Advertisement

ನಿಲ್ಲದ ಮರಗಳ ಮಾರಣ ಹೋಮ : ಅಧಿಕಾರಿಗಳ ಮೌನವೆಕೆ?

01:25 PM Sep 15, 2021 | Team Udayavani |

ಚಿಂತಾಮಣಿ : ತಾಲ್ಲೂಕು ವ್ಯಾಪ್ತಿಯ ಸಾಮಿಲ್ ಹಾಗೂ ಇಟ್ಟಿಗೆ ಕಾರ್ಖಾನೆಗಳಿಗೆ ಯಾವುದೇ ಪರವಾನಿಗೆ ಇಲ್ಲದೆ ಮರಗಳನ್ನು ಕಡೆದು ರಾಜರೋಷವಾಗಿ ಸಾಗಿಸುತ್ತಿರುವುದು ನೋಡಿದರೆ. ಅರಣ್ಯ ಇಲಾಖೆಯ ಅಧಿಕಾರಿಗಳು ಕಣ್ಣು ಮುಚ್ಚಿ ಕುಳಿತ್ತಿದ್ದಾರೆ.

Advertisement

ಸರ್ಕಾರ ಹಾಗೂ ಜನ ಪ್ರತಿನಿಧಿಗಳು ಕಾಡನ್ನು ಉಳಿಸಿ ಕಾಡನ್ನು ಬೆಳೆಸಿಯೆಂಬ ಬೊಬ್ಬೆ ಹೊಡೆಯುತ್ತಾರೆ ಹೊರೆತು ಇದರ ಬಗ್ಗೆ ಯಾರೊಬ್ಬರು ಸೂಕ್ತ ಕ್ರಮ ಕೈಗೊಂಡಿಲ್ಲವೆಂದು ಪರಿಸರ ಪ್ರೇಮಿ ಅಮಿಟ್ಟಿಗಾನಹಳ್ಳಿ ಶ್ರೀನಿವಾಸರೆಡ್ಡಿ ಆರೋಪ ಮಾಡಿದ್ದಾರೆ.

ಪರಿಸರವು ಸಂರಕ್ಷಣೆ ಮಾಡುವುದು ನಮ್ಮ ಹಕ್ಕೆಂದು ಸರ್ಕಾರವು ವರ್ಷಕ್ಕೆ ಕೋಟ್ಯಾಂತರ ರೂ ಗಳು ವೆಚ್ಚ ಮಾಡಿ ಜಾಹೀರಾತು ಮೂಡಿಸುತ್ತದೆ ಅದು ಕೇವಲ ಪರಿಸರ ದಿನಾಚರಣಕ್ಕೆ ಮಾತ್ರ ಸೀಮಿತವಾಗುತ್ತದೆ. ಅಧಿಕಾರಿಗಳು ಸಾಮಿಲ್‌ಗಳು ಹಾಗೂ ಕಾರ್ಖಾನೆಗಳಿಗೆ ಲೋಡುಗಟ್ಟಲೆ ಮರದ ದಿಬ್ಬುಗಳು ಸಾಗಿಸುತ್ತಿದ್ದರೆ. ಕಾಟಾಚಾರಕ್ಕೆ ತಿಂಗಳಿಗೆ ಒಂದು ಅಥವಾ ಎರಡು ಪ್ರಕರಣಗಳನ್ನು ಮಾತ್ರ ದಾಖಲು ಮಾಡಿಕೊಳ್ಳುತ್ತಾರೆ.

ಇದನ್ನೂ ಓದಿ :ಶ್ರೀರಂಗಪಟ್ಟಣದ ಕರಿಘಟ್ಟ ಬೆಟ್ಟದಲ್ಲಿ ಪ್ರೇಮಿಗಳ ವಿಹಾರ : ಪೊಲೀಸರಿಂದ ಎಚ್ಚರಿಕೆ

ರೈತರು ಮರವನ್ನು ಮಾರಾಟ ಮಾಡಬೇಕಾದರೆ ಸಂಬಂಧಪಟ್ಟ ಅರಣ್ಯ ಇಲಾಖೆಯ ಕಾನೂನು ಅಡಿಯಲ್ಲಿ ಬರುವ ನಿಯಮಗಳನ್ನು ಪಾಲಿಸದೆ ದಲ್ಲಾಳಿಗಳಿಗೆ ಮರಗಳನ್ನು ಮಾರಾಟ ಮಾಡುತ್ತಾರೆ. ಇದರಿಂದ ಪರಿಸರದ ಮೇಲೆ ದುಷಪರಿಣಾಮ ಬೀರಲಿದೆಯೆಂದು ಆರೋಪಿಸಿದ್ದಾರೆ. ಇನ್ನಾದರೂ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಎತ್ತೆಚ್ಚುಗೊಳ್ಳಬೇಕೆಂದು ಅಗ್ರಹಿಸಿದ್ದಾರೆ.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next