Advertisement
ಸಹ್ಯಾದ್ರಿ ಚಿತ್ರಮಂದಿರ ಎದುರೇ ಇದ್ದ ಬೃಹತ್‌ಮರ ಹಾಗೂ ಕಲಾ ಭವನದ ಮುಂಭಾಗ ಇದ್ದಮರಗಳೂ ರಸ್ತೆ ಅಭಿವೃದ್ಧಿಗೆ ಬಲಿಯಾಗಿವೆ. ನಗರದ ಮಹಾವೀರ ವೃತ್ತದಿಂದ ಹಳೆ ಪೋಸ್ಟ್ ಆಫೀಸ್‌ರಸ್ತೆಯಲ್ಲಿದ್ದ ಬೃಹತ್ ಮರಗಳು ಈ ಹಿಂದೆಯೇಅಹುತಿಯಾಗಿದ್ದವು. ಈಗ ಮಹಾವೀರ ವೃತ್ತದಿಂದಹಾಸನಾಂಬ ಕಲಾ ಕ್ಷೇತ್ರ ಮುಂಭಾಗದಿಂದ ಸಹ್ಯಾದ್ರಿವೃತ್ತದವರೆಗೆ ಇದ್ದ ಮರಗಳೂ ರಸ್ತೆ ಅಭಿವೃದ್ಧಿಯ ಅವಸರಕ್ಕೆ ಬಲಿಯಾಗಿವೆ.
Related Articles
Advertisement
ರಸ್ತೆ ಬದಿಯ ಹೆಮ್ಮರಗಳನ್ನು ಅಭಿವೃದ್ಧಿಯಹೆಸರಿನಲ್ಲಿ ಕಡಿದುರುಳಿಸುತ್ತಿದ್ದರೂ ಅರಣ್ಯ ಇಲಾಖೆಮಾತ್ರ ಕುರುಡನಂತಿದೆ. ಅನಿವಾರ್ಯವಾಗಿ ಕಡಿಯಲೇಬೇಕಾದ ಸಂದರ್ಭಗಳಲ್ಲಿ ಮರಗಳನ್ನುಕಡಿಯಲು ಅರಣ್ಯ ಇಲಾಖೆ ಅನುಮತಿನೀಡಬಹುದು. ಆದರೆ, ರಸ್ತೆ ಬದಿಯಿರುವಹೆಮ್ಮರಳನ್ನೆಲ್ಲಾ ಕಡಿದುರುಳಿಸುತ್ತಾ ಹೋದರೆತಂಪಾದ ಹವಾಮಾನದಿಂದ ಬಡವರ ಊಟಿ ಎಂದುಹಾಸನ ನಗರ ಕಾಂಕ್ರೀಟ್ ಕಾಡಾಗುವ ದಿನಗಳು ದೂರವಿಲ್ಲ.
ಅಭಿವೃದ್ಧಿ ಹೆಸರಿನಲ್ಲಿ ಮರಗಳ ಮಾರಣಹೋಮ :
ಹಾಸನ: ಅಭಿವೃದ್ಧಿ ಹೆಸರಿನಲ್ಲಿ ಹಾಸನ ನಗರದಲ್ಲಿ ಮರಗಳ ಮಾರಣಹೋಮ ಮಾಡುತ್ತಿರುವುದು ಮುಂದಿನ ಪೀಳಿಗೆಗೆ ಕಂಟಕ ಒಡ್ಡುವ ಕೃತ್ಯವಾಗಿದೆ ಎಂದು ಕಾಂಗ್ರೆಸ್ ಮುಖಂಡ ಬಾಗೂರು ಮಂಜೇಗೌಡ ಆತಂಕ ವ್ಯಕ್ತಪಡಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ಪರಿಸರ ನಾಶ ಮಾಡಿ ಅಭಿವೃದ್ಧಿಗೆ ಮುಂದಾಗಿರುವ ಶಾಸಕಪ್ರೀತಂಗೌಡ ಅವರ ನಡೆ ಖಂಡನೀಯ. ಮಹಾರಾಜ ಪಾರ್ಕ್ ಅಭಿವೃದ್ಧಿ ಹೆಸರಿನಲ್ಲಿ ಮರಗಳ ಹನನಕ್ಕೆ ಮುಂದಾಗಿದ್ದ ಶಾಸಕರು ಈಗ ಸಹ್ಯಾದ್ರಿ ರಸ್ತೆಯಲ್ಲಿದ್ದ ಹೆಮ್ಮರಗಳನ್ನು ನಾಶ ಮಾಡಿ ಕಾಂಕ್ರೀಟ್ ರಸ್ತೆ ನಿರ್ಮಾಣ ಮಾಡುತ್ತಿರುವುದು ಸರಿಯಲ್ಲ. ಹಾಸನ ನಗರದ ವಿವಿಧ ರಸ್ತೆಗಳಲ್ಲಿ ಸದ್ದಿಲ್ಲದೆ ಹೆಮ್ಮರಗಳ ಹನನವಾಗುತ್ತಿದೆ. ಅರಣ್ಯ ಇಲಾಖೆಯು ಕ್ರಮ ಕೈಗೊಳ್ಳದೆ ಮೌನಕ್ಕೆ ಶರಣಾಗಿರುವುದು ದುರದೃಷ್ಟಕರ ಬೆಳವಣಿಗೆಯಾಗಿದೆ ಎಂದಿದ್ದಾರೆ.