Advertisement

ಅಂದ ಹೆಚ್ಚಿಸುವ ಟ್ರೆಂಡಿ ಕೈ ಗಡಿಯಾರ

07:49 AM Feb 22, 2019 | |

ಯಾವುದೇ ಕೆಲಸದಲ್ಲಿ ತೊಡಗಿಕೊಳ್ಳಬೇಕಾದರೂ ಮನುಷ್ಯನಿಗೆ ಕೊಂಚ ಟೈಂ ಸೆನ್ಸ್‌ ಅನ್ನೋದು ಇರಬೇಕು, ಸಮಯವನ್ನು ತಿಳಿದುಕೊಳ್ಳುವುದಕ್ಕಾಗಿ ಹಿಂದಿನ ಕಾಲದಲ್ಲಿ ಜನರು ಸೂರ್ಯನ ಚಲನೆಯನ್ನು ಅವಲಂಬಿಸಿಕೊಂಡಿದ್ರೆ, ಈಗ ಕಾಲ ಬದಲಾಗಿದೆ. ಗಂಟೆ ತಿಳಿದುಕೊಳ್ಳುವುದಕ್ಕಾಗಿ ಗಡಿಯಾರ, ವಾಚ್‌ ಲಭ್ಯ. ಗಂಟೆಯ ಲೆಕ್ಕಾಚಾರಕ್ಕಾಗಿ ಆರಂಭವಾದ ವಾಚ್‌(ಕೈಗಡಿಯಾರ) ಇಂದು ಫ್ಯಾಶನ್‌ ಆಗಿಬಿಟ್ಟಿದೆ.

Advertisement

ನೀವು ಯಾವುದೇ ಬಟ್ಟೆ ತೊಟ್ಟುಕೊಳ್ಳಿ. ಅದಕ್ಕೆ ಸ್ಯೂಟೇಬಲ್‌ ಆದಂತಹ ಕೈ ಗಡಿಯಾರ ಕೈಯಲ್ಲಿ ಮಿಂಚುತ್ತಿದ್ದರೆ ಅದರ ಲುಕ್ಕೇ ಬೇರೆ. 2019 ರ ಎಸ್‌ಐಎಚ್‌ಎಚ್‌ ವಾಚ್‌ ಫೇರ್‌ನಲ್ಲಿ ಗಮನ ಸೆಳೆದ ಸ್ಟೈಲಿಷ್‌ ವಾಚ್‌ಗಳ ಬಗ್ಗೆ ಇಲ್ಲಿದೆ ಒಂದು ನೋಟ.

ಸ್ಮೋಕಿಂಗ್‌ ಸಲ್ಮಾನ್‌
ಸುಂದರವಾದ ರೆಟ್ರೋ ಮಾಂಟ್‌ಬ್ಲ್ಯಾಕ್‌ ಹೆರಿಟೇಜ್‌ ಪಲ್ಸಾಗ್ರಫಿ  ಅಳವಡಿಸಿರುವ ಈ ವಾಚ್‌ ನಿಮ್ಮ ರಕ್ತದೊತ್ತಡವನ್ನು ಓದುವ ಸಾಮರ್ಥ್ಯವನ್ನು ಹೊಂದಿದೆ. ನೀವು ಯಾವುದೇ ರೀತಿಯ ಉಡುಗೆಯನ್ನೇ ತೊಟ್ಟರೂ ಅದಕ್ಕೆ ರಾಯಲ್‌ ಲುಕ್‌ ತಂದುಕೊಡುವ ಕೆಲಸವನ್ನು ಈ ವಾಚ್‌ ಮಾಡುತ್ತದೆ. ನ್ಯಾವೀ ಕಾಶ್ಮೀರ್‌ ಸ್ಯೂಟ್‌ ಗಳಿಗಂತೂ ಈ ವಾಚ್‌ ಹೇಳಿ ಮಾಡಿಸಿದಂತಿದೆ. ಟೈಂ ಜತೆಯಲ್ಲಿ ನ್ಯಾವಿಗೇಷನ್‌ ತಂತ್ರಜ್ಞಾನವನ್ನೂ ಅಳವಡಿಸಲಾಗಿದೆ.

ಆಲ್‌ ಬ್ಲೂ ಅರ್ಥಾಂಗ್‌
ನೀಲಿ ಬಣ್ಣಗಳಲ್ಲಿನ ಆಲ್‌ ಬ್ಲೂ ಅರ್ಥಾಂಗ್‌ವಾಚ್‌ ನಿಮ್ಮ ಕೈಯ ಸೌಂದರ್ಯವನ್ನು ಎದ್ದು ಕಾಣುವಂತೆ ಮಾಡುತ್ತದೆ. ಗಿಲ್ಲೋಚ್ಡ್ ಡಯಲ್‌ ಮತ್ತು ನೀಲಿ ಬಣ್ಣದ ಕ್ಲಾಸಿಕ್‌ ಆಲ್ಟ್ರಾ ಥಿನ್‌ ಮಾದರಿಯಲ್ಲಿ ಈ ಕೈ ಗಡಿಯಾರವನ್ನು ತಯಾರಿಸಲಾಗಿದೆ. ಇದರ ಬೆಲ್ಟ್
ಕೂಡಾ ನೀಲಿ ಬಣ್ಣದಿಂದ ಕೂಡಿದೆ. ಸರಳ ಮತ್ತು ಸಂಕೀರ್ಣ ಮಾದರಿಯಲ್ಲಿದ್ದು, ಫಾರ್ಮಲ್‌ ಡ್ರೆಸ್‌ಗಳಿಗೆ ಹೆಚ್ಚು ಹೊಂದಿಕೆಯಾಗುತ್ತದೆ. ನಿಮ್ಮ ವಾರ್ಡ್‌ ರೋಬ್‌ನಲ್ಲಿ ಇದಕ್ಕೂ ಒಂದು ಸ್ಥಾನ ನೀಡಬಹುದು.

ಹೈಡ್ರೋ ಕಾಂಕ್ವೆಸ್ಟ್‌ ಕಲೆಕ್ಷನ್‌
ನೀರಿಗೆ ಸಂಬಂಧಿಸಿದ ಕ್ರೀಡೆಗಳಲ್ಲಿ ತೊಡಗಿಸಿಕೊಂಡವರಿಗೆಂದೇ ಈ ವಾಚ್‌ ಅನ್ನು ಕಂಡು ಹುಡುಕಿದಂತಿದೆ. ಆಧುನಿಕ ವೈಶಿಷ್ಟ್ಯ ಮತ್ತು ವಿನ್ಯಾಸಗಳನ್ನು ತನ್ನೊಳಗೆ ಅಡಕಗೊಳಿಸಿಕೊಂಡಿರುವ ಇದು ನೀರಿಗೆ ಬಿದ್ದರೂ ಕೆಟ್ಟು ಹೋಗುವುದಿಲ್ಲ. ಸ್ಕ್ರೀವ್‌ ಡೌನ್‌ ಕ್ರೌನ್‌ ಮತ್ತು ಹ್ಯಾಕ್ಸ್‌ ಬ್ಯಾಕ್‌ಗಳು ಇದರ ವಿಶಿಷ್ಟತೆಯಾಗಿದೆ. ಸೆಕ್ಯೂರಿಟೀ ಫೋಲ್ಡಿಂಗ್‌ ಕ್ಲ್ಯಸ್ಪ್ , ನೀರು ನಿರೋಧಕ ಗುಣ, ಮತ್ತು ಬಣ್ಣದ ಸಿರಾಮಿಕ್‌ ಇನ್ಸ್‌ಟ್ರೋನೊಂದಿಗೆ ಈ ಕಾಲಕ್ಕೆ ಹೊಂದುವಂತಹ ಸ್ಟೈಲ್‌ ಗಳಲ್ಲಿದನ್ನು ತಯಾರಿಸಲಾಗಿದೆ. ಬೂದು, ಕಪ್ಪು ಮತ್ತು ನೀಲಿ ಬಣ್ಣಗಳಲ್ಲಿ ಈ ವಾಚ್‌ ಮಾರುಕಟ್ಟೆಯಲ್ಲಿ ಲಭ್ಯ.

Advertisement

ಈ ಜಮಾನದಲ್ಲಿ ವಾಚ್‌ ಮೇಲೆ ಕ್ರೇಜ್‌ ಇಲ್ಲದವರು ಕಡಿಮೆ ಎಂದೇ ಹೇಳಬಹುದು. ಕೆಲವರಿಗಂತೂ ವಾಚ್‌ ಕಲೆಕ್ಟ್ ಮಾಡೋ ಹುಚ್ಚು ಕೂಡಾ ಇರುತ್ತದೆ. ಅವರೆಲ್ಲರಿಗಾಗಿ ಈ ಮಾಹಿತಿ. ಹೊಸತು, ಖರೀದಿಸಿ ನೋಡಿ. 

ಬ್ಯಾಕ್‌ ಟು ಬೇಸಿಕ್‌
ಯಾವುದೇ ಟ್ರೆಂಡ್‌ ಬೇಕಾದರೂ ಆರಂಭವಾಗಲಿ. ಕೆಲವರು ಇಷ್ಟ ಪಡುವುದು ಬೇಸಿಕ್‌, ನಾರ್ಮಲ್‌ ಮತ್ತು ಸಿಂಪಲ್‌ ಆಗಿರುವಂತಹ ವಸ್ತುಗಳನ್ನೇ. ಯುವ ಜನರನ್ನೇ ಗುರಿಯಗಿಸಿಟ್ಟುಕೊಂಡು ಆರಂಭಿಸಲಾದ ವಾಚ್‌ ಒಂದು ಇಲ್ಲಿದೆ. ಐಷಾರಾಮಿ ಕೈ ಗಡಿಯಾರದ ಲಿಸ್ಟಿನಲ್ಲಿ ಹಿಂದಿನ ಮಾಡೆಲ್‌  ಮತ್ತೆ ಬಂದಿರುವುದೇ ಇದರ ವಿಶೇಷತೆ. ಹಾರೋಲಾಜಿಕಲ್‌ ಅಚ್ಚರಿಗಳನ್ನು ಹೊಂದಿರುವ ಬಿಟಿಬಿ ಎಲ್ಲ ವಿಧದ ಬಟ್ಟೆಗಳ ಸೌಂದರ್ಯವನ್ನು ಹೆಚ್ಚಿಸುವಲ್ಲಿ ನಿಮ್ಮ ಜತೆ ನಿಲ್ಲುತ್ತದೆ. ಕೇವಲ ಗಂಟೆ ಮತ್ತು ನಿಮಿಷದ ಮುಳ್ಳುಗಳನ್ನು ಮಾತ್ರವೇ ಹೊಂದಿರುವ ಈ ವಾಚ್‌ ಸಿಂಪಲ್ಲಾಗಿದೆ. ಸರ್ವಕಾಲಕ್ಕೂ ಪ್ರಸ್ತುತವಾಗಿದೆ.

ಭುವನ ಬಾಬು, ಪುತ್ತೂರು

Advertisement

Udayavani is now on Telegram. Click here to join our channel and stay updated with the latest news.

Next