Advertisement
ಆರೋಗ್ಯ ಇಲಾಖೆಯ ಆಸ್ಪತ್ರೆಗಳಲ್ಲಿನ ವೈದ್ಯರು ಒಂದು ವರ್ಷಕ್ಕೂ ಹೆಚ್ಚು ಕಾಲ ದಿಂದ ಹಗಲು-ರಾತ್ರಿ ಕೆಲಸ ಮಾಡುತ್ತಿದ್ದಾರೆ. ಅಂತೆಯೇ ಮನಪಾ ಆಸ್ಪತ್ರೆಗಳು ಮತ್ತು ಇತರ ಖಾಸಗಿ ಆಸ್ಪತ್ರೆಗಳಲ್ಲಿಯೂ ಕೊರೊನಾ ಚಿಕಿತ್ಸೆಯನ್ನು ನೀಡಲಾಗಿದೆ. ಆರೋಗ್ಯ ಇಲಾಖೆಯ ಆಸ್ಪತ್ರೆಗಳಲ್ಲಿನ ವೈದ್ಯರಿಗೆ ಕೊರೊನಾ ರೋಗಿಗಳ ಚಿಕಿತ್ಸೆಯ ಜತೆಗೆ ವ್ಯಾಕ್ಸಿನೇಶನ್, ಮಕ್ಕಳ ಆರೋಗ್ಯದ ಕಾಳಜಿ ಮತ್ತು ವಿವಿಧ ರಾಷ್ಟ್ರೀಯ ಮಟ್ಟದ ಆರೋಗ್ಯ ಸಂಬಂಧಿತ ಅಭಿಯಾನಗಳಲ್ಲಿ ಪಾಲ್ಗೊಳ್ಳ ಬೇಕಾಯಿತು. ಕೊರೊನಾ ಅವಧಿ ಯಲ್ಲಿ ಗರ್ಭವತಿಯರ, ತಾಯಿ ಮತ್ತು ಮಕ್ಕಳ ಮರಣ ಪ್ರಮಾಣವನ್ನು ತಡೆಗಟ್ಟಲು ಆರೋಗ್ಯ ಇಲಾಖೆ ಜಾಗರೂಕತೆಯಿಂದ ಕಾರ್ಯ ನಿರ್ವಹಿಸುತ್ತಿದೆ ಎಂದು ಆರೋಗ್ಯ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಡಾ| ಪ್ರದೀಪ್ ವ್ಯಾಸ್ ತಿಳಿಸಿದ್ದಾರೆ.
Related Articles
Advertisement
ಮನಪಾ ಆಸ್ಪತ್ರೆಗಳಲ್ಲಿ ಒಟ್ಟು 19,11,697 ರೋಗಿಗಳಿಗೆ ಚಿಕಿತ್ಸೆ
ಎಲ್ಲ ಮನಪಾ ಆಸ್ಪತ್ರೆಗಳಲ್ಲಿ ಒಟ್ಟು 19,11,697 ರೋಗಿಗಳು ಚಿಕಿತ್ಸೆ ಪಡೆ ದರೆ, 24,508 ರೋಗಿಗಳು ಸಾವನ್ನಪ್ಪಿ ¨ªಾರೆ. ಈ ಪೈಕಿ 7,21,963 ರೋಗಿಗಳು ಮುಂಬಯಿ ಮುನ್ಸಿಪಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದು, ಈ ವರೆಗೆ 15,338 ಮಂದಿ ಸಾವನ್ನಪ್ಪಿ¨ªಾರೆ. ಬಳಿಕದ ಸ್ಥಾನಗಳಲ್ಲಿ ಪುಣೆ, ನಾಗಪುರ ಮತ್ತು ಇತರ ಮಹಾನಗರ ಪಾಲಿಕೆಗಳು ಸೇರಿವೆ. ಎಲ್ಲ ಖಾಸಗಿ ಆಸ್ಪತ್ರೆಗಳಲ್ಲಿ ಒಟ್ಟು 9,21,846 ಕೊರೊನಾ ರೋಗಿಗಳಿಗೆ ಚಿಕಿತ್ಸೆ ನೀಡಲಾಗಿದ್ದು, ಈ ಪೈಕಿ 30,492 ಮಂದಿ ಸಾವನ್ನಪ್ಪಿದ್ದಾರೆ. ಸಾವಿನ ಪ್ರಮಾಣವು ಶೇ. 3.11ರಷ್ಟಿದ್ದರೆ, ಮಹಾತ್ಮಾ ಫುಲೆ ಜನ ಆರೋಗ್ಯ ಯೋಜನೆಯ ಖಾಸಗಿ ಆಸ್ಪತ್ರೆಗಳಲ್ಲಿ ಒಟ್ಟು 74,538 ರೋಗಿಗಳಿಗೆ ಚಿಕಿತ್ಸೆ ನೀಡಲಾಗಿದೆ. 5,183 ಸಾವುಗಳನ್ನು ದಾಖಲಿಸಿದ್ದು, ಮರಣ ಪ್ರಮಾಣ 6.94ರಷ್ಟಿದೆ. ಸರಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಒಟ್ಟು 71,286 ರೋಗಿ ಗಳಿಗೆ ಚಿಕಿತ್ಸೆ ನೀಡಲಾಗಿದೆ. 1,826 ಸಾವುಗಳು ವರದಿಯಾಗಿದ್ದು, ಮರಣ ಪ್ರಮಾಣ ಶೇ. 2.64ರಷ್ಟಿದೆ.
3ನೇ ಅಲೆ ಎದುರಿಸಲು ಸಿದ್ಧತೆ
ಜೂ. 16ರ ವರೆಗೆ ರಾಜ್ಯದಲ್ಲಿ ನೋಂದಾಯಿತ 58,33,865 ರೋಗಿ ಗಳಲ್ಲಿ 22,25,839 ರೋಗಿಗಳು ಅಥವಾ ಶೇ. 38.94 ರೋಗಿಗಳು ಆರೋಗ್ಯ ಇಲಾಖೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಈಗ ಆರೋಗ್ಯ ಇಲಾಖೆ ಮೂರನೇ ಅಲೆಯನ್ನು ಎದುರಿಸಲು ಸಿದ್ಧತೆ ನಡೆಸುತ್ತಿದೆ. ಮಕ್ಕಳಿಗೆ ಪ್ರತ್ಯೇಕ ಹಾಸಿಗೆಗಳು, ಉಪಕರಣಗಳು ಮತ್ತು ಔಷಧಗಳನ್ನು ಒದಗಿಸುವುದರ ಜತೆಗೆ ಮಕ್ಕಳ ವೈದ್ಯರ ನೇಮಕಾತಿಯ ಕೆಲಸ ನಡೆಯುತ್ತಿದೆ. ಆಮ್ಲಜನಕ ಉತ್ಪಾದನೆಯ ಯೋಜನೆ ನಡೆಯುತ್ತಿದೆ. ಆರೋಗ್ಯ ಇಲಾಖೆ ಮಳೆಗಾಲದ ಸಾಂಕ್ರಾಮಿಕ ರೋಗಗಳನ್ನು ಎದುರಿಸಲು ಸಿದ್ಧತೆ ಮಾಡಿಕೊಂಡಿದೆ. ತಾಯಂದಿರು ಮತ್ತು ಮಕ್ಕಳ ಮರಣವನ್ನು ತಡೆಗಟ್ಟಲು ಲಸಿಕೆ ನೀಡುವ ಕಾರ್ಯಕ್ರಮವನ್ನು ಚುರುಕುಗೊಳಿಸಬೇಕಾಗಿದೆ ಎಂದು ಡಾ| ಪ್ರದೀಪ್ ವ್ಯಾಸ್ ಹೇಳಿದ್ದಾರೆ.