ಹಳೆಯ ಮಾದರಿಯ ನೀರಿನ ಬಾಟಲ್‍ಗಳು ನಿಮಗೆ ಬೋರ್ ಆಗಿವೆ ? ನೀವು ಹೊಸ ಬಾಟಲಿ ಖರೀದಿಸಲು ಪ್ಲ್ಯಾನ್ ಮಾಡಿದ್ದೀರಾ ? ಹಾಗಾದರೆ ತಡವೇಕೆ ? ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ ವೆರೈಟಿ ಡಿಸೈನ್‍ಗಳ ಆಕರ್ಷಕ ವಾಟರ್ ಬಾಟಲ್‍ಗಳು.
ಬೇಸಿಗೆ ಬೇಗೆಯಲ್ಲಿ ದಾಹ ನೀಗಿಸಲು ಬಾಟಲಿ ನೀರು ಸಹಾಯಕ್ಕೆ ಬರುತ್ತವೆ. ದೂರದ ಪ್ರಯಾಣ, ಕಾಲೇಜು ಇಲ್ಲವೆ ಆಫೀಸ್‍ಗೆ ಹೋಗುವ ಮುನ್ನ ನೀರಿನ ಬಾಟಲಿ ತಪ್ಪದೆ ತೆಗೆದುಕೊಂಡು ಹೋಗುವುದು ಆರೋಗ್ಯದ ದೃಷ್ಟಿಯಿಂದ ಒಳ್ಳೆಯದು. ಅಂಗಡಿಗಳಲ್ಲಿ ದೊರೆಯುವ ಮಿನಿರಲ್ ವಾಟರ್ ಗಳಿಗಿಂತ ಮನೆಯಿಂದಲೇ ಕೊಂಡೊಯ್ಯುವುದು ಉತ್ತಮ. ಒಂದು ಚೆಂದನೆಯ ವಾಟರ್ ಬಾಟಲ್ ಬ್ಯಾಗ್‍ನಲ್ಲಿ ಸಿಕ್ಕಿಸಿಕೊಂಡು ಹೋಗುವುದು ಫ್ಯಾಶನ್. ಒಂದಿಷ್ಟು ಹೊಸ ಶೈಲಿಯ ವಾಟರ್ ಬಾಟಲ್ ಇಲ್ಲಿವೆ ನೋಡಿ…
ಹೈಡ್ರೊ ಫ್ಲಾಸ್ಕ್ : ಹೈಡ್ರೊ ಫ್ಲಾಸ್ಕ್ ಉತ್ಸಾಹಿ ಪ್ರವಾಸಿಗರಿಗೆ, ಟ್ರೆಕ್ಕಿಂಗ್ ಪ್ರಿಯರಿಗೆ ಖಂಡಿತ ಇಷ್ಟವಾಗುತ್ತದೆ. ಏಕೆಂದರೆ ಈ ಬ್ರಾಂಡ್‌ನ ಬಾಟಲಿಗಳು ಅತ್ಯುತ್ತಮವಾಗಿವೆ. ಆರಾಮದಾಯಕವಾದ, ಪ್ಲಾಸ್ಟಿಕ್ ಸ್ವಿಂಗ್ ಹ್ಯಾಂಡಲ್ ಅನ್ನು ಹೊಂದಿವೆ, ಮತ್ತು ವಿವಿಧ ಗಾತ್ರಗಳು ಮತ್ತು ಬಣ್ಣಗಳಲ್ಲಿ ಮಾರಾಟದಲ್ಲಿವೆ.
ಇಕೊವೆಸೆಲ್ : ಸದ್ಯ ಮಾರುಕಟ್ಟೆಯಲ್ಲಿ ಬಹುಬೇಡಿಕೆಯಲ್ಲಿರುವ ಇಕೊವೆಸೆಲ್ ವಾಟರ್ ಬಾಟಲ್ ಹಲವು ವೈಶಿಷ್ಟ್ಯತೆಗಳಿಂದ ಕೂಡಿದೆ. ನೀರು-ತಂಪಾಗಿಸುವ ಗುಣಲಕ್ಷಣಗಳ ಹೊಂದಿದೆ. ದೀರ್ಘಕಾಲ ಪಾನೀಯಗಳನ್ನು ತಂಪಾಗಿರಿಸುತ್ತದೆ (ಅಥವಾ ಬಿಸಿಯಾಗಿರುತ್ತದೆ). ಇಕೊವೆಸೆಲ್ ಬಾಟಲ್ ನಲ್ಲಿ ತಣ್ಣೀರು ಮತ್ತು ಪಾನೀಯಗಳು 100 ಗಂಟೆಗಳ ಕಾಲ ತಣ್ಣಗಿರುತ್ತದೆ ಎಂದು ಹೇಳಲಾಗುತ್ತದೆ,
ಕಲರ್ ಫುಲ್ ನೋಟ್‍ಬುಕ್ ಬಾಟಲ್ : ನೋಟ್ ಬುಕ್ ನಂತೆ ಕಾಣುವ ಈ ಬಾಟಲ್ ತುಂಬ ಹಗುರ. ಬ್ಯಾಗ್‍ನಲ್ಲಿಯೂ ಭಾರವೆನ್ನಿಸುವುದಿಲ್ಲ. ಕೈಯಲ್ಲಿಯೂ ಅರಾಮಾಗಿ ಹಿಡಿದುಕೊಂಡು ಹೋಗಬಹುದು. ಇದರ ಬೆಲೆ ಕೂಡ ಕಡಿಮೆ. ಪ್ಲಾಸ್ಟಿಕ್ ನಿಂದ ತಯಾರಿಸಲ್ಪಟ್ಟ ಹಲವು ಬಗೆಯ ಬಣ್ಣಗಳಲ್ಲಿ ನೋಟ್ ಬುಕ್ ವಾಟರ್ ಬಾಟಲ್ ಸಿಗುತ್ತವೆ.
ಸೆಲ್ಲೋ ಪ್ಲಾಸ್ಟಿಕ್ ವಾಟರ್ ಬಾಟಲ್ : ಮಾರುಕಟ್ಟೆಯಲ್ಲಿ ಸೆಲ್ಲೋ ಬ್ರ್ಯಾಂಡ್ ನ ಸಾಕಷ್ಟು ವಸ್ತುಗಳಿವೆ. ಒಳ್ಳೆಯ ಗುಣಮಟ್ಟಕ್ಕೆ ಹೆಸರುವಾಸಿಯಾಗಿರುವ ಸೆಲ್ಲೋ ನೀರಿನ ಬಾಟಲ್ ಕೂಡ ಪರಿಚಯಿಸಿದೆ. ಪಾಲಿಪ್ರೊಪಿಲೀನ್ ಪ್ಲಾಸ್ಟಿಕ್‍ನಿಂದ ವಿನ್ಯಾಸಗೊಳಿಸಿರುವ ನೀಲಿ ಬಣ್ಣದ ವಾಟರ್ ಬಾಟಲ್ ಮಾರುಕಟ್ಟೆಯಲ್ಲಿವೆ. ಕೈಗೆಟುಕುವ ದರದ ಸೆಲ್ಲೋ ಬಾಟಲ್ ಸುರಕ್ಷತೆಯ ದೃಷ್ಟಿಯಲ್ಲಿಯೂ ನಂಬರ್ ಒನ್. ಬಾಯಿ ಮುಚ್ಚಳದಿಂದ ನೀರು ಸೋರುವುದಿಲ್ಲ. ಇದರಿಂದ ಆರಾಮಾಗಿ ಬ್ಯಾಗ್‍ನಲ್ಲಿ ಇಟ್ಟುಕೊಳ್ಳಬಹುದು.
ಅಲ್ಯೂಮಿನಿಯಂ ಸಿಪ್ಪರ್ ಬಾಟಲ್ : ವಿವಿಧ ಬಗೆಯ ಡಿಸೈನ್‍ಗಳ ಸಿಪ್ಪರ್ ಬಾಟಲ್ ಅಲ್ಯೂಮಿನಿಯಂನಿಂದ ಅಭಿವೃದ್ಧಿ ಪಡಿಸಲಾಗಿದೆ. ಇದರಲ್ಲಿ ಬಿಸಿ ಹಾಗೂ ತಣ್ಣನೇಯ ನೀರು ಸಂಗ್ರಹಿಸಬಹುದು. ನೆಲಕ್ಕೆ ಬಿದ್ದರೂ ಒಡೆಯದ ಇದು ದೀರ್ಘಕಾಲಿಕ ಬಾಳಿಕೆ ಬರಲಿದೆ.
ತಾಮ್ರದ ಬಾಟಲ್ : ತಾಮ್ರದ ಪಾತ್ರೆಗಳಲ್ಲಿಯ ನೀರು ಸೇವನೆ ಆರೋಗ್ಯಕ್ಕೆ ಒಳ್ಳೆಯದು. ಮಾರುಕಟ್ಟೆಯಲ್ಲಿ ತಾಮ್ರದಿಂದ ತಯಾರಿಸಲ್ಪಟ್ಟ ನೀರಿನ ಬಾಟಲ್ ಗಳಿವೆ. ಇದರ ಮೇಲ್ಮೈ ಕೂಡ ಚಿತ್ತಾರಗಳಿಂದ ಕೂಡಿದ್ದು ನೋಡಲು ಆಕರ್ಷಕವಾಗಿದೆ.