Advertisement

ಕತ್ತಲ ಬದುಕಿನಲ್ಲಿ ತ್ರಿಕೋನ ಪ್ರೇಮ

10:04 AM Aug 31, 2019 | mahesh |

ಸುಮಾರು ನಾಲ್ಕು ವರ್ಷಗಳ ಹಿಂದೆ ‘ಭಾಗ್ಯರಾಜ್‌’ ಚಿತ್ರದಲ್ಲಿ ನಾಯಕ ನಟನಾಗಿ ಕಾಣಿಸಿಕೊಂಡಿದ್ದ ನಟ ಲೂಸ್‌ಮಾದ ಯೋಗಿ ಸೋದರ ಮಹೇಶ್‌ ಈಗ ‘ತಮಸ್‌’ ಎನ್ನುವ ಮತ್ತೂಂದು ಚಿತ್ರದ ಮೂಲಕ ನಾಯಕನಾಗಿ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ. ಕೆಲ ತಿಂಗಳಿನಿಂದ ಚಿತ್ರದ ಪ್ರೀ-ಪ್ರೊಡಕ್ಷನ್‌ ಕೆಲಸಗಳಲ್ಲಿ ನಿರತವಾಗಿದ್ದ ‘ತಮಸ್‌’ ಚಿತ್ರತಂಡ, ಇತ್ತೀಚೆಗೆ ಚಿತ್ರದ ಮುಹೂರ್ತವನ್ನು ಆಚರಿಸಿಕೊಂಡು ಚಿತ್ರೀಕರಣಕ್ಕೆ ಹೊರಟಿದೆ.

Advertisement

ಅಂದಹಾಗೆ, ‘ತಮಸ್‌’ ಚಿತ್ರದಲ್ಲಿ ನಾಯಕ ನಟ ಮಹೇಶ್‌ ಅಂಧ ಯುವಕನಾಗಿ ಕಾಣಿಸಿಕೊಳ್ಳುತ್ತಿದ್ದಾರಂತೆ. ‘ಅನಾಥ ಆಶ್ರಮದಲ್ಲಿ ಬೆಳೆದ ಹುಡುಗ ಹೇಗೆ ಸ್ವಾವಲಂಭಿಯಾಗಿ ತನ್ನ ಬದುಕನ್ನು ಕಟ್ಟಿಕೊಳ್ಳುತ್ತಾನೆ ಅನ್ನೋದು ನನ್ನ ಪಾತ್ರ. ಇದರ ಜೊತೆಗೆ ನವಿರಾದ ಲವ್‌ಸ್ಟೋರಿಯೊಂದು ಚಿತ್ರದಲ್ಲಿ ಬರುತ್ತದೆ. ಮೊದಲ ಬಾರಿಗೆ ಅಂಧ ಯುವಕನಾಗಿ ಕಾಣಿಸಿಕೊಳ್ಳುತ್ತಿರುವುದರಿಂದ, ಪಾತ್ರಕ್ಕೆ ಒಂದಷ್ಟು ತಯಾರಿ ಮಾಡಿಕೊಳ್ಳುತ್ತಿದ್ದೇನೆ’ ಎಂದು ಪಾತ್ರದ ಬಗ್ಗೆ ವಿವರಣೆ ಕೊಡುತ್ತಾರೆ ಮಹೇಶ್‌.

ಇನ್ನು ‘ತಮಸ್‌’ ಚಿತ್ರ ವಿಜಯ ಲಕ್ಷಿ ್ಮೕ ಮಂಜುನಾಥ ರೆಡ್ಡಿ ಅವರ ‘ಕತ್ತಲು’ ಕಾದಂಬರಿ ಆಧಾರಿತವಾಗಿದ್ದು, ಈ ಹಿಂದೆ ‘ತಾಂಡವ’, ‘ರಾಮಸೇತು’ ಚಿತ್ರಗಳನ್ನು ನಿರ್ದೇಶಿಸಿದ್ದ, ಸ್ವಾತಿ ಅಂಬರೀಶ್‌ ಈ ಚಿತ್ರದ ನಿರ್ಮಾಣ ಮತ್ತು ನಿರ್ದೇಶನ ಮಾಡುತ್ತಿದ್ದಾರೆ.

ಚಿತ್ರದ ಬಗ್ಗೆ ಮಾತನಾಡುವ ನಿರ್ದೇಶಕ ಸ್ವಾತಿ ಅಂಬರೀಶ್‌, ‘ತಮಸ್‌ ಅಂದ್ರೆ ಸಂಸ್ಕೃತದಲ್ಲಿ ಕತ್ತಲು ಎಂಬ ಅರ್ಥವಿದೆ. ಚಿತ್ರದಲ್ಲಿ ಕೂಡ ಕಥಾ ನಾಯಕ ಅಂಧನಾಗಿರುತ್ತಾನೆ. ಆತನ ಬದುಕಿನಲ್ಲಿ ಏನೇನು ನಡೆಯುತ್ತದೆ ಅನ್ನೋದೇ ಚಿತ್ರದ ಒಂದು ಎಳೆ. ಜೊತೆಗೆ ಚಿತ್ರದಲ್ಲಿ ತ್ರಿಕೋನ ಪ್ರೇಮಕಥೆ ಇದೆ. ನಾಲ್ಕು ಪ್ರಮುಖ ಪಾತ್ರಗಳ ಸುತ್ತ ಚಿತ್ರದ ಕಥೆ ನಡೆಯುತ್ತದೆ. ಮುಂದಿನ ವರ್ಷದ ಸಂಕ್ರಾಂತಿ ವೇಳೆಗೆ ಚಿತ್ರವನ್ನು ತೆರೆಗೆ ತರುವ ಯೋಚನೆ ಇದೆ’ ಎಂದು ವಿವರಣೆ ಕೊಡುತ್ತಾರೆ.

ಉಳಿದಂತೆ ‘ತಮಸ್‌’ ಚಿತ್ರದಲ್ಲಿ ಅಮೃತಾ ಗೌಡ, ರವಿಕುಮಾರ್‌, ಟೆನ್ನಿಸ್‌ ಕೃಷ್ಣ, ಸೋನಂ ರೈ, ಅಶ್ವಿ‌ನಿಗೌಡ ಮೊದಲಾದವರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ. ಚಿತ್ರದಲ್ಲಿ ಒಟ್ಟು 4 ಹಾಡುಗಳಿದ್ದು, ಅನಂತ ಆರ್ಯನ್‌ ಹಾಡುಗಳಿಗೆ ಸಂಗೀತ ಸಂಯೋಜಿಸುತ್ತಿದ್ದಾರೆ. ಚಿತ್ರಕ್ಕೆ ಪವನ್‌ ಕುಮಾರ್‌ ಛಾಯಾಗ್ರಹಣವಿದೆ. ಚಿಕ್ಕಬಳ್ಳಾಪುರ, ದೇವನಹಳ್ಳಿ, ಚಿಕ್ಕಮಗಳೂರು ಸುತ್ತಮುತ್ತ ಚಿತ್ರದ ಶೂಟಿಂಗ್‌ಗೆ ಚಿತ್ರತಂಡ ಪ್ಲಾನ್‌ ಹಾಕಿಕೊಂಡಿದೆ. ಒಟ್ಟಾರೆ ‘ತಮಸ್‌’ ಮೂಲಕ ಮತ್ತೆ ರೀ-ಎಂಟ್ರಿ ಕೊಡುತ್ತಿರುವ ಮಹೇಶ್‌, ಈ ಬಾರಿಯಾದರೂ ಗೆಲುವಿನ ನಗೆ ಬೀರುತ್ತಾರಾ ಅನ್ನೋದು ಚಿತ್ರ ತೆರೆಗೆ ಬಂದ ಮೇಲಷ್ಟೇ ಗೊತ್ತಾಗಲಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next