Advertisement

ಉಳ್ಳಾಗಡ್ಡಿ ಸಂಗ್ರಹ ಕಾರ್ಖಾನೆ ನಿರ್ಮಾಣಕ್ಕೆ ಯತ್ನ

11:23 AM Jun 09, 2019 | Team Udayavani |

ಗಜೇಂದ್ರಗಡ: ಈ ಭಾಗದ ಮತದಾರರ ಋಣ ತೀರಿಸುವ ನಿಟ್ಟಿನಲ್ಲಿ ಇಲ್ಲಿ ಅತಿಹೆಚ್ಚು ಬೆಳೆಯುವ ಉಳ್ಳಾಗಡ್ಡಿ ಫಸಲನ್ನು ಅಧಿಕ ದಿನಗಳ ಕಾಲ ಕೆಡದಂತೆ ಸಂಗ್ರಹಿಸಿಡುವ ಕಾರ್ಖಾನೆ ನಿರ್ಮಾಣಕ್ಕೆ ಶ್ರಮಿಸಲಾಗುವುದು ಎಂದು ಸಂಸದ ಶಿವಕುಮಾರ ಉದಾಸಿ ಹೇಳಿದರು.

Advertisement

ಪಟ್ಟಣದ ಶಾಸಕರ ನಿವಾಸ ಆವರಣದಲ್ಲಿ ಶನಿವಾರ ನಡೆದ ಕಾರ್ಯಕರ್ತರ ಅಭಿನಂದನಾ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಗಜೇಂದ್ರಗಡ ಹಾಗೂ ರೋಣ ಭಾಗದಲ್ಲಿ ಅತಿಹೆಚ್ಚು ಪ್ರಮಾಣದಲ್ಲಿ ಉಳ್ಳಾಗಡ್ಡಿ ಬೆಳೆಯಲಾಗುತ್ತದೆ. ಆದರೆ ರೈತರು ಬೆಳೆಯನ್ನು ಹೊತ್ತು ಬೆಂಗಳೂರಿನಂತಹ ದೊಡ್ಡ ನಗರಗಳಿಗೆ ಹೊತ್ತೂಯ್ದರೆ, ಸರಿಯಾದ ಬೆಲೆ ಸಿಗದೇ ಸಾಲಕ್ಕೆ ಸಿಲುಕುವಂತೆ ಆಗಿದೆ. ಇದನ್ನು ತಪ್ಪಿಸುವ ಉದ್ದೇಶದಿಂದ ಮಹಾರಾಷ್ಟ್ರ ರಾಜ್ಯದ ಜಲಗಾಂವ್‌ನಲ್ಲಿ ಉಳ್ಳಾಗಡ್ಡಿಯಲ್ಲಿನ ನೀರಿನಾಂಶ ಹೀರಿ ಅದು ಕೆಡದಂತೆ ನೋಡಿಕೊಳ್ಳಲು ಬಹುದೊಡ್ಡ ಕಾರ್ಖಾನೆಯಿದೆ. ಆ ಉಳ್ಳಾಗಡ್ಡಿಗೂ ಬೇಡಿಕೆ ಇದೆ. ಈ ಕುರಿತು ವಿಜ್ಞಾನಿಗಳ ಜೊತೆಗೂ ಚರ್ಚಿಸಿದ್ದೇನೆ. ರೋಣ ಭಾಗದಲ್ಲಿ ಇಂತಹ ಕಾರ್ಖಾನೆ ನಿರ್ಮಾಣ ಮಾಡಿದರೆ ರೈತರು ಬೆಳೆದ ಉಳ್ಳಾಗಡ್ಡಿಗೆ ಉತ್ತಮ ಬೆಲೆ ಜೊತೆಗೆ ಬೇಡಿಕೆಯೂ ಬರಬಹುದು ಎನ್ನುವ ಮಹದಾಸೆ ಹೊಂದಿದ್ದೇನೆ. ಜೊತೆಗೆ ನೀರಾವರಿ, ನದಿಗಳ ಜೋಡಣೆ, ರಾಷ್ಟ್ರೀಯ ಹೆದ್ದಾರಿಗಳ ನಿರ್ಮಾಣಕ್ಕೂ ಆದ್ಯತೆ ನೀಡಲಾಗುವುದು ಎಂದರು.

ಶಾಸಕ ಕಳಕಪ್ಪ ಬಂಡಿ ಮಾತನಾಡಿ, ನನ್ನ ಮತ್ತು ಸಂಸದ ಶಿವಕುಮಾರ ಉದಾಸಿ ಅವರ ಗೆಲುವಿಗೆ ಕಾರ್ಯಕರ್ತರೇ ಕಾರಣ. ಕಾಂಗ್ರೆಸ್‌ ಮತ್ತು ಜೆಡಿಎಸ್‌ ಮುಖಂಡರ ತಳಪಾಯದ ಪಾರ್ಟಿಯಾಗಿದೆ. ಆದರೆ ಬಿಜೆಪಿ ಕಾರ್ಯಕರ್ತರು ಕಟ್ಟಿದ ಪಕ್ಷವಾಗಿದೆ. ಈ ನಿಟ್ಟಿನಲ್ಲಿ ಮತಕ್ಷೇತ್ರದ ಅಭಿವೃದ್ಧಿಗೆ ಸಂಸದರು ಕೇಂದ್ರದಿಂದ ಹಲವಾರು ಯೋಜನೆ ಮಂಜೂರು ತರುವಲ್ಲಿ ಮುಂದಾಗುತ್ತಾರೆ ಎಂಬ ವಿಶ್ವಾಸವಿದೆ ಎಂದರು.

ವಿಪ ಸದಸ್ಯ ಎಸ್‌.ವಿ. ಸಂಕನೂರ ಮಾತನಾಡಿ, ರೋಣ ಮತಕ್ಷೇತ್ರ ಸೇರಿದಂತೆ ಗದಗ ಜಿಲ್ಲೆಯಲ್ಲಿ ಅತಿಹೆಚ್ಚು ಮತಗಳು ಸಂಸದ ಶಿವಕುಮಾರ ಉದಾಸಿ ಅವರಿಗೆ ದೊರೆತಿದ್ದು, ಮತದಾರರ ಸೇವೆ ಗೈಯಲು ಮತ್ತೂಮ್ಮೆ ಅವಕಾಶ ಸಿಕ್ಕಿದೆ. ಕೇಂದ್ರದಿಂದ ಹಲವಾರು ಕಾರ್ಯಕ್ರಮ ಅನುಷ್ಠಾನಗಳಿಸಲು ಮುಂದಾಗಬೇಕು. ಮುಂಬರುವ ಸಚಿವ ಸಂಪುಟ ವಿಸ್ತರಣೆಯಲ್ಲಿ ಶಿವಕುಮಾರ ಉದಾಸಿ ಅವರಿಗೆ ಸಚಿವ ಸ್ಥಾನ ದೊರೆಯುವುದರಲ್ಲಿ ಯಾವುದೇ ಸಂದೇಹವಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಟಕ್ಕೇದ ದರ್ಗಾದ ಹಜರತ್‌ ನಿಜಾಮುದ್ದಿಶಾ ಅಶ್ರಫಿ ಸಾನ್ನಿಧ್ಯ ವಹಿಸಿದ್ದರು. ರವಿ ದಂಡಿನ್‌, ಅಶೋಕ ನವಲಗುಂದ, ರಿಕಬ್‌ಚಂದ ಬಾಗಮಾರ, ಸಂಗನಗೌಡ ಮಾಲಿಪಾಟೀಲ, ಮುತ್ತಣ್ಣ ಲಿಂಗನಗೌಡ್ರ, ಬಿ.ವಿ. ಕಂಬಳ್ಯಾಳ, ಅಪ್ಪಣ್ಣ ಮಹೇಂದ್ರಕರ, ಶ್ರೀಪಾದರಾವ್‌ ಕುಲಕರ್ಣಿ, ವಿರೂಪಾಕ್ಷಪ್ಪ ಕರಿಹೊಳಿ, ಎಂ.ಎಸ್‌. ಕರಿಗೌಡರ, ಮುತ್ತು ಕಡಗದ, ಅಂಬರೀಶ ಬಳಿಗೇರ, ಇಂದಿರಾ ತೇಲಿ, ಭಾಸ್ಕರ ರಾಯಬಾಗಿ, ವಿಜಯಲಕ್ಷ್ಮೀ ಚಟೇrರ, ಸುಮಿತ್ರಾ ತೊಂಡಿಹಾಳ, ಲಕ್ಷ್ಮೀ ಮುದೋಳ, ಕವಿತಾ ಜಾಲಿಹಾಳ ಸೇರಿದಂತೆ ಇತರರು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next