Advertisement

ಮಲ್ಲಾರು: ಗಾಳಿ ಮಳೆ ತಂದ ದುರಂತ… ರಿಕ್ಷಾದ ಮೇಲೆ ಮರ ಬಿದ್ದು ಇಬ್ಬರು ಗಂಭೀರ

08:53 PM May 11, 2023 | Team Udayavani |

ಕಾಪು : ಕಾಪು – ಶಿರ್ವ ರಸ್ತೆಯ ಮಲ್ಲಾರು ಚಂದ್ರನಗರ ಬಳಿ ರಿಕ್ಷಾದ ಮೇಲೆ ಮರ ಬಿದ್ದು ಇಬ್ಬರು ಗಂಭೀರ ಗಾಯಗೊಂಡ ಘಟನೆ ಗುರುವಾರ ರಾತ್ರಿ ನಡೆದಿದೆ.

Advertisement

ಗಾಳಿ, ಮಳೆಯಿಂದಾಗಿ ರಿಕ್ಷಾದ ಮೇಲೆ ಬೃಹತ್ ದೂಪದ ಮರ ಉರುಳಿ ಬಿದ್ದಿದ್ದು ರಸ್ತೆ ಸಂಪೂರ್ಣ ಬಂದ್ ಆಗಿದೆ.

ರಿಕ್ಷಾದ ಮೇಲಿನಿಂದ ಮರ ತೆರವು ಗೊಳಿಸಲು ಒಂದು ಗಂಟೆಯಿಂದ ನಿರಂತರ ಪ್ರಯತ್ನ ನಡೆಯುತ್ತಿದ್ದು ಸಾವಿರಾರು ಮಂದಿ ಸ್ಥಳದಲ್ಲಿ ಜಮಾಯಿಸಿದ್ದಾರೆ‌.

ಪೊಲೀಸ್ , ಮೆಸ್ಕಾಂ, ಅಗ್ನಿಶಾಮಕ ದಳ ಸಹಿತ ನೂರಾರು ಮಂದಿ ಸ್ಥಳೀಯರು ರಕ್ಷಣಾ ಕಾರ್ಯದಲ್ಲಿ ನಿರತರಾಗಿದ್ದಾರೆ.

ಇದನ್ನೂ ಓದಿ: ಕಾರವಾರ: ಘನತ್ಯಾಜ್ಯ ವಿಲೇವಾರಿ ಘಟಕಕ್ಕೆ ಬೆಂಕಿ; ಜೆಸಿಬಿ,ಟಿಪ್ಪರ್ ಬೆಂಕಿಗಾಹುತಿ

Advertisement

Advertisement

Udayavani is now on Telegram. Click here to join our channel and stay updated with the latest news.

Next