Advertisement

ಟ್ರೆಂಡಿ ಜಾಕೆಟ್ಟುಗಳ ಲೋಕ

06:37 PM Dec 18, 2020 | Nagendra Trasi |

ಮನೆಯಲ್ಲಿ ತೊಡಲು ಸಾದಾ ಜಾಕೆಟ್‌ ಅಥವಾ ಸ್ವೆಟರ್‌ಗಳನ್ನು ಬಳಸಲಾಗುತ್ತದೆ. ಆದರೆ ಹೊರಗೆ ಹೋಗುವಾಗ ಅಥವಾ ವರ್ಕಿಂಗ್‌ ಸ್ಪೇಸುಗಳಲ್ಲಿ ಸಾದಾ ಮಾದರಿಯ ಸ್ವೆಟ್ಟರುಗಳು ಮಹಿಳೆಯರ ಸ್ಟೈಲಿಶ್‌ ಡ್ರೆಸ್ಸುಗಳನ್ನು ಮರೆಮಾಚುವಂತೆ ಮಾಡುವುದರಿಂದ ಫ್ಯಾಷನ್‌ ಲುಕ್ಕಿಲ್ಲದ ದಿನಚರಿ ಬೋರಿಂಗ್‌ ಎನಿಸುವ ಸಂದರ್ಭಗಳೂ ಒದಗುವುದುಂಟು ಅಥವಾ ಸ್ವೆಟ್ಟರುಗಳನ್ನು ತೊಡಲು ಹಿಂಜರಿಯುವಂತೆ ಮಾಡಬಹುದು. ಆದರೆ ಇತ್ತೀಚಿನ ಫ್ಯಾಷನ್‌ ಲೋಕದ ಅಪ್ಡೆಟುಗಳಲ್ಲಿ ಟ್ರೆಂಡಿ ಜಾಕೆಟ್ಟುಗಳು ಒಂದಾಗಿವೆ. ಹೊಸ ಸ್ಟೈಲ್‌ ಗಳನ್ನು ಸೃಷ್ಟಿಸುವಂತಹ ಸುಂದರವಾದ ಜಾಕೆಟ್ಟುಗಳು ಇಂದು ಫ್ಯಾಷನ್‌ ಪರಿಣಿತರುಗಳಿಂದ ತಯಾರಿಸಲ್ಪಟ್ಟು ಮಾರುಕಟ್ಟೆಗೆ ಬರಲಾಂಭಿಸಿವೆ. ಅವುಗಳಲ್ಲಿ ಕೆಲವು ವಿಧಗಳನ್ನು ಈ ಕೆಳಗಿನಂತೆ ಕಾಣಬಹುದು.

Advertisement

1 ಕ್ವಿಲ್ಟೆಡ್‌ ಜಾಕೆಟ್‌
ಇವುಗಳು ಪಾಲಿಸ್ಟರ್‌, ಕಾಟನ್‌, ಲೆದರ್‌, ಸಿಲ್ಕ… ಎಲ್ಲಾ ವಿಧಗಳ ಬಟ್ಟೆಗಳಲ್ಲಯೂ ದೊರೆಯುತ್ತವೆ. ಇವುಗಳು ಹೆಚ್ಚು ಚಳಿ ಇರುವಾಗ ಬಳಕೆಗೆ ಸೂಕ್ತವಾದುದು. ಇವುಗಳು  ಬೆಚ್ಚಗಿಡುತ್ತವೆ ಮತ್ತು ಟಾಪ್‌ ಭಾಗವನ್ನು ಸಂಪೂರ್ಣವಾಗಿ ಮುಚ್ಚುತ್ತವೆ. ಲೈನಿಂಗ್‌ ಕೂಡ ಇದ್ದು ಒಳಗೆ ಸ್ಪಾಂಜ್‌ ಲೇಯರನ್ನು ಹೊಂದಿರುವುದರಿಂದ ಅಧಿಕ ಚಳಿಯಿರುವಾಗ ಬಳಸಲು ಉತ್ತಮವಾಗಿರುತ್ತವೆ. ಯಾವುದೇ ಡೆನಿಮ್‌ಗಳು, ಲೆಗ್ಗಿಂಗುಗಳು ಮತ್ತು ಮಾಡರ್ನ್ ಡ್ರೆಸ್ಸುಗಳಿಗೆ ಹೊಂದುತ್ತವೆ. ಪ್ರಯಾಣಿಸುವ ಸಂದರ್ಭಗಳಲ್ಲಿ, ಹೈಕಿಂಗುಗಳಲ್ಲಿ ಹೆಚ್ಚು ಅನುಕೂಲಕರ ವಾದವುಗಳು.

2 ಡೆನಿಮ್‌ ಜಾಕೆಟ್‌
ಇವುಗಳು ಎವರ್‌ಗ್ರೀನ್‌ಜಾಕೆಟ್ಟುಗಳೆನ್ನ ಲಾಗುತ್ತವೆ. ಎಲ್ಲಾ ಸೀಸನ್ನುಗಳಲ್ಲಿಯೂ ಬಳಸಬಹದಾಗಿದೆ. ಇವು ದೇಹವನ್ನು ಬೆಚ್ಚಗಿಡುವುದರೊಂದಿಗೆ ಧರಿಸಲು ಬಹಳ ಆರಾಮದಾಯಕ ‌ವಾಗಿರುತ್ತವೆ. ಮಿನಿಸ್ಕರ್ಟುಗಳು, ಮ್ಯಾಕ್ಸಿ ಸ್ಕರ್ಟುಗಳು, ಕುರ್ತಾಗಳು ಅಲ್ಲದೆ  ಟಾಪುಗಳಿಗೂ ಹೊಂದುತ್ತವೆ ಮತ್ತು ಸ್ಟೈಲಿಶ್‌ ಲುಕ್ಕನ್ನು ಕೊಡುತ್ತವೆ. ಇವುಗಳು ನೀಲಿ ಬಣ್ಣದಲ್ಲಿಯೇ ಹಲವು ಶೇಡುಗಳಲ್ಲಿ ದೊರೆಯುತ್ತವೆ. ಕ್ಯಾಶುವಲ್‌ ವೇರಾಗಿ ಅತ್ಯಂತ ಸೂಕ್ತವಾದುದು.

3 ಹೂಡೆಡ್‌ ಜಾಕೆಟ್‌: 
ಇವುಗಳು ಕ್ಯಾಪ್‌ ಅಟ್ಯಾಚ್‌ ಆಗಿರುವ ಜಾಕೆಟುಗಳು. ವೈಲ್ಡ… ಹಾಗೂ ಟ್ರೆಂಡಿ ಲುಕ್ಕಿನಲ್ಲಿರುವ ಈ ಜಾಕೆಟ್ಟುಗಳು ತೋಳುಗಳಿಲ್ಲದ ಅಥವಾ ತೋಳಿರುವ ಮಾದರಿಗಳಲ್ಲಿಯೂ ಲಭಿಸುತ್ತವೆ. ಇವುಗಳು ಕ್ವಿಲ್ಟೆಡ್‌ ಜಾಕೆಟಿನ ಮಾದರಿಯ ಜಾಕೆಟ್ಟುಗಳೇ ಆಗಿವೆ. ಆದರೆ ಹೂಡ್‌ ಇರುವುದರಿಂದ ಹೂಡೆಡ್‌ ಜಾಕೆಟ್‌ ಎನ್ನಲಾಗುತ್ತದೆ. ಪ್ರಯಾಣಿಸುವಾಗ,  ಕ್ಯಾಶುವಲ್‌ ವೇರ್‌ ಆಗಿ ಬಳಸಬಹುದು. ಇವೂ ಕೂಡ ದೇಹವನ್ನು ಹೆಚ್ಚು ಬೆಚ್ಚಗಿಡುತ್ತವೆ.

4 ಬ್ಲ್ಯಾಸರುಗಳು 
ಬ್ಲ್ಯಾಸರ್‌ಗಳನ್ನು ಸಾಮಾನ್ಯವಾಗಿ ಪುರುಷರು ಬಳಸುತ್ತಾರೆ. ಆದರೆ ಇಂದು ಮಹಿಳೆಯರೂ ಬಳಸುವಂತಹ ಮಾದರಿಗಳು ಸಿದ್ಧಗೊಂಡಿವೆ. ಆಫಿಸ್‌ವೇರ್‌ ಆಗಿ, ಪಾರ್ಟಿಗಳಿಗೆ  ಬಳಸಲು ಸೂಕ್ತವೆನಿಸುವ  ಈ ಜಾಕೆಟ್ಟುಗಳು ಕ್ಲಾಸೀ ಲುಕ್ಕನ್ನು ಕೊಡುತ್ತವೆ. ಕಾಟನ್‌, ಪಾಲಿಎಸ್ಟೆರ್‌ ಮತ್ತು ಕ್ರೇಪ್‌ ಬಟ್ಟೆಗಳಲ್ಲಿಯೂ ದೊರೆಯುತ್ತವೆ. ಇವುಗಳು ಯಾವುದೇ ಡೆನಿಮ್‌, ಫಾರ್ಮಲ್‌ ಪ್ಯಾಂಟುಗಳಿಗೆ ಮ್ಯಾಚ್‌ ಆಗುತ್ತವೆ. ಬೇಕಾದ ಬಣ್ಣಗಳ ಆಯ್ಕೆಗೆ ಅವಕಾಶವಿರುತ್ತದೆ.

Advertisement

5 ಸ್ವೀಟ್‌ ಜಾಕೆಟ್ಟುಗಳು
ಇವುಗಳು ಹೆಚ್ಚಾಗಿ ವರ್ಕ್‌ಔಟ್‌ ಮತ್ತು ಜಿಮ್‌ ದಿರಿಸುಗಳಾಗಿ ಬಳಸಲು ಯೋಗ್ಯವಾದವು. ಸಾಧಾರಣವಾದ ಮಾದರಿಗಳಲ್ಲಿ ದೊರೆಯುವ ಇವು ತುಂಬಾ ಕ್ಯಾಶುವಲ್‌ ಜಾಕೆಟ್‌ ಆಗಿದೆ. ಇವು ದೇಹಕ್ಕೆ ತಕ್ಕಷ್ಟು ಉಷ್ಣವನ್ನು ಒದಗಿಸವುದಲ್ಲದೆ ತೊಡಲು ಬಹಳ ಆರಾಮದಾಯಕವಾಗಿರುತ್ತವೆ. ಟ್ರ್ಯಾಕ್‌ ಪ್ಯಾಂಟ್‌, ನೈಟ್‌ ವೇರ್‌ ಪ್ಯಾಂಟುಗಳಿಗೆ ಹೊಂದುತ್ತವೆ. ಹೆಚ್ಚಾಗಿ ಮೆತ್ತನೆಯ ಬಟ್ಟೆಯಿಂದ ತಯಾರಿಸಲ್ಪಟ್ಟಿರುತ್ತವೆ.

6 ಪ್ರಿಂಟೆಡ್‌ ಜಾಕೆಟ್‌ಗಳು
ಇಂದಿನ ಟ್ರೆಂಡಿ ಡಿಸೈನುಗಳಲ್ಲಿ ಪ್ರಿಂಟ್‌ ಡಿಸೈನುಗಳು ಒಂದು. ಸೀರೆಗಳಲ್ಲಿ, ಡ್ರೆಸ್ಸುಗಳಲ್ಲಿ, ಪ್ಯಾಂಟುಗಳಲ್ಲಿ, ಬ್ಯಾಗುಗಳಲ್ಲಿ ಕೊನೆಗೆ ಶೂಗಳಲ್ಲಿಯೂ ಪ್ರಿಂಟೆಡ್‌ ಡಿಸೈನ್‌ ಒಂದು ಫ್ಯಾಷನ್‌ ಎನಿಸಿದೆ. ಅದೇ ರೀತಿ ಈ ಜ್ಯಾಕೆಟ್ಟುಗಳು ಪ್ರಿಂಟೆಡ್‌ ಬಟ್ಟೆಗಳಿಂದ ತಯಾರಿಸಲ್ಪಟ್ಟಿರುತ್ತವೆ. ಪ್ರಾಣಿಗಳ ಪ್ರಿಂಟ್‌, 3ಡಿ ಪ್ರಿಂಟ್‌, ಫ್ಲೋರಲ್‌ ಪ್ರಿಂಟ್‌, ಟ್ರೈಬಲ್‌ ಪ್ರಿಂಟ್‌ ಇತ್ಯಾದಿ ಬಗೆಗಳ ಪ್ರಿಂಟಿರುವ  ಜ್ಯಾಕೆಟ್‌ ಗಳು ದೊರೆಯುತ್ತವೆ. ಎÇÉಾ ವಿಧವಾದ ಬಟ್ಟೆಗಳಲ್ಲಿ ಮತ್ತು ಬಣ್ಣಗಳಲ್ಲಿ  ದೊರೆಯುವುದರಿಂದ ಸಂದರ್ಭಕ್ಕೆ ಮತ್ತು ಆಯ್ಕೆಗಳಿಗೆ ಮುಕ್ತ ಅವಕಾಶವಿರುತ್ತವೆ.

7  ಲೆದರ್‌ ಜಾಕೆಟ್‌ಗಳು
ಬೋಲ್ಡ… ಮಾದರಿಗಳಾಗಿದ್ದು ಚಳಿಗಾಲದ ಎವರ್‌ಗ್ರೀನ್‌ ಜಾಕೆಟ್ಟುಗಳಿವಾಗಿವೆ. ಮಾಡರ್ನ್ ದಿರಿಸುಗಳಿಗೆ ತುಂಬಾ ಚೆನ್ನಾಗಿ ಹೊಂದುವ ಇವುಗಳು ನಾನಾ ಸ್ಟೈಲುಗಳಲ್ಲಿ ದೊರೆಯುತ್ತವೆ. ಲೆದರ್‌ ನಿಂದ ತಯಾರಿಸಿರುವುದರಿಂದ ದೀರ್ಘ‌ಕಾಲ ಬಾಳಿಕೆ ಬರುತ್ತವೆ ಮತ್ತು ಅವುಗಳ ನಿರ್ವಹಣೆ ಸುಲಭವಾದುದು. ಪ್ರಯಾಣ, ಆಫೀಸ್‌ವೇರ್‌ ಆಗಿ ಇನ್ನಿತರೆ ಸಂದರ್ಭಗಳಲ್ಲಿ ಬಳಸಲು ಸೂಕ್ತವಾದವು.

8 ಟ್ರೆಂಚ್‌ ಕೋಟು
ಟ್ರೆಂಚ್‌ ಕೋಟುಗಳು ಲೈಟ್‌ ವೈಟ್‌ ಆಗಿದ್ದು ವಾಟರ್‌ ಪೂ›ಫ್ ಆಗಿರುತ್ತವೆ. ಇವು ಬಹಳ ಸುಂದರವಾದ ಮಾದರಿಗಳಲ್ಲಿ ಲಭ್ಯವಿದ್ದು ಹೆಚ್ಚು ಚಳಿ ಇರುವಲ್ಲಿ ಹೆಚ್ಚು ಉಪಯುಕ್ತವಾಗುವಂತವುಗಳು. ಇವುಗಳ ಮುಖ್ಯ ಉಪಯೋಗವೆಂದರೆ ಇವುಗಳು ಟ್ರೆಡಿಷನಲ… ಮತ್ತು ಮಾಡರ್ನ್ ಡ್ರೆಸ್ಸುಗಳು ಇವೆರಡಕ್ಕೂ ಹೊಂದುತ್ತವೆ. ಸೀರೆಗಳಿಗೆ ಬೇಕಾದರೂ ಧರಿಸಿ ಸ್ಟೈಲಿಶ್‌ ಆಗಿ ಕಾಣುವಂತಹ ಮಾದರಿಯಿದಾಗಿದೆ. ದಪ್ಪದ ಬಟ್ಟೆಗಳಿಂದ ತಯಾರಾಗುವ ಇವುಗಳಲ್ಲಿ ಹಲವಾರು ಡಿಸೈನುಗಳಿರುತ್ತವೆ.

ಕೇವಲ ಸ್ವೆಟ್ಟೆರುಗಳು ಅಥವ ಸಾಧಾರಣ ಜಾಕೆಟ್ಟುಗಳನ್ನು ಬಳಸುವುದರ ಬದಲು ಒಮ್ಮೆ ಈ ಮೇಲಿನ ಯಾವುದಾದರೊಂದು ಬಗೆಯನ್ನು ಪ್ರಯೋಗಿಸಿ ನೋಡಬಹುದು. ಆದರೆ ಆಯ್ಕೆಯ ಬಗೆಗೆ ಗಮನವಿರುವುದು ಅತ್ಯಾವಶ್ಯಕ. ಚಳಿಯ ತೀವ್ರತೆಗೆ ತಕ್ಕಂತಹ ಬಗೆಯನ್ನು ಆಯ್ಕೆ ಮಾಡಿಕೊಳ್ಳುವುದು ಸೂಕ್ತ. ಬಣ್ಣಗಳ ಆಯ್ಕೆ, ಯಾವ ದಿರಿಸಿನ ಮೇಲೆ ಬಳಸಲು ಸೂಕ್ತವೆಂಬುದನ್ನು ವಿಮರ್ಶಿಸಿ ಖರೀದಿಸುವುದು ಉತ್ತಮ. ಮಳೆಗಾಲದ ಧಿರಿಸುಗಳನ್ನು ಟ್ರೆಂಡಿಯಾಗಿಸುವಲ್ಲಿ ಈ ಮೇಲಿನ ಬಗೆಗಳು ಸಹಾಯಕವಾಗಬಲ್ಲವು.

Advertisement

Udayavani is now on Telegram. Click here to join our channel and stay updated with the latest news.

Next