Advertisement

45% ಅಂಗವೈಕಲ್ಯವಿದ್ದರೂ ಎವರೆಸ್ಟ್‌ ಬೇಸ್‌ಗೆ ಟ್ರೆಕ್‌!

01:26 AM May 11, 2024 | Team Udayavani |

ಕಠ್ಮಂಡು: ಸಮುದ್ರಮಟ್ಟದಿಂದ 5,364 ಅಡಿ ಎತ್ತರದಲ್ಲಿರುವ ಹಿಮಾಲಯದ ಬೇಸ್‌ ಕ್ಯಾಂಪ್‌ ತಲುಪಬೇಕು ಎಂಬುದು ಎಷ್ಟೋ ಮಂದಿಯ ಕನಸು. ನಿಪುಣ ಚಾರಣಿಗರಿಗೂ ಸವಾಲೊಡ್ಡುವ ಈ ಹಿಮಾಲಯ ಚಾರಣದ ಕನಸನ್ನು ಮುಂಬಯಿ ಮೂಲದ ಅಂಗವಿಕಲ ವ್ಯಕ್ತಿಯೊಬ್ಬರು ನನಸಾಗಿಸಿಕೊಂಡಿದ್ದಾರೆ.

Advertisement

ಶೇ.45 ಅಂಗವೈಕಲ್ಯವಿದ್ದರೂ ಲೆಕ್ಕಿಸದೇ 2,860 ಮೀಟರ್‌ಗಳ ಎತ್ತರವನ್ನೇರಿ ಬೇಸ್‌ಕ್ಯಾಂಪ್‌ ತಲುಪಿದ್ದಾರೆ!
ಐಐಟಿ ಮದ್ರಾಸ್‌ನ ಹಳೆಯ ವಿದ್ಯಾ ರ್ಥಿಯಾಗಿರುವ ಅಭಿಷೇಕ್‌ ಮಾಂಡ್ವಿಕರ್‌ ಬಾಲ್ಯದಲ್ಲೇ ಪೋಲಿಯೋಗೆ ತುತ್ತಾಗಿದ್ದಾರೆ. ಆದರೂ ಚಾರಣದ ಕನಸನ್ನು ಮಾತ್ರ ಎಂದಿಗೂ ಕುಗ್ಗಲು ಬಿಟ್ಟಿಲ್ಲ. ಈ ಹಿಂದೆ ಸಿಂಹಗಢ, ಚಂದೇರಿ ಮತ್ತು ತ್ರಿಕೋನ ಕೋಟೆಗಳನ್ನು ಏರಿದ್ದ ಅಭಿಷೇಕ್‌, ಈ ಬಾರಿ ತ್ರಾಸದಾ ಯಕ ವಾದ ಹಿಮಾಲದ ಬೇಸ್‌ಕ್ಯಾಂಪ್‌ ಚಾರಣದ ಬೆನ್ನೇರಿದ್ದರು. ಅದರಂತೆ ಎ.27ರಂದು ಪತ್ನಿ ಪ್ರಿಯಾಂಕಾ ಹಾಗೂ ಇನ್ನಿತರ 10 ಮಂದಿಯೊಂದಿಗೆ ಚಾರಣ ಆರಂಭಿಸಿ ಮೇ 5ರಂದು ಯಶಸ್ವಿಯಾಗಿ ಬೇಸ್‌ಕ್ಯಾಂಪ್‌ ತಲುಪಿದ್ದಾರೆ. ಅಂಗವಿಕ ಲರು ಓಡಾಡಲು ಬಳಸುವ ವಾಕಿಂಗ್‌ ಸ್ಟಿಕ್‌ಎಲ್ಲೂ ಬಳಸದೇ ಟ್ರೆಕ್ಕಿಂಗ್‌ ಪೋಲ್‌ ಅನ್ನೇ ಬಳಸಿ ಚಾರಣ ಪೂರ್ಣಗೊಳಿಸಿ ರುವುದು ಮತ್ತೂಂದು ವಿಶೇಷ.

Advertisement

Udayavani is now on Telegram. Click here to join our channel and stay updated with the latest news.

Next