Advertisement

ಜಿಲ್ಲಾಸ್ಪತ್ರೆಯಲ್ಲಿ ಬಿಪಿ, ಶುಗರ್‌, ಕ್ಯಾನ್ಸರ್‌ಗೆ ಚಿಕಿತ್ಸೆ

11:39 AM May 02, 2019 | Team Udayavani |

ರಾಮನಗರ: ಜಿಲ್ಲಾಸ್ಪತ್ರೆಯಲ್ಲಿ ರಕ್ತದೊತ್ತಡ (ಬಿಪಿ), ಮಧುಮೇಹ (ಡಯಾಬಿಟಿಸ್‌), ಕ್ಯಾನ್ಸರ್‌ ಮುಂತಾದ ಅಸಾಂಕ್ರಮಿಕ ರೋಗಗಳಿಗೆ (ಎನ್‌ಸಿಡಿ) ಪ್ರತ್ಯೇಕ ತಪಾಸಣಾ ಮತ್ತು ಚಿಕಿತ್ಸಾ ವಿಭಾಗವನ್ನು ತೆರೆಯಲಾಗಿದೆ, ಜಿಲ್ಲೆಯ ಜನತೆ ಈ ವಿಭಾಗದ ಉಪಯೋಗ ಪಡೆದುಕೊಳ್ಳಬೇಕು ಎಂದು ಡಿ.ಎಚ್.ಒ ಡಾ.ಅಮರ್‌ನಾಥ್‌ ಹೇಳಿದರು.

Advertisement

ನಗರದ ಜಿಲ್ಲಾ ಸರ್ಕಾರಿ ಇಲಾಖೆಗಳ ಸಂಕಿರ್ಣ ದಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಆಯೋಜಿಸಿದ್ದ ಜನಪರ ಮಾಹಿತಿ – ಮಾಧ್ಯಮ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಆದೇಶದ ಮೇರೆಗೆ ಪ್ರತ್ಯೇಕ ವಿಭಾಗ ಆರಂಭವಾಗಿದ್ದು, ನುರಿತ ತಜ್ಞ ವೈದ್ಯರಿಂದ ಅಗತ್ಯ ಸಲಹೆ ಮತ್ತು ಚಿಕಿತ್ಸೆ ದೊರೆಯುತ್ತಿದೆ ಎಂದರು.

ಬೇಸಿಗೆ ಮತ್ತು ಮಳೆಗಾಲದ ರೋಗಗಳ ಚಿಕಿತ್ಸೆಗೆ ಇಲಾಖೆ ಸಿದ್ಧ: ಬೇಸಿಗೆ ಕಾಲದಲ್ಲಿ ಉಂಟಾಗುವ ಕರಳು ಬೇನೆ, ಕಾಲರ, ಜಾಂಡೀಸ್‌ ಹಾಗೂ ಸಾಂಕ್ರಾ ಮಿಕ ರೋಗಗಳಿಗೆ ಎಲ್ಲಾ ವೈದ್ಯಕೀಯ ಸೌಲಭ್ಯಗಳನ್ನು ನೀಡಲು ಜಿಲ್ಲಾ, ತಾಲೂಕು ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಕ್ಷಿಪ್ರ, ಪ್ರತಿಕ್ರಿಯೆ ತಂಡವನ್ನು ರಚಿಸಲಾಗಿದೆ. ಮಳೆಗಾಲದಲ್ಲಿ ಕಾಣಿಸಿಕೊಳ್ಳುವ ರೋಗಗಳಿಗೂ ಅಗತ್ಯ ಚಿಕಿತ್ಸೆ, ಔಷಧಿಗಳ ದಾಸ್ತಾನು ಇದೆ. ರೋಗಗಳ ನಿಯಂತ್ರಣಕ್ಕೆ ಸ್ಥಳೀಯ ಸಂಸ್ಥೆಗಳಿಗೆ ಸಲಹೆ, ಸೂಚನೆಗಳನ್ನು ಈಗಾಗಲೆ ನೀಡಲಾಗಿದೆ ಎಂದು ತಿಳಿಸಿದರು.

ಅವ್ಯವಾಹಾರಕ್ಕೆ ಕಡಿವಾಣಕ್ಕೆ ಭರವಸೆ: ಆಯು ಷ್ಮಾನ್‌ ಭಾರತ ಆರೋಗ್ಯ ಕರ್ನಾಟಕ ಯೋಜನೆಯಡಿ ಕಾರ್ಡ್‌ ವಿತರಣೆಗೆ ನಿಗದಿಗಿಂತ ಹೆಚ್ಚು ಹಣ ಪಡೆಯ ಲಾಗುತ್ತಿದೆ ಎಂದು ಸುದ್ದಿಗಾರರು ದೂರಿದ ಹಿನ್ನೆಲೆ ಯಲ್ಲಿ ಡಿ.ಎಚ್.ಓ ಡಾ.ಅಮರ್‌ನಾಥ್‌ ಪ್ರತಿಕ್ರಿಯಿ ಸಿದ ಹೆಚ್ಚಿನ ದರ ವಸೂಲಿ ಮಾಡುತ್ತಿರುವ ಏಜೆನ್ಸಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು. ನಿಗದಿಗಿಂತ ಹೆಚ್ಚು ಹಣ ವಸೂಲಿ ಮಾಡುವವರ ವಿರುದ್ಧ ನಾಗರಿಕರು ತಕ್ಷಣ ತಮ್ಮ ಗಮನ ಸೆಳೆಯುವಂತೆ ಮನವಿ ಮಾಡಿದರು. ಜಿಲ್ಲಾಸ್ಪತ್ರೆಯಲ್ಲಿ ಲಂಚ ಹಾವಳಿಯ ಬಗ್ಗೆಯೂ ಸುದ್ದಿಗಾರರು ಗಮನ ಸೆಳೆದರು.

ಕ್ಷಯರೋಗ ಪತ್ತೆ ಹಚ್ಚುವ ಖಾಸಗಿ ವೈದ್ಯರಿಗೂ ಪ್ರೋತ್ಸಾಹ ಧನ: ಕ್ಷಯರೋಗ ನಿರ್ಮೂಲನೆಯನ್ನು ಸರ್ಕಾರಗಳು ಗಂಭೀರವಾಗಿ ಪರಿಗಣಿಸಿದ್ದು, ಸರ್ಕಾರಿ ಆಸ್ಪತ್ರೆಗಳಲ್ಲಿ ಸಂಪೂಣ ಉಚಿತ ಚಿಕಿತ್ಸೆ ದೊರೆಯು ತ್ತಿದೆ. ವಿಶ್ವ ಆರೋಗ್ಯ ಸಂಸ್ಥೆ ದೃಢೀಕರಿಸಿದ ಗುಣ ಮಟ್ಟದ ಔಷಧಗಳನ್ನು ನೀಡಲಾಗುತ್ತಿದೆ. ಕ್ಷಯ ರೋಗಿಗಳಿಗೆ ಉಚಿತ ಔಷಧಗಳ ಪೂರೈಕೆ ಜೊತೆಗೆ ಪೌಷ್ಠಿಕ ಆಹಾರ ಸೇವಿಸಲು ಅನುಕೂಲವಾಗುವಂತೆ ಮಾಸಿಕ 500 ರೂ ಹಣ ಅವರ ಬ್ಯಾಂಕ್‌ ಖಾತೆಗೆ ಜಮೆ ಆಗುತ್ತಿದೆ. ಕ್ಷಯ ರೋಗ ಪತ್ತೆ ಹಚ್ಚಿ ಸರ್ಕಾರ ದಿಂದ ಉಚಿತ ಔಷಧಿ ಕೊಡಿಸುವ ಕಾರ್ಯಕ್ರಮಕ್ಕೆ ರೋಗಿಯನ್ನು ನೋಂದಣಿ ಮಾಡುವ ಖಾಸಗಿ ವೈದ್ಯರಿಗೂ ಪ್ರೋತ್ಸಾಹ ಧನವಾಗಿ ಪ್ರತಿ ರೋಗಿಗೆ 500 ರೂ ನೀಡಲಾಗುತ್ತಿದೆ ಎಂದರು.

Advertisement

ಸಲಹೆಗೆ 104 ಕರೆ ಮಾಡಿ: ಆರೋಗ್ಯ ಇಲಾಖೆಯ ಮೂಲಕ ಸರ್ಕಾರ ನೀಡುತ್ತಿರುವ ಹತ್ತು ಹಲವು ಕಾರ್ಯಕ್ರಮಗಳು, ಯೋಜನೆಗಳ ಬಗ್ಗೆ ಡಿ.ಎಚ್.ಓ ಅವರು ಮಾಹಿತಿ ನೀಡಿದರು. ಸಾರ್ವಜನಿಕರು ಯಾವುದೇ ದೂರು ಅಥವಾ ಸಲಹೆಗೆ 104 ದೂರ ವಾಣಿ ಸಂಖ್ಯೆಯ ಮೂಲಕ ಸಂಪರ್ಕಿಸಬಹುದು ಎಂದರು. ಜಿಲ್ಲಾ ಮಲೇರಿಯಾಧಿಕಾರಿ ಡಾ. ಪ್ರಸನ್ನ ಕುಮಾರ್‌, ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ. ಅರುಣ್‌ ಕುಮಾರ್‌. ಆರ್‌ ಸಿ ಎಚ್ ಅಧಿಕಾರಿ ಡಾ.ಲಕ್ಷ್ಮೀಪತಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಎಸ್‌. ಶಂಕರಪ್ಪ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next