Advertisement

ಮನೆಯ ಮೇಲೆ ಉರುಳಿದ ಮರ; ಮನೆಯಲ್ಲಿದ್ದವರು ಅದೃಷ್ಟವಶಾತ್ ಪಾರು, ಲಕ್ಷಾಂತರ ರೂ. ನಷ್ಟ

06:37 PM Mar 06, 2022 | Team Udayavani |

ಸಾಗರ: ತಾಲೂಕಿನ ಅರಲಗೋಡು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಬಿದರೂರು ಗ್ರಾಮದಲ್ಲಿ ಬೃಹತ್ ಗಾತ್ರದ ಮರವೊಂದು ಆರೋಗ್ಯ ಸಹಾಯಕಿಯ ವಸತಿಗೃಹದ ಮೇಲೆ ಬಿದ್ದ ಘಟನೆ ಶನಿವಾರ ರಾತ್ರಿ ನಡೆದಿದೆ.

Advertisement

ಬಿದರೂರು ಭಾಗದ ಆರೋಗ್ಯ ಸಹಾಯಕಿ ಗೌರಮ್ಮ ಅವರ ಸರ್ಕಾರಿ ವಸತಿಗೃಹದ ಮುಂಭಾಗದಲ್ಲಿ ನಿಲ್ಲಿಸಿದ್ದ ಬೈಕ್ ಸಂಪೂರ್ಣ ನಜ್ಜುಗುಜ್ಜಾಗಿದ್ದು, ಮನೆಯೊಳಗಿನ ಪೀಠೋಪಕರಣ ಸೇರಿದಂತೆ ಎಲ್ಲವೂ ನಾಶವಾಗಿದೆ. ಮನೆಯಲ್ಲಿದ್ದ ಗೌರಮ್ಮ ಮತ್ತವರ ಕುಟುಂಬಕ್ಕೆ ಯಾವುದೇ ಹಾನಿ ಉಂಟಾಗಿಲ್ಲ. ಮನೆಯ ಮೇಲ್ಭಾಗದಲ್ಲಿದ್ದ ವಾಟರ್ ಟ್ಯಾಂಕ್, ಪೈಪ್‌ಲೈನ್ ಎಲ್ಲವೂ ಪುಡಿಪುಡಿಯಾಗಿದ್ದು, ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ.

ನೆರವಿಗೆ ಮನವಿ: ಭಾನುವಾರ ಬೆಳಿಗ್ಗೆ ಅರಳಗೋಡು ಗ್ರಾಮ ಪಂಚಾಯ್ತಿ ಅಧ್ಯಕ್ಷ ಬಿ.ಆರ್.ಮೇಘರಾಜ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಗೌರಮ್ಮ ಅವರಿಗೆ ಗ್ರಾಮ ಪಂಚಾಯ್ತಿಯಿಂದ ಕುಡಿಯುವ ನೀರಿನ ಸೌಲಭ್ಯ ಸೇರಿದಂತೆ ಅಗತ್ಯ ನೆರವನ್ನು ತಕ್ಷಣ ಒದಗಿಸಲಾಗುತ್ತದೆ. ಮರ ತೆರವುಗೊಳಿಸಲು ಅರಣ್ಯ ಇಲಾಖೆಗೆ ಮನವಿ ಮಾಡಲಾಗಿದ್ದು, ಮನೆ ಸಂಪೂರ್ಣ ನೆಲಸಮ ಆಗಿರುವುದರಿಂದ ಸಂಬಂಧಪಟ್ಟ ಇಲಾಖೆ ಗೌರಮ್ಮ ಮತ್ತವರ ಕುಟುಂಬಕ್ಕೆ ಪುನರ್ ವಸತಿ ಕಲ್ಪಿಸಲು ಮನವಿ ಮಾಡಲಾಗುತ್ತದೆ ಎಂದು ಹೇಳಿದರು.

ಇದನ್ನೂ ಓದಿ : ಸರ್ಕಾರಿ ಅಧಿಕಾರಿಗಳ ಬೇಜವಾಬ್ದಾರಿಯಿಂದ ಕಳಪೆ ಕಾಮಗಾರಿ : ಶಾಸಕರಿಂದ ಅಧಿಕಾರಿಗಳ ತರಾಟೆ

Advertisement

Udayavani is now on Telegram. Click here to join our channel and stay updated with the latest news.

Next