ, ಪ್ರಾಧಿಕಾರ ಓದುಗರ ಸಂಖ್ಯೆಯನ್ನು ಹೆಚ್ಚಿಸಲು ಹಲವು ಯೋಜನೆಗಳನ್ನು ಹಮ್ಮಿಕೊಂಡಿದ್ದು, ಅದರಲ್ಲಿ ನಿಮ್ಮ ಮನೆಗೆ ನಮ್ಮ ಪುಸ್ತಕ ಯೋಜನೆ ಕೂಡ ಒಂದಾಗಿದೆ. ಈಗಾಗಲೇ ಹಲವು ಕಡೆಗಳಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು ಜನರಿಂದ ಮೆಚ್ಚುಗೆ ಗಳಿಸಿದೆ ಎಂದರು. ಬಿಎಚ್‌ಇಎಲ್‌ನ ನಿವೃತ್ತ ಉದ್ಯೋಗಿ ಎ.ಎಸ್‌.ರಾಮಚಂದ್ರ, ಸಿ.ದೊರೆಸ್ವಾಮಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next