Advertisement

ಯಾರಾಗಲಿದ್ದಾರೆ ‘ದ್ವಿತ’ಕ್ಕೆ ನಾಯಕಿ ?  

05:46 PM Jul 27, 2021 | Team Udayavani |

ಬೆಂಗಳೂರು: ವಿಭಿನ್ನ ಪೋಸ್ಟರ್ ಮೂಲಕವೇ ಸ್ಯಾಂಡಲ್ವುಡ್ ನಲ್ಲಿ ಸಂಚಲನ ಮೂಡಿಸಿರುವ ದ್ವಿತ ಸಿನಿಮಾದ ಕುರಿತು ಇದೀಗ ಮತ್ತೊಂದು ಸುದ್ದಿ ಹರಿದಾಡುತ್ತಿದೆ.

Advertisement

ಪವರ್ ಸ್ಟಾರ್ ಪುನೀತ್ ರಾಜಕುಮಾರ್ ನಾಯಕ ನಟರಾಗಿ ಅಭಿನಯಿಸುತ್ತಿರುವ ದ್ವಿತ ಚಿತ್ರಕ್ಕೆ ನಾಯಕಿ ಯಾರಾಗಲಿದ್ದಾರೆ ಎನ್ನುವ ಪ್ರಶ್ನೆಗೆ ಇದೀಗ ಉತ್ತರ ಸಿಗುವ ಕಾಲ ಸನ್ನಿಹಿತವಾಗಿದೆ.

ಪವನ್ ಕುಮಾರ್ ನಿರ್ದೇಶಿಸಲಿರುವ ಈ ಸೈಕಾಲಜಿಕಲ್ ಥ್ರಿಲ್ಲರ್ ಸಿನಿಮಾದಲ್ಲಿ ಪುನೀತ್ ಗೆ ನಾಯಕಿಯಾಗಿ ಬಹುಭಾಷಾ ನಟಿ ತ್ರಿಶಾ ಬರಲಿದ್ದಾರೆ ಎಂಬ ಸುದ್ದಿ ಕೇಳಿಬರುತ್ತಿದೆ.
ತ್ರಿಶಾ ಜೊತೆಗೆ ದ್ವಿತ ಚಿತ್ರತಂಡ ಮಾತುಕತೆ ನಡೆಸುತ್ತಿದೆಯಂತೆ.

‘ಪವರ್’ ಚಿತ್ರದಲ್ಲಿ ಜೊತೆಯಾಗಿದ್ದ ತ್ರಿಶಾ : 

ಇನ್ನು ತ್ರಿಶಾ ಈಗಾಗಲೇ ಕನ್ನಡ ಸಿನಿಮಾದಲ್ಲಿ ನಟಿಸಿದ್ದಾರೆ. ಅದು ಪುನೀತ್ ರಾಜಕುಮಾರ್ ಅವರ ಸಿನಿಮಾದಲ್ಲಿಯೇ ನಟಿಸಿದ್ದು ಎನ್ನುವುದು ಮತ್ತೊಂದು ವಿಶೇಷ.  2014 ರಲ್ಲಿ ಬಿಡುಗಡೆಯಾಗಿದ್ದ ಪುನೀತ್ ರಾಜಕುಮಾರ್ ನಟಿಸಿದ್ದ ಪವರ್ ಸಿನಿಮಾದಲ್ಲಿ ತ್ರಿಯಾ ನಾಯಕಿಯಾಗಿ ನಟಿಸಿದ್ದರು. ಒಂದು ವೇಳೆ ಅವರು ಒಪ್ಪಿಕೊಂಡಿರೆ ಎರಡನೇ ಬಾರಿ ಪುನೀತ್ ಗೆ ನಾಯಕಿಯಾಗಿ ಸ್ಯಾಂಡಲ್ ವುಡ್ ಗೆ ಬರಲಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next