Advertisement

ಸಿಲಿಕಾನ್‌ ಸಿಟಿಯಲ್ಲಿ ಪೊನ್ನಿಯನ್‌ ಸೆಲ್ವನ್‌; ಅಪ್ಪು ನೆನೆದ ತ್ರಿಶಾ

11:17 AM Sep 24, 2022 | Team Udayavani |

ಖ್ಯಾತ ನಿರ್ದೇಶಕ ಮಣಿರತ್ನಂ ನಿರ್ದೇಶನದ “ಪೊನ್ನಿಯಿನ್‌ ಸೆಲ್ವನ್‌’ ಸಿನಿಮಾ ಕನ್ನಡದಲ್ಲೂ ಬಿಡುಗಡೆಗೆ ಸಿದ್ಧವಾಗಿದೆ. ಇದೇ ಸೆ. 30ಕ್ಕೆ “ಪೊನ್ನಿಯಿನ್‌ ಸೆಲ್ವನ್‌’ ತೆರೆಗೆ ಬರುತ್ತಿದ್ದು, ಸದ್ಯ ಸಿನಿಮಾದ ಪ್ರಚಾರ ಕಾರ್ಯದಲ್ಲಿ ನಿರತವಾಗಿರುವ ಚಿತ್ರತಂಡ, ಇತ್ತೀಚೆಗೆ ಬೆಂಗಳೂರಿನಲ್ಲಿ ಅದ್ಧೂರಿಯಾಗಿ ಸಿನಿಮಾದ ಪ್ರೀ-ರಿಲೀಸ್‌ ಇವೆಂಟ್‌ ನಡೆಸಿತು.

Advertisement

ವರ್ಣರಂಜಿತವಾಗಿ ನಡೆದ “ಪೊನ್ನಿಯಿನ್‌ ಸೆಲ್ವನ್‌’ ಪ್ರೀ-ರಿಲೀಸ್‌ ಇವೆಂಟ್‌ನಲ್ಲಿ ನಟರಾದ ಚಿಯಾನ್‌ ವಿಕ್ರಂ, ಕಾರ್ತಿ, ಜಯಂ ರವಿ, ನಟಿ ತ್ರಿಷಾ, ಕಲ್ಯಾಣಿ ಸೇರಿದಂತೆ ಸಿನಿಮಾದ ಪ್ರಮುಖ ಕಲಾವಿದರು ಮತ್ತು ತಂತ್ರಜ್ಞರು ಹಾಜರಿದ್ದರು.

ಇದೇ ವೇಳೆ ಮಾತನಾಡಿದ ನಟಿ ತ್ರಿಷಾ, ಪವರ್‌ಸ್ಟಾರ್‌ ಪುನೀತ್‌ ರಾಜಕುಮಾರ್‌ ಅವರನ್ನು ನೆನಪು ಮಾಡಿಕೊಂಡರು. “ಈ ಹಿಂದೆ ಪುನೀತ್‌ ರಾಜಕುಮಾರ್‌ ಅವರೊಂದಿಗೆ “ಪವರ್‌’ ಸಿನಿಮಾದಲ್ಲಿ ಅಭಿನಯಿಸುವಾಗ ಚಿತ್ರೀಕರಣಕ್ಕಾಗಿ ಬೆಂಗಳೂರಿಗೆ ಬಂದಿದ್ದೆ. ನಾನು ಕೆಲ ದಿನಗಳ ಇಲ್ಲಿಯೇ ಚಿತ್ರೀಕರಣ ನಡೆದಿತ್ತು. ಅದಾದ ನಂತರ ಮತ್ತೆ ನಾವಿಬ್ಬರೂ “ದ್ವಿತ್ವ’ ಸಿನಿಮಾದಲ್ಲಿ ನಟಿಸಬೇಕಿತ್ತು. ಆದರೆ ಆ ವೇಳೆಗೆ ಪುನೀತ್‌ ನಮ್ಮಿಂದ ದೂರವಾದರು. ಅವರೊಂದಿಗೆ ಮತ್ತೂಮ್ಮೆ ಕೆಲಸ ಮಾಡುವ ಅವಕಾಶ ನಾನು ಕಳೆದುಕೊಂಡೆ. ಈಗಲೂ ನಾನು ಪುನೀತ್‌ ಅವರನ್ನು ಮಿಸ್‌ ಮಾಡಿಕೊಳ್ಳುತ್ತಿದ್ದೇನೆ. ಅವರ ನೆನಪು ಸದಾ ನನ್ನೊಂದಿಗೆ ಹಾಗೆಯೇ ಉಳಿಯಲಿದೆ’ ಎಂದಿದ್ದಾರೆ.

ಇದನ್ನೂ ಓದಿ:ಜಾರುವ ಅಂಗಳದಲ್ಲಿ ನಾವು ಆಡಿದ್ದು ಆ ಒಂದೇ ಒಂದು ಕಾರಣಕ್ಕೆ; ದಿನೇಶ್ ಕಾರ್ತಿಕ್ ಹೇಳಿದ್ದೇನು

ಇದೇ ವೇಳೆ ಬೆಂಗಳೂರಿನ ಬಗ್ಗೆಯೂ ಮಾತನಾಡಿದ ನಟಿ ತ್ರಿಶಾ, “ಇದು ನನಗೆ ಎರಡನೇ ಮನೆ ಇದ್ದಂತೆ. ನಾನು ಚಿಕ್ಕವಳಿದ್ದಾಗ ಸಾಕಷ್ಟು ಸಮಯವನ್ನು ಬೆಂಗಳೂರಿನಲ್ಲಿ ಕಳೆದಿದ್ದೇನೆ. ಇಲ್ಲಿನ ಆಹಾರ ಹಾಗೂ ವಾತಾವರಣ ನನಗೆ ಇಷ್ಟ. ಈಗಲೂ ನನಗೆ ಚೆನ್ನೈನಿಂದ ಬೆಂಗಳೂರಿಗೆ ವಿಮಾನದಲ್ಲಿ ಬರುವುದು ಇಷ್ಟವಾಗುವುದಿಲ್ಲ ನನಗೆ ಚೆನ್ನೈ-ಬೆಂಗಳೂರು ಕಾರು ಸವಾರಿಯೇ ಇಷ್ಟ’ ಎಂದಿದ್ದಾರೆ.

Advertisement

ಇನ್ನು “ಪೊನ್ನಿಯಿನ್‌ ಸೆಲ್ವನ್‌’ ಸಿನಿಮಾ ಬಗ್ಗೆ ಮಾತನಾಡಿದ ತ್ರಿಶಾ, “ಇದೇ ಮೊದಲ ಬಾರಿಗೆ ಈ ಸಿನಿಮಾದಲ್ಲಿ ನಾನು ರಾಣಿಯ ಪಾತ್ರದಲ್ಲಿ ನಟಿಸಿದ್ದೇನೆ. ನನ್ನ ಪಾತ್ರದ ಹೆಸರು ಕುಂದವ. ಇಂಥಹಾ ಅದ್ಭುತವಾದ ಸಿನಿಮಾಕ್ಕೆ ನನ್ನನ್ನು ಆಯ್ಕೆ ಮಾಡಿದ್ದಕ್ಕೆ ಮಣಿರತ್ನಂ ಅವರಿಗೆ ಧನ್ಯವಾದ. ಸಿನಿಮಾ ಚೆನ್ನಾಗಿ ಬಂದಿದ್ದು, ಎಲ್ಲರಿಗೂ ಇಷ್ಟವಾಗಲಿದೆ’ ಎಂಬ ವಿಶ್ವಾಸ ವ್ಯಕ್ತಪಡಿಸಿದರು

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next