Advertisement

ಫ್ಯಾಷನ್‌ ಲೋಕ; ಸೂಪರ್‌ ಲುಕ್‌ಗೆ ಬೆಸ್ಟ್‌ ಸ್ಕಾರ್ಫ್ ಆಯ್ಕೆ ಹೇಗೆ?

05:35 PM Aug 10, 2019 | Team Udayavani |

ಕುಡ್ತಾ ಟಾಪ್‌ ಪ್ಯಾಂಟ್‌.. ಅದರ ಮೇಲೊಂದು ಸ್ಕಾರ್ಫ್ ಈಗ ಟ್ರೆಂಡಿಂಗ್‌. ಕಾಲೇಜು ಯುವತಿಯರಿಗಂತೂ ಇದು ಮೆಚ್ಚಿನ ಉಡುಪು. ಕಾಲೇಜು, ಆಫೀಸಿಗೆ, ದಿನಬಳಕೆಗೆ ಈ ಉಡುಪು ಹೆಚ್ಚು ಆಯ್ಕೆ ಮಾಡುತ್ತಾರೆ. ಇದು ಹೆಚ್ಚು ಲುಕ್‌ ನೀಡುತ್ತದೆ. ಇದು ಕೇವಲ ಟಾಪ್‌ ಗಳಿಗೆ ಮಾತ್ರ ಮೀಸಲಲ್ಲ. ಜೀನ್ಸ್‌  ಟಾಪ್ ಗಳಿಗೂ ಸ್ಕಾರ್ಫ್ ಬಳಕೆ ಮಾಡಬಹುದು.

Advertisement

ಯಾವುದಕ್ಕೆಲ್ಲ ಸೂಕ್ತ?
ಜೀನ್ಸ್‌  ಪ್ಯಾಂಟ್‌, ಟಾಪ್‌ ಗಳಿಗೆ ಸ್ಕಾರ್ಫ್ ಧರಿಸಬಹದು. ಇದು ಉಡುಪಿಗೆ ಇನ್ನಷ್ಟು ಸ್ಟೈಲಿಶ್‌ ಲುಕ್‌ ನೀಡುತ್ತದೆ.

ಕುಡ್ತಾ ಟಾಪ್‌
ಕುಡ್ತಾ ಟಾಪ್‌ಗೆ ಸ್ಕಾರ್ಫ್ ಹೆಚ್ಚು ಸುಂದರವಾಗಿ ಕಾಣುತ್ತದೆ. ಆದರೆ ಆಯಾ ಉಡುಪಿಗೆ ತಕ್ಕಂತೆ ಸ್ಕಾರ್ಫ್ ಬಳಕೆ ಮಾಡುವುದು ಉತ್ತಮ.

ಸ್ಕಾರ್ಫ್ ನಲ್ಲೂ ಹಲವು ವಿಧ
ಸ್ಕಾರ್ಫ್ ಎಂದಾಕ್ಷಣ ಎಲ್ಲವೂ ಒಂದೇ ಅಂದುಕೊಳ್ಳುತ್ತಾರೆ. ಆದರೆ ಎಲ್ಲ ಸ್ಕಾರ್ಫ್ ಗಳು ಎಲ್ಲ ಉಡುಪಿಗೆ ಹೊಂದಿಕೊಳ್ಳುವುದಿಲ್ಲ. ಆದ್ದರಿಂದ ಧರಿಸುವ ಉಡುಪಿನ ಆಧಾರದ ಮೇಲೆ ಸ್ಕಾರ್ಫ್ ಆರಿಸಿಕೊಳ್ಳಿ. ಫ್ಲೈನ್ ಸ್ಕಾರ್ಫ್, ವರ್ಕಡ್ ಸ್ಕಾರ್ಫ್ ಹೀಗೆ ಹಲವು ವಿಧಗಳಿವೆ.

ಹೇಗೆ ಬಳಸಬೇಕು?
ಹೆಚ್ಚಾಗಿ ಫ್ಲೈನ್ ಡ್ರೆಸ್‌ ಆಯ್ದುಕೊಂಡರೆ ಅದಕ್ಕೆ ಹೆಚ್ಚು ಡಿಸೈನ್‌ಗಳಿರುವ, ಗ್ರಾಂಡ್‌ ಲುಕ್‌ ನೀಡುವ ಸ್ಕಾರ್ಫ್ ಬಳಕೆ ಮಾಡಿದರೆ ಆಕರ್ಷಕವಾಗಿ ಮತ್ತು ಡೀಸೆಂಟ್‌ ಆಗಿ ಕಾಣುತ್ತದೆ.

Advertisement

– ರಂಜಿನಿ ಮಿತ್ತಡ್ಕ

Advertisement

Udayavani is now on Telegram. Click here to join our channel and stay updated with the latest news.

Next