Advertisement
ಚಳಿಗಾಲದಲ್ಲಿ ತೆಳು ಬಣ್ಣದ ಬಟ್ಟೆಗಳಿಗೆ ಬೇಡಿಕೆ ಕಡಿಮೆಯಾಗಿ ಕಡುವರ್ಣದ ಬಟ್ಟೆಗಳಿಗೆ ಬೇಡಿಕೆ ಬಂದಿದೆ. ಈ ರೀತಿಯ ಬಟ್ಟೆಗಳು ಬಿಸಿಲನ್ನು ಬಹು ಬೇಗನೆ ಹೀರಿ ನಮ್ಮ ದೇಹವನ್ನು ಬೆಚ್ಚಗಿಡಲು ಸಹಕಾರಿ. ಚುಮು ಚುಮು ಚಳಿಯಲ್ಲಿ ಶುದ್ಧ ಹತ್ತಿ, ರೇಷ್ಮೆ, ಉಣ್ಣೆ ಮತ್ತು ಲೆನಿನ್ ಬಟ್ಟೆಗಳನ್ನು ಆಯ್ಕೆ ಮಾಡಿಕೊಳ್ಳುವುದು ಸಹಜ. ಹಿಂದೆಲ್ಲ ಸ್ವೆಟರ್‌ನಲ್ಲಿ ಹೆಚ್ಚು ಆಯ್ಕೆಗಳಿರಲಿಲ್ಲ. ಈಗ ವೇಗ ಪಡೆದಿರುವ ಫ್ಯಾಶನ್ ಕ್ಷೇತ್ರದಲ್ಲಿ ಸ್ವೆಟರ್‌ಗೂ ಆದ್ಯತೆ ಬಂದಿದೆ.
ದೇಹವನ್ನು ಬೆಚ್ಚಗಿಡುವಲ್ಲಿ ಉಲ್ಲನ್ ದಿರಿಸುಗಳು ಸಹಕಾರಿ. ಇತ್ತೀಚಿನ ದಿನಗಳಲ್ಲಿ ಮಾಡರ್ನ್ ಮಾದರಿಯಲ್ಲಿಯೂ ಉಲ್ಲನ್ ಬಟ್ಟೆಗಳು ಮಾರುಕಟ್ಟೆಯನ್ನು ಪ್ರವೇಶಿಸಿವೆ. ಚಳಿಗಾಲಕ್ಕೆಂದೇ ಸಿದ್ಧಪಡಿಸಿದ ಉಲ್ಲನ್ ಥೆಡ್‌ಗಳಿಂದ ಸಿದ್ಧವಾದಂತಹ ಪ್ಯೂಷನ್‌ವೇರ್‌ಗಳಾದ ಕುರ್ತಾಗಳು, ಶರ್ಟ್‌ಗಳು, ಟಾಪ್‌ಗ್ಳಿಗೆ ಬೇಡಿಕೆ ಇದೆ. ಅದರಂತೆಯೇ ಉಲ್ಲನ್ ಸ್ವೆಟರ್‌ಗಳ ಖರೀದಿಯೂ ಜೋರಾಗಿದೆ. ಟ್ರೆಂಡ್ ಆದ ಜಾಕೆಟ್
ಇದೀಗ ಜಾಕೆಟ್ ಟ್ರೆಂಡ್ ಆಗಿ ಪರಿವರ್ತನೆಯಾಗಿದೆ. ಅದರಲ್ಲಿಯೂ ಚಳಿಗಾಲ ಬಂದಾಗ ಜಾಕೆಟ್ ಖರೀದಿಸುವ ಮಂದಿಯೂ ಹೆಚ್ಚಾಗಿದ್ದಾರೆ. ವಾಹನಗಳಲ್ಲಿ ಜಾಲಿ ರೈಡ್ ಹೋಗುವಾಗ ಶೀತನೆಯ ಗಾಳಿಯಿಂದ ಮೈ ಬೆಚ್ಚಗಾಗಿಸಲು ವಿವಿಧ ಮಾದರಿಯ ಜಾಕೆಟ್‌ಗಳು ಮಾರುಕಟ್ಟೆಗೆ ಬಂದಿವೆ. ಅಂದಹಾಗೆ ಈ ರೀತಿಯ ಜಾಕೆಟ್‌ಗಳನ್ನು ಮನೆಗಳಲ್ಲಿ, ಕಚೇರಿ ಕೆಲಸಗಳಿಗೆ ತೆರಳುವಾಗಲೂ ಹಾಕಬಹುದಾಗಿದೆ. ಡ್ರೆಸ್ ಮೇಲೆ ಜಾಕೆಟ್ ಧರಿಸುವು ಕೂಡ ಇತ್ತೀಚಿನ ದಿನಗಳಲ್ಲಿ ಟ್ರೆಂಡ್ ಆಗಿದ್ದು, ಲೆದರ್ ಜ್ಯಾಕೆಟ್, ಡೆನಿಮ್ ಜಾಕೆಟ್ ಖರೀದಿ ಹೆಚ್ಚಾಗುತ್ತಿದೆ. ಜಾಕೆಟ್ ಖರೀದಿಯಲ್ಲಿ ಬಣ್ಣಗಳಿಗೂ ಪ್ರಾಮುಖ್ಯತೆ ಇದ್ದು, ಕಪ್ಪು, ನೀಲಿ, ಬಿಳಿಯ ಜಾಕೆಟ್ ಖರೀದಿಯೇ ಹೆಚ್ಚು. ಪಾರ್ಕಸ್, ಏನಾರಕ್ಸ್, ಮಿಲಿಟರಿ ಸ್ಟೆ çಲ್, ಪಫರ್, ಬಾಂಬರ್ ಜಾಕೆಟ್ ಗಳು ಟೈಟ್ ಪೆನ್ಸಿಲ್ ಫಿಟ್ ಪ್ಯಾಂಟ್‌ಗಳಿಗೆ ಅಥವಾ ಸ್ಕರ್ಟ್‌ಗೆ ಹೊಂದಿಕೊಳ್ಳುತ್ತವೆ ಎನ್ನುತ್ತಾರೆ ವ್ಯಾಪಾರಸ್ಥರು. ಅದೇ ರೀತಿ ಟ್ರೆಂಚ್‌ಕೋಟ್ಸ್ ಮತ್ತು ಬೆಲ್ಟ್ ಅನ್ನು ಗ್ರಾಹಕರು ಹೆಚ್ಚಾಗಿ ಖರೀದಿಸುತ್ತಿದ್ದಾರೆ. ಇನ್ನು ಕೈಯಿಂದ ನೇಯ್ದ ಖಾದಿಗೆ ಯಾವ ಕಾಲದಲ್ಲಿಯೂ ಬೇಡಿಕೆ ಕಡಿಮೆಯಾಗುವುದಿಲ್ಲ. ಅದರಂತೆಯೇ ಚಳಿಗಾಲದಲ್ಲಿ ಶಿರೋವಸ್ತ್ರಗಳಿಗೂ ಬೇಡಿಕೆ ಹೆಚ್ಚಾಗಿದೆ.
Related Articles
ಚಳಿಗಾಲದಲ್ಲಿ ಸ್ಕಾರ್ಫ್ ಬಳಕೆ ಟ್ರೆಂಡಿ ಆಗಿದೆ. ಇತ್ತೀಚಿನ ದಿನಗಳಲ್ಲಿ ಹಲವು ಬಗೆಯ, ಡಿಸೈನ್‌ಗಳಲ್ಲಿ ಸ್ಕಾರ್ಫ್ ಗಳು ಮಾರುಕಟ್ಟೆಯಲ್ಲಿ ದೊರೆಯುತ್ತಿದೆ. ಉಲ್ಲನ್, ಕಾಟನ್, ನೆಟೆÌಡ್, ಜ್ಯೂಟ್, ಟೆರಿಕಾಟ್ ಸೇರಿದಂತೆ ಇನ್ನಿತರ ಬಟ್ಟೆಗಳಲ್ಲಿ ದೊರೆಯುತ್ತದೆ. ಪ್ರಿಂಟೆಡ್ ಸ್ಕಾರ್ಫ್‌ಗೆ ಖರೀದಿ ಅಧಿಕ. ಚಳಿಗಾಲಕ್ಕೆ ಶ್ರಗ್ಸ್ ಗಳು ದೇಹ ಬೆಚ್ಚಗಿಡಲು ಸಹಕಾರಿ. ಡ್ರೆಸ್ ಮೇಲೆ ಶ್ರಗ್ಸ್ ಧರಿಸೋದು ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗಿದೆ. ಸ್ಲಿವ್‌ಲೆಸ್, ಟ್ಯಾಂಕ್ ಟಾಪ್, ಡ್ರೆಸ್, ಡೆನಿಮ್, ಪಲಾಝೋ ಪ್ಯಾಂಟ್‌ಗಳಿಗೆ ಶ್ರಗ್ಸ್ ಹೊಂದಿಕೊಳ್ಳುತ್ತದೆ.
Advertisement
ಕ್ಯಾಪ್‌ಗ್ೂ ಬೇಡಿಕೆಬೆಳಗ್ಗಿನ ವೇಳೆ ಜಾಗಿಂಗ್ ಹೋಗುವಂತಹ ಹವ್ಯಾಸ ಅನೇಕರಿಗಿರುತ್ತದೆ. ಅದರಲ್ಲಿಯೂ ಕೊರೆವ ಚಳಿಯಲ್ಲಿ ಜಾಗಿಂಗ್‌ಗೆ ಹೋಗುವುದು ತುಸು ಕಷ್ಟ. ಚುಮು ಚುಮು ಚಳಿಯಲ್ಲಿ ಕಿವಿಯ ರಕ್ಷಣೆಗೆಂದು ಕ್ಯಾಪ್‌ಗ್ಳು ಮಾರುಕಟ್ಟೆಯಲ್ಲಿದ್ದು, ಕ್ಯಾನ್ವಾಸ್ ಕ್ಯಾಪ್‌ಗ್ಳು, ಚೂಕ್ ಕ್ಯಾಪ್‌ಗ್ಳು, ನೆಟೆÌಡ್ ಹ್ಯಾಟ್‌ಗಳು, ವೂಲನ್ ಹ್ಯಾಟ್‌ಗಳಿಗೆ ಬೇಡಿಕೆ ಇದೆ. ಟ್ರೆಂಡಿ ಮಕ್ಕಳ ಉಡುಪು
ಮಕ್ಕಳ ಸೌಂದರ್ಯದ ಕಡೆಗೂ ಹೆತ್ತವರು ಗಮನ ಹರಿಸುತ್ತಿದ್ದಾರೆ. ಚಳಿಗಾಲದಲ್ಲಿ ಮಕ್ಕಳ ಸೌಂದರ್ಯಕ್ಕೆ ಒಪ್ಪುವಂತಹ ಬಟ್ಟೆಗಳು ಕೂಡ ಮಾರುಕಟ್ಟೆಗೆ ಕಾಲಿರಿಸಿವೆ. ಗಂಡು ಮತ್ತು ಹೆಣ್ಣು ಮಕ್ಕಳ ಸ್ವೆಟ್ ಫ್ರಾಕ್‌ಗಳಿಗೆ ಬೇಡಿಕೆ ಹೆಚ್ಚಿದ್ದು, ಉದ್ದನೆಯ ತೋಳು ಅಥವಾ ಸ್ವೆಟರ್ ಮಾದರಿಯ ಫ್ರಾಕ್‌ಗಳು ಮಕ್ಕಳಿಗೆ ಚಳಿಯಿಂದ ರಕ್ಷಣೆ ನೀಡುತ್ತವೆ. ಮಾರುಕಟ್ಟೆಯಲ್ಲಿ ಸ್ವೆಟ್ ಮಿಡಿಗಳು ಕೂಡ ಇದ್ದು, ಹೆಚ್ಚಾಗಿ ಮಾರಾಟವಾಗುತ್ತಿದೆ.