ಹಸ್ತಾಕ್ಷರದ ಅಭಿಯಾನ ನಡೆಸಿ ಜತೆಗೆ ಸಾರ್ವಜನಿಕ ಸಭೆಗಳನ್ನು ಆಯೋಜಿಸಿ ನಿರ್ಣಯ ಕೈಗೊಂಡು ರಾಷ್ಟ್ರಪತಿ,
ಪ್ರಧಾನಮಂತ್ರಿ, ಕಾನೂನು ಸಚಿವಾಲಯ, ಕಾನೂನು ಅಯೋಗಕ್ಕೆ ಸಲ್ಲಿಸಲು ಅಖೀಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ನಿರ್ಧರಿಸಿದೆ ಎಂದು ಮಂಡಳಿ ಸದಸ್ಯರಾಗಿರುವ ಕುಡಾ ಅಧ್ಯಕ್ಷ ಮೊಹಮ್ಮದ ಅಸಗರ ಚುಲ್‌ಬುಲ್ ಹೇಳಿದರು.
Advertisement
ಹಜ್ ಸಮಿತಿ ನಗರದ ನಯಾಮೋಹಲ್ಲಾದಲ್ಲಿ ನಡೆದ ಸಲಹಾ ಸಭೆ ನಡೆಸಿ ಮಾತನಾಡಿದ ಅವರು, ಮಧ್ಯಪ್ರದೇಶದ ಭೋಪಾಲ ರಾಜಧಾನಿಯಲ್ಲಿ ನಡೆದ ಕಾನೂನು ಮಂಡಳಿ ಸಭೆಯಲ್ಲಿ ದೇಶದ ಸರ್ವೋಚ್ಚ ನ್ಯಾಯಾಲಯ ನೀಡಿದ ತೀರ್ಪಿನ ಪ್ರಕಾರ ಆರು ತಿಂಗಳೊಳಗೆ ತ್ರಿವಳಿ ತಲಾಖ್ ಬಗ್ಗೆ ಕಾನೂನು ರೂಪಿಸಬೇಕೆಂಬ ಆದೇಶದ ಪ್ರಕಾರದ ಹಿನ್ನೆಲೆಯಲ್ಲಿ ಹಸ್ತಾಕ್ಷರದ ಅಭಿಯಾನ ನಿರ್ಣಯಿಸಲಾಗಿದೆ ಎಂದು ವಿವರಿಸಿದರು. ದೇಶದ ಸಂವಿಧಾನದಲ್ಲಿ ತಮ್ಮ-ತಮ್ಮ ಧರ್ಮಾನುಸಾರ ಜೀವನ ನಡೆಸಬೇಕೆಂದು ಸ್ಪಷ್ಟವಾಗಿ ಉಲ್ಲೇಖೀಸಲಾಗಿದೆ. ಆದರೆ ಕೇಂದ್ರದ ಬಿಜೆಪಿ ಸರ್ಕಾರ ವಿನಾಕಾರಣ ಶರಿಯತ್ ನಲ್ಲಿ ಹಸ್ತಕ್ಷೇಪ ಮಾಡಲು ಹುನ್ನಾರ ನಡೆಸಿ ತೊಂದರೆ ನೀಡಲಾಗುತ್ತಿದೆ ಎಂದು ಆರೋಪಿಸಿದರು.