Advertisement

ತ್ರಿಬಲ್ ರೈಡಿಂಗ್: ನಿಯಂತ್ರಣ ಕಳೆದು ಹಳ್ಳಕ್ಕೆ ಬಿದ್ದ ಬೈಕ್, ಇಬ್ಬರ ಸಾವು, ಓರ್ವನಿಗೆ ಗಾಯ

07:10 PM Apr 04, 2021 | Team Udayavani |

ಚಾಮರಾಜನಗರ: ಬೈಕ್ ಹಳ್ಳಕ್ಕೆ ಮಗುಚಿ ಬಿದ್ದು ಮೂವರು ಸವಾರರ ಪೈಕಿ ಇಬ್ಬರು ಸ್ಥಳದಲ್ಲೇ ಮೃತಪಟ್ಟು, ಇನ್ನೋರ್ವ ಗಾಯಗೊಂಡಿರುವ ಘಟನೆ ತಾಲೂಕಿನ ಅರಕಲವಾಡಿ ಸಮೀಪದ ಮೂಡಲ ಹೊಸಹಳ್ಳಿ ಗ್ರಾಮದಲ್ಲಿ ಭಾನುವಾರ ಸಂಜೆ ನಡೆದಿದೆ.

Advertisement

ತಮಿಳುನಾಡು ಮೂಲದ ಕುಮಾರ (45), ಮೂಡಲ ಹೊಸಹಳ್ಳಿ ಗ್ರಾಮದ ಬಸವಯ್ಯ (65) ಮೃತಪಟ್ಟವರು. ಮೂಡಲ ಹೊಸಹಳ್ಳಿಯ ಮಹದೇವಯ್ಯ ಗಾಯಗೊಂಡು ನಗರದ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ತಮಿಳುನಾಡಿನವರಾದ ಕುಮಾರ್ ಹೊಸಹಳ್ಳಿ ಗ್ರಾಮದ ಜಮೀನಿನಲ್ಲಿ ಕೆಲಸ ಮಾಡಿಕೊಂಡಿದ್ದರು. ಬಸವಯ್ಯ, ಮಹದೇವಯ್ಯ ಸ್ನೇಹಿತರಾಗಿದ್ದು, ಮೂವರೂ ವಡ್ಡರಹಳ್ಳಿಗೆ ಬೈಕ್‌ನಲ್ಲಿ ಹೋಗುತ್ತಿದ್ದರು. ಬೈಕ್ ನಿಯಂತ್ರಣ ತಪ್ಪಿ, ಹಳ್ಳಕ್ಕೆ ಬಿದ್ದಿದೆ. ಬೈಕ್ ಚಾಲನೆ ಮಾಡುತ್ತಿದ್ದ ಕುಮಾರ ಹಾಗೂ ಮಧ್ಯದಲ್ಲಿ ಕುಳಿತಿದ್ದ ಬಸವಯ್ಯ ತೀವ್ರ ಗಾಯಗಳಿಂದ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಹಿಂಬದಿ ಕುಳಿತಿದ್ದ ಮಹದೇವಯ್ಯ ಅವರಿಗೆ ಗಾಯಗಳಾಗಿವೆ.

ಇದನ್ನೂ ಓದಿ :ಮನೆಕೆಲಸದವಳ ಮೇಲೆ ಪ್ರೀತಿ‌, ತನ್ನ ಪತ್ನಿಯನ್ನೇ ಮನೆಯಿಂದ ಹೊರಹಾಕಿದ ಪತಿ

ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅನಿತಾ ಹದ್ದಣ್ಣವರ್, ಡಿವೈಎಸ್‌ಪಿ ಪ್ರಿಯದರ್ಶಿನಿ ಸಾಣೆಕೊಪ್ಪ, ಎಸ್‌ಐ ಹನುಮಂತ ಉಪ್ಪಾರ ಸ್ಥಳಕ್ಕೆ ಭೇಟಿ ನೀಡಿದ್ದರು. ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next