Advertisement

ಜಲ ಮಂಡಳಿಯ ಎಡವಟ್ಟು: ಮನೆ ಮೇಲೆ ಮುರಿದು ಬಿದ್ದ ಮರ

10:48 AM Nov 29, 2020 | keerthan |

ವಿಜಯಪುರ: ನಗರ ಕುಡಿಯುವ ನೀರು ಪೂರೈಕೆ ಕಾಮಗಾರಿಗೆ ತೋಡಿದ ಗುಂಡಿಯಿಂದ ನಗರದಲ್ಲಿ ಬೃಹತ್ ಮರವೊಂದು ಉರುಳಿ ಬಿದ್ದು ಮನೆಗಳು ಹಾನಿಗೀಡಾಗಿದ್ದು, ರಸ್ತೆ ಸಂಚಾರ ಅಸ್ತವ್ಯಸ್ತಗೊಂಡ ಘಟನೆ ಜರುಗಿದೆ.

Advertisement

ನಗರದ‌ ಮನಗೂಳಿ ರಸ್ತೆಯಲ್ಲಿ ಇರುವ ಮರಾಠಿ ವಿದ್ಯಾಲಯದ ಬಳಿ ಮುಖ್ಯ ರಸ್ತೆಯನ್ನು ಕೆಲವೇ ತಿಂಗಳ ಹಿಂದೆ ಸಿ.ಸಿ. ರಸ್ತೆ ಮಾಡಲಾಗಿದೆ. ಜಲ ಮಂಡಳಿ ಇದೇ ರಸ್ತೆಯ ಅಡಿಯಲ್ಲಿ ಕುಡಿಯುವ ನೀರಿನ ಪೈಪ್ ದುರಸ್ತಿಗೆ ಮುಂದಾಗಿ, ರಸ್ತೆ ಅಗಿಯುವ ಕೆಲಸ ಆರಂಭಿಸಿತ್ತು.

ಸದರಿ ಕಾಮಗಾರಿ ಸ್ಥಳದಲ್ಲೇ ಬೃಹತ್ ಮರವಿದ್ದು, ಕಾರ್ಮಿಕರು ಮರದ ಬೇರುಗಳನ್ನು ಹಾನಿ ಮಾಡಿದ್ದರಿಂದ ಆಸರೆ ಕಳೆದುಕೊಂಡು ರಸ್ತೆ ಬದಿಯ ಮನೆಗಳ ಮೇಲೆ ಉರುಳಿ ಬಿದ್ದಿದೆ.

ಘಟನೆ ಜರುಗಿದ ರಸ್ತೆ ಜನನಿಬಿಡ ಪ್ರದೇಶವಾಗಿದೆ. ಆದರೆ ರಾತ್ರಿ ವೇಳೆ ಮರ ನೆಲಕ್ಕೆ ಬಿದ್ದಿದ್ದು, ಅದೃಷ್ಟವಶಾತ್ ಯಾವುದೇ ಜೀವ ಹಾನಿ ಆಗಿಲ್ಲ. ತಮ್ಮ ಮನೆ ಮೇಲೆ ಮರ ಬಿದ್ದ ಕಾರಣ ಗಾಬರಿಗೊಂಡ ಮನೆಯವರು ಹೊರಗೆ ಓಡಿ ಬಂದಿದ್ದಾರೆ.

Advertisement

ರಸ್ತೆ ಕಾಮಗಾರಿ ಮಾಡುವಾಗ ಸುಮ್ಮನಿದ್ದ ನಗರ ನೀರು ಸರಬರಾಜು ಮಂಡಳಿ ಅಧಿಕಾರಿಗಳು, ದುರಸ್ತಿಯಾದ ರಸ್ತೆಯನ್ನು ಅಗಿದು ಹಾಳು ಮಾಡಿದ್ದಾರೆ. ಅಲ್ಲದೇ ರಸ್ತೆ ಅಗಿಯುವಾಗ ಸ್ಥಳದಲ್ಲೇ ಇದ್ದು, ಉಸ್ತುವಾರಿ ನೋಡಿಕೊಳ್ಳದೇ ಬೇಜವಾಬ್ದಾರಿ ತೋರಿದ್ದಾರೆ. ಇದರಿಂದಾಗಿ ಈ ಅವಘಡ ಸಂಭವಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next