ಕಿನ್ನಿಗೋಳಿ: ಮೂಲ್ಕಿ – ಕಿನ್ನಿಗೋಳಿ ರಾಜ್ಯ ಹೆದ್ದಾರಿಯ ಅಂಗರಗುಡ್ಡೆಯ ಬಳಿ ರಸ್ತೆ ಬದಿಯ ಅಕೇಶಿಯಾ ಮರ ಶುಕ್ರವಾರ ರಾತ್ರಿ ರಸ್ತೆಗೆ ಅಡ್ಡವಾಗಿ ಬಿದ್ದು ಸಂಚಾರಕ್ಕೆ ತೊಡಕುಂಟಾಯಿತು.
Advertisement
ವಿದ್ಯುತ್ ತಂತಿಯ ಮೇಲೆ ಮರದ ಗೆಲ್ಲುಗಳು ಬಿದ್ದಿರುವುದರಿಂದ ಕಿನ್ನಿಗೋಳಿ ಹಾಗೂ ಕಟೀಲು ಭಾಗಗಳಿಗೆ ವಿದ್ಯುತ್ ಸಂಪರ್ಕ ಕಡಿತಗೊಂಡಿತ್ತು. ಕೆಲವು ವಾಹನಗಳು ಕೆರೆಕಾಡು ರಸ್ತೆ ಬಳಸಿ ಸಂಚರಿಸಿದವು.
ಘಟನೆ ನಡೆದ ಸ್ಥಳಕ್ಕೆ ಕಿನ್ನಿಗೋಳಿ ಮೆಸ್ಕಾಂ ಅಧಿಕಾರಿ ಸುಕುಮಾರ್ ಹಾಗೂ ಸಿಬಂದಿ ಭೇಟಿ ನೀಡಿದರು. ಅಂಗರಗುಡ್ಡೆ ದಾವೂದ್ ಹಕೀಂ ಅವರು ಮರ ಕಡಿಯುವ ಯಂತ್ರದ ಮೂಲಕ ಮರ ಕಡಿದು ಸುಗಮ ಸಂಚಾರಕ್ಕೆ ವ್ಯವಸ್ಥೆ ಮಾಡಲಾಯಿತು.