Advertisement

ತ್ರಿಪುರ ಸಿಎಂ ಬಳಿ 3,930 ರೂ; ಈ ತನಕ IT Return ಸಲ್ಲಿಸಿಲ್ಲ

07:26 PM Jan 30, 2018 | Team Udayavani |

ಅಗರ್ತಲಾ : ನಂಬಿದ್ರೆ ನಂಬಿ, ಬಿಟ್ರೆ ಬಿಡಿ; ನಿರಂತರ ಐದನೇ ಬಾರಿಗೆ ಮುಖ್ಯಮಂತ್ರಿಯಾಗಲು ಸ್ಪರ್ಧಿಸುತ್ತಿರುವ ತ್ರಿಪುರ ಮುಖ್ಯಮಂತ್ರಿ ಮಾಣಿಕ್‌ ಸರ್ಕಾರ್‌ ಅವರ ಬಳಿ ಇರುವುದು ಕೇವಲ 3,930 ರೂ. ಮತ್ತು ಈ ತನಕವೂ ಅವರು ಇನ್‌ಕಮ್‌ ಟ್ಯಾಕ್ಸ್‌ ರಿಟರ್ನ್ ಸಲ್ಲಿಸಿಲ್ಲ.

Advertisement

ತ್ರಿಪುರ ವಿಧಾನ ಸಭೆಗೆ ಸ್ಪರ್ಧಿಸಲು ನಾಮ ಪತ್ರ ಸಲ್ಲಿಸಿರುವ ಮಾಣಿಕ್‌ ಸರ್ಕಾರ್‌ ಅವರ ಅಫಿದಾವಿತ್‌ನಲ್ಲಿ ಈ ವಿಷಯ ಬಹಿರಂಗವಾಗಿದೆ.

ಈ ಎಡಪಂಥೀಯ ನಾಯಕ ತನ್ನ ಪೂರ್ಣ ಮಾಸಿಕ ವೇತನವನ್ನು  ಸಿಪಿಎಂಗೆ ದೇಣಿಗೆಯಾಗಿ ನೀಡುತ್ತಾರೆ ಮತ್ತು ಪಕ್ಷದಿಂದ ತನ್ನ ಜೀವನ ನಿರ್ವಹಣೆಗೆಂದು ತಿಂಗಳಿಗೆ 5,000 ರೂ. ಪಡೆಯುತ್ತಾರೆ. 

69ರ ಹರೆಯದ ಈ ಸಿಪಿಎಂ ನಾಯಕನ ಕೈಯಲ್ಲಿ 1,520 ರೂ. ಇದೆ; ರಾಷ್ಟ್ರೀಕೃತ ಬ್ಯಾಂಕ್‌ ಖಾತೆಯಲ್ಲಿ 2,410 ರೂ. ಇದೆ. ಇದಕ್ಕೆ ಹೊರತಾಗಿ ಬೇರೆ ಯಾವ ಬ್ಯಾಂಕ್‌ನಲ್ಲೂ ಅವರು ಖಾತೆ ಹೊಂದಿಲ್ಲ; ಠೇವಣಿಯೂ ಇಲ್ಲ. 

ಸರ್ಕಾರ್‌ ಅವರು ಧನಪುರ ಕ್ಷೇತ್ರದಿಂದ ಸ್ಪರ್ಧಿಸಲು ನಿನ್ನೆ ತಮ್ಮ ನಾಮಪತ್ರ ಸಲ್ಲಿಸಿದ್ದಾರೆ. ಇವರಿಗೆ ಕೃಷಿ ಭೂಮಿಯೂ ಇಲ್ಲ; ವಾಸ್ತವ್ಯದ ನಿವೇಶನವೂ ಇಲ್ಲ. ಇವರು ವಾಸಿಸಿಕೊಂಡಿರುವುದು ರಾಜ್ಯ ಸರಕಾರ ಒದಗಿಸಿರುವ ಅಧಿಕೃತ ಮುಖ್ಯಮಂತ್ರಿ ನಿವಾಸದಲ್ಲಿ. 

Advertisement

ಮಾಣಿಕ್‌ ಸರ್ಕಾರ್‌ ಅವರ ಪತ್ನಿ  ಪಾಂಚಾಲಿ ಭಟ್ಟಾಚಾರ್ಯ ಓರ್ವ ಕೇಂದ್ರ ಸರಕಾರದ ನಿವೃತ್ತ ಉದ್ಯೋಗಿ; ಇವರ ಬಳಿ ಇರುವ ನಗದು 20,140 ರೂ.; ಎರಡು ಬ್ಯಾಂಕ್‌ ಖಾತೆಗಳಲ್ಲಿ ಇರುವ ಹಣ ಅನುಕ್ರಮವಾಗಿ 124,101 ಮತ್ತು 86,473.78 ರೂ. ಇವರ ಹೆಸರಲ್ಲಿ ಮೂರು ನಿರಖು ಠೇವಣಿ ಇವೆ;  ಅವುಗಳು ಅನುಕ್ರಮವಾಗಿ 5 ಲಕ್ಷ, 2 ಲಕ್ಷ ಮತ್ತು 2.25 ಲಕ್ಷ ರೂ. ಅಲ್ಲದೇ ಇವರ ಬಳಿ 20 ಗ್ರಾ ಚಿನ್ನಾಭರಣ ಇದೆ.

Advertisement

Udayavani is now on Telegram. Click here to join our channel and stay updated with the latest news.

Next