Advertisement
ಬಯಲು ಸೀಮೆ ಬಳ್ಳಾರಿ ಜಿಲ್ಲೆಯ ಮಲೆನಾಡು ಸಂಡೂರು. ಗಣಿ ಧೂಳಿನಲ್ಲಿ ಮಿಂದಿದ್ದಕಾಡು ಈಗ ಮಳೆಯ ಮಜ್ಜನದಿಂದ ಭಾಗಶಃ ಸ್ವತ್ಛ-ಸುಂದರ ಆಗಿದೆ. ಬೆಟ್ಟಗಳನ್ನು ಸೀಳಿ ಹೋಗುವ ಥಾರ್ ರಸ್ತೆಗಳಲ್ಲಿ ಓಡಾಡಿದರೆ ಆ ಹಚ್ಚ ಹಸಿರು, ಹಕ್ಕಿಗಳ ಇಂಚರ, ತಂಗಾಳಿ, ಹರಿಯುವ ನೀರ ನಿನಾದ… ಮುದ ತರುತ್ತೆ. ಈ ಪ್ರಕೃತಿ ರಮ್ಯತೆಯಕಾಡಿನಲ್ಲಿ ವಿಹರಿಸಬೇಕೆಂಬುದು ಬಹುದಿನಗಳ ಅಲ್ಲ, ಬಹು ವರ್ಷಗಳ ಕನಸಾಗಿತ್ತು. ಅದುಕೈಗೂಡಿದ್ದು ಸಂಡೂರು ಸಮ್ಮಿಟರ್ಸ್ ತಂಡದಿಂದ. ಆ ತಂಡದ ಟಿ.ಎಂ. ವಿನಯ್‌ಕರೆ ಮಾಡಿ “ಟ್ರಕ್ಕಿಂಗ್ ಬರ್ತೀರಾ..?’ ಎಂದಿದ್ದಷ್ಟೆ. ನಿಗದಿತ ದಿನ, ಸಮಯಕ್ಕೆ ಸರಿಯಾಗಿ ಸಂಡೂರಿನ ವಿಜಯ್ ಸರ್ಕಲ್‌ನಲ್ಲಿದ್ದೆ.
Related Articles
Advertisement
ಇನ್ನು ಪಕ್ಷಿಗಳಕಲರವ, ಜೇನ್ನೊಣಗಳ ಝೇಂಕಾರ, ಸಹಸ್ರಾರು ಡ್ರ್ಯಾಗನ್ ಫ್ಲೈಗಳ ಹಾರಾಟ, ಹದವಾದ ಬಿಸಿಲು, ತಂಗಾಳಿ… ಅದನ್ನೆಲ್ಲ ಕಂಡಾಗ, ಸ್ವರ್ಗ ಇಲ್ಲೇ ಇದೆ ಅನಿಸಿತು. ಇದೇ ನನ್ನಮೊದಲ ಟ್ರೆಕ್ಕಿಂಗ್ ಆಗಿದ್ದರಿಂದ ಚಾರಣಕ್ಕೆ ಸೂಕ್ತ ಡ್ರೆಸ್ ಹಾಕಿರಲಿಲ್ಲ. ಹಾಗಾಗಿ ಮುಳ್ಳಿನ ಗಿಡಗಂಟೆಗಳಿಂದ ಕೈಕಾಲು ತರಚಿತು. ಡಾಕ್ಟರ್ ವರದರಾಜು ಜಿಗಣೆ ತೋರಿಸಿದ್ದಕ್ಕೆ ಶ್ರೀನಿವಾಸ್ರು “ಕಳೆದೆರೆಡು ದಶಕದಿಂದ ಟ್ರೆಕ್ಕಿಂಗ್ ಬರುತ್ತಿರುವೆ. ಇದೇ ಮೊದಲು ನೋಡಿದ್ದು…’ ಎನ್ನುತ್ತಾ ಇವು ನಮ್ಮ ರಕ್ತ ಹೀರಿ ಬದುಕುತ್ತವೆ ಎಂದರು. ನಾನು ಭಯಭೀತನಾದೆ. ಆಮೇಲೆ ಟ್ರೆಕ್ಕಿಂಗ್ ಉದ್ದಕ್ಕೂಕಾಡು ನೋಡಿದ್ದಕ್ಕಿಂತಕೈಕಾಲುಗಳನ್ನು ನೋಡಿಕೊಂಡಿದ್ದೇ ಹೆಚ್ಚು! ಮುಂದೆಕಾಡಿನಲ್ಲಿ ಅವರವರಿಗೆ ರುಚಿಸಿದ್ದನ್ನು ನೋಡುತ್ತಾ ಚದುರಿದರು. ನಾನೂ ಕಾಡು ಹೂವೊಂದನ್ನು ಸೂಕ್ಷ್ಮವಾಗಿ ಗಮನಿಸುತ್ತಾ ಮೈಮರೆತಿದ್ದೆ. “ಅಬ್ಬೋ, ಎಂತಹ ಹಾವು ಗೊತ್ತಾ, ಸ್ವಲ್ಪದರಲ್ಲಿಯೇ ತುಳಿದುಬಿಡ್ತಿದ್ದೆ..’ ಎಂದು ಗಾಬರಿ ಆಗಿ ಕೂಗಿದ್ದಕ್ಕೆ, ಮಾರುತಿ ನನ್ನೆಡೆಗೆ ಓಡಿ ಬಂದ್ರು. ಬೆಚ್ಚಿಬಿದ್ದು ಅಲ್ಲಾಡದೇ ನಿಂತುಬಿಟ್ಟೆ. ಹಾವುಕಣ್ಮರೆ ಆದ್ರೂಕೈಕಾಲುಗಳ ನಡುಕ ನಿಲ್ಲಲಿಲ್ಲ. ಸಾವರಿಸಿಕೊಂಡು ಅಲ್ಲಿದ್ದ ಬ್ರಿಟಿಷರ ಸಮಾಧಿಗಳು, ತಾರಕುಟ್ಟೆ ಬಂಗಲೆ, ಬ್ಯಾರಕ್‌ಗಳು, ರಾಯಲ್ ಗೆಸ್ಟ್ ಹೌಸ್ ನೋಡಿದೆ. ಅವು ನಿರ್ಲಕ್ಷ್ಯಕ್ಕೆ ಒಳಗಾಗಿದ್ದುದು ಬೇಸರ ತಂದಿತು.
ಟ್ರೆಕಿಂಗ್‌ನಲ್ಲಿ ತಮಟೆಯ ಸದ್ದು : ಬೆಟ್ಟ ಹತ್ತಿಳಿದುಕೈಕಾಲುಗಳು ಸೋತಿದ್ದವು. ಆಯಾಸ ಹೇಳಿಕೊಳ್ಳುವ ಆಗಿರಲಿಲ್ಲ! ತಾಯಮ್ಮನ ಕೊಳ್ಳದ ಸಮೀಪ ರೈತರ ಹೊಲದಲ್ಲಿ ನಿಂತ ಮಳೆ ನೀರನ್ನು ದೂರದಿಂದ ನೋಡಿ ಹಿಗ್ಗಿದೆ. ಹತ್ತಿರ ಹೋಗಿ ನೋಡಿ ಹೌಹಾರಿದೆ. ಮುಖಕ್ಕೆ ತಂಪೆರೆಯಬೇಕಿದ್ದ ನೀರು ರೆಡ್ ಆಕ್ಸೆ„ಡ್ ಬೆರೆಸಿದ್ದಂತಿತ್ತು. ಇದು ಮೈನಿಂಗ್ ಫಲ! ತಾಯಮ್ಮನ ಗುಡಿ ಅಣತಿದೂರದಲ್ಲಿತ್ತು. “ಇಲ್ಲಿ ಚಿರತೆ ಐತಂತೆ..’ ಎಂದ ರಾಹುಲ್. ಇದಕ್ಕೆ ಇಂಬುಕೊಡುವಂತೆಕೋತಿಗಳ ಚಿರಾಟ ಕೇಳಿತು. ಎದೆಯಲ್ಲಿ ಢವ ಢವ! ಅಷ್ಟರಲ್ಲಿ ನಮ್ಮಿಂದೆ ಇದ್ದ ಮೇಘರಾಜ್, ರೈತರು ಬೆಳೆ ಕಾವಲಿಗೆ ಇಟ್ಟಿದ್ದ ತಮಟೆ ಬಡಿದರು! ನಿಧಾನಕ್ಕೆ ಒಂದೆರೆಡು ನಾಯಿಗಳೂ ಪ್ರತ್ಯಕ್ಷ ಆದವು. ನಿಟ್ಟುಸಿರು ಬಿಟ್ಟೆ. ಮನಸ್ಸು ಟ್ರಕ್ಕಿಂಗ್‌ನಿಂದ ಪ್ರಫುಲಗೊಂಡಿತ್ತು.
“ಈ ದಾರಿಯಲ್ಲಿ ಹೋಗೋಣ’ ಎಂದು ಸ್ಥೈರ್ಯ ಮಧುರವರುಕರೆದುಕೊಂಡು ಹೋಗಿ ಸೇರಿಸಿದ್ದು ಮೈನಿಂಗ್ ದಾರಿಗೆ! ಬೆಟ್ಟದ ನೆತ್ತಿಯಲ್ಲಿ ಮೈನ್ಸ್ ಲಾರಿಗಳು ಸ್ಪರ್ಧೆಗೆ ಬಿದ್ದಂತೆ ಯರ್ರಾಬಿರ್ರಿ ಓಡಾಡುತ್ತಿದ್ದವು. ಮುಂಜಾನೆ ಮಂಜು ತಬ್ಬಿಕೊಂಡ ಬೆಟ್ಟ ಸಂಜೆ ಹೊತ್ತಿಗೆ ಕೆಂಧೂಳುಮಯ!ಕೆಂಧೂಳು ನಮ್ಮತ್ತ ಹಾರಿ ಬಂದು ಮೈಗೆಲ್ಲ ಮೆತ್ತಿಕೊಳ್ಳುತ್ತಿತ್ತು! ಅಲ್ಲೂ ಮಾರ್ಕ್ ನೆರವಿಗೆ ಬಂತು!ಕಿರಿದಾದ ದಾರಿಯಲ್ಲಿ ಯಮ ಸ್ವರೂಪಿ ಲಾರಿಗಳ ಮಧ್ಯೆ ಪ್ರಯಾಸದಿಂದ ರಾಮಘಡ ಊರಿಗೆ ತಲುಪುವಷ್ಟರಲ್ಲಿ ಜೀವ ಅಂಗೈಗೆ ಬಂದಿತ್ತು. ಜೀವ ನೀರು ಬೇಡಿತು.ಕೊಂಡೊಯ್ದಿದ್ದ ಎರಡು ಲೀಟರ್ ನೀರು ಯಾವಾಗಲೋ ಖಾಲಿ ಆಗಿತ್ತು. ಶ್ರೀನಿವಾಸ್ ಅವರು “ಟ್ರಕ್ಕಿಂಗ್ ನಲ್ಲಿ ಮತ್ತೂಬ್ಬರಿಗೆ ನೀರುಕೊಡಬೇಡಿ..’ ಎಂದಿದ್ದು ಆಗ ಸ್ವಾರ್ಥತೆ ಎಂದುಕೊಂಡಿದ್ದ ನನಗೆ ಅದು ಸತ್ಯ ಅನಿಸಿತು. ಅಂತೂ ಟ್ರೆಕ್ಕಿಂಗ್ ಮುಗಿಸಿ ಮನೆಗೆ ಮರಳುವಷ್ಟರಲ್ಲಿ ತೊಟ್ಟ ಶುಭ್ರ ಬಟ್ಟೆ, ಬ್ಯಾಗ್ ಮೈನ್ಸ್ ಬಣ್ಣಕ್ಕೆ ತಿರುಗಿತ್ತು! ಬಚ್ಚಲು ಮೋರಿಯ ನೀರು ಕೆಂಪಾಗಿತ್ತು. ಗಣಿಗಾರಿಕೆ, ಮೈನ್ಸ್ ಲಾರಿಗಳ ಅರ್ಭಟದ ಮೇಲೆ ಮನದಲ್ಲಿ ತಣ್ಣನೆಯ ಆಕ್ರೋಶ ಮಡುಗಟ್ಟಿತು.
ಅಲ್ನೋಡಿ ಕಾಮನಬಿಲ್ಲು! : ನಾವೆಲ್ಲರೂ ಟ್ರೆಕ್ಕಿಂಗ್ ನೆಪದಲ್ಲಿ ವನಸಿರಿಯ ಮಧ್ಯೆ ಮೈ ಮರೆತಿದ್ದಾಗಲೇ, ಅಲ್ನೋಡಿ ರೇನ್ಬೋ’ ಅಂತ ಜಟ್ಟಿಂಗರಾಜ್ ಮಗ ಪ್ರಜ್ವಲ್ ತೋರಿಸಿದ್ದು ಆಗಸದೆಡೆಗೆ ಅಲ್ಲ. ದಾರಿ ಪಕ್ಕದಲ್ಲಿದ್ದ ನೀರಿನ ಗುಂಡಿಯತ್ತ! ಅರೆ, ಈಗ ಮಳೆಯೂ ಬಿದ್ದಿಲ್ಲ. ಹಾಗಿರುವಾಗ ಕಾಮನಬಿಲ್ಲುಕಾಣಿಸಿದ್ದು ಹೇಗೆ ಅಂದುಕೊಂಡೇ ನೋಡಿದರೆ- ಲಾರಿಗಳ ಡಿಸೇಲ್, ಆಯಿಲ್ ನೀರಿಗೆ ಸೇರಿ ಕಾಮನಬಿಲ್ಲಿನ ಬಣ್ಣಕ್ಕೆ ತಿರುಗಿತ್ತು!
ಚಿತ್ರ- ಲೇಖನ: ಸ್ವರೂಪಾನಂದ ಎಂ. ಕೊಟ್ಟೂರು