Advertisement

“ವಾಟರ್‌ ಪ್ರೂಫ್’ರಸ್ತೆ ನಿರ್ಮಾಣ

11:09 AM Jul 29, 2022 | Team Udayavani |

ಅಗರ್ತಲಾ: ತ್ರಿಪುರಾದ ಗ್ರಾಮೀಣ ಪ್ರದೇಶಗಳಲ್ಲಿ ನ್ಯಾನೋ ತಂತ್ರಜ್ಞಾನ ಬಳಸಿಕೊಂಡು ವಾಟರ್‌ ಪ್ರೂಫ್ ರಸ್ತೆಗಳನ್ನು ನಿರ್ಮಿಸಲು ಅಲ್ಲಿನ ಸರ್ಕಾರ ನಿರ್ಧರಿಸಿದೆ.

Advertisement

ದೇಶದಲ್ಲಿ ನ್ಯಾನೋ ತಂತ್ರಜ್ಞಾನದ ಮೂಲಕ ವಾಟರ್‌ ಪ್ರೂಫ್ ರಸ್ತೆ ನಿರ್ಮಿಸಿರುವುದು ಇದೇ ಮೊದಲು. ಮಳೆಯಿಂದಾಗಿ ರಸ್ತೆಗಳು ಬೇಗನೇ ಹಾಳಾಗುವುದನ್ನು ತಡೆಯಲು ಈ ಪ್ರಯೋಗಕ್ಕೆ ಮುಂದಾಗಲಾಗಿದೆ.

ರಾಜ್ಯದಲ್ಲಿ 231.64 ಕಿ.ಮೀ ಉದ್ದದ 32 ರಸ್ತೆಗಳನ್ನು ನಿರ್ಮಿಸುವುದಕ್ಕೆ ಕೇಂದ್ರ ಸರ್ಕಾರ, ಪ್ರಧಾನ ಮಂತ್ರಿ ಗ್ರಾಮ ಸಡಕ್‌ ಯೋಜನೆಯಲ್ಲಿ 214.23 ಕೋಟಿ ರೂ. ಅನುದಾನ ಕೊಟ್ಟಿದೆ. ಅದರಲ್ಲಿ 114.23 ಕಿ.ಮೀ. ಉದ್ದದ 16 ರಸ್ತೆಯನ್ನು ನಿರ್ಮಿಸಲು ನ್ಯಾನೋ ತಂತ್ರಜ್ಞಾನ ಬಳಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next