Advertisement

ಟ್ರೀಸಾ- ಗಾಯತ್ರಿ ಸೆಮಿಫೈನಲ್‌ ಪ್ರವೇಶ

11:41 PM Mar 17, 2023 | Team Udayavani |

ಬರ್ಮಿಂಗ್‌ಹ್ಯಾಮ್‌: ಭಾರತದ ಟ್ರೀಸಾ ಜಾಲಿ-ಗಾಯತ್ರಿ ಗೋಪಿಚಂದ್‌ “ಆಲ್‌ ಇಂಗ್ಲೆಂಡ್‌ ಬ್ಯಾಡ್ಮಿಂಟನ್‌” ಚಾಂಪಿಯನ್ಸ್‌ ವನಿತಾ ಡಬಲ್ಸ್‌ ನಲ್ಲಿ ಸತತ 2ನೇ ಸಲ ಸೆಮಿಫೈನಲ್‌ ಪ್ರವೇಶಿಸಿದ್ದಾರೆ.

Advertisement

ವಿಶ್ವದ 17ನೇ ರ್‍ಯಾಂಕಿಂಗ್‌ ಆಟಗಾರ್ತಿಯರಾದ ಟ್ರೀಸಾ ಜಾಲಿ- ಗಾಯತ್ರಿ ಗೋಪಿಚಂದ್‌ ಸೇರಿಕೊಂಡು ಚೀನದ ನೂತನ ಜೋಡಿಯಾದ ಲೀ ವೆನ್‌ ಮೀ-ಲಿಯು ಕ್ಸುವಾನ್‌ ಕ್ಸುವಾನ್‌ ಅವರನ್ನು 21-14, 18-21, 21-12ರಿಂದ ಮಣಿಸಿದರು. ಟ್ರೀಸಾ- ಗಾಯತ್ರಿ ಈ ಕೂಟದಲ್ಲಿ ಉಳಿದಿರುವ ಭಾರತದ ಅಂತಿಮ ಭರವಸೆಯಾಗಿದ್ದಾರೆ. 2022ರ ಪಂದ್ಯಾವಳಿಯಲ್ಲೂ ಇವರು ಸೆಮಿಫೈನಲ್‌ ಪ್ರವೇಶಿಸಿದ್ದರು.

ಹಿಂದಿನ ಸುತ್ತುಗಳಲ್ಲಿ ಟ್ರೀಸಾ ಜಾಲಿ-ಗಾಯತ್ರಿ ಗೋಪಿಚಂದ್‌ ಅಮೋಘ ಪ್ರದರ್ಶನ ನೀಡಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next