Advertisement

ಬಿತ್ತನೆ ಮುನ್ನ ಬೀಜೋಪಚಾರ ಮಾಡಿ

07:29 AM Jul 07, 2020 | Lakshmi GovindaRaj |

ಚಿಕ್ಕಬಳ್ಳಾಪುರ: ರೈತರು ಖುಷ್ಕಿಯಲ್ಲಿ ಬಿತ್ತನೆಗೂ ಮೊದಲು ಬೀಜೋಪಚಾರ ಮಾಡಿ ಬಿತ್ತನೆ ಮಾಡುವುದರಿಂದ ಬೀಜದಿಂದ ಹರಡುವ ಎಲ್ಲಾ ರೀತಿಯ ರೋಗಗಳನ್ನು ತಡೆಗಟ್ಟಬಹುದು. ಜೊತೆಗೆ ಮೊಳಕೆಯ ಪ್ರಾರಂಭಿಕ ಹಂತದಲ್ಲಿ  ಮಣ್ಣಿನಿಂದ ಹರಡುವ ರೋಗಗಳಿಂದಲೂ ಸಹ ರಕ್ಷಿಸಬಹುದು ಎಂದು ಕುರುಬೂರು ರೇಷ್ಮೆ ಕೃಷಿ ಮಹಾ ವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಡಾ.ದೇವರಾಜ್‌ ತಿಳಿಸಿದರು.

Advertisement

ಜಿಲ್ಲೆಯಲ್ಲಿ ಉತ್ತಮ ಮಳೆಯಾಗುತ್ತಿದ್ದು, ಮುಂಗಾರು  ಚಟುವಟಿಕೆ ಮತ್ತು ಬಿತ್ತನೆ ಕಾರ್ಯ ಬಿರುಸಿನಿಂದ ಆರಂಭಗೊಂಡಿರುವ ಹಿನ್ನೆಲೆಯಲ್ಲಿ ಬೀಜೋಪಚಾರದ ಮಹತ್ವದ ಬಗ್ಗೆ ಉದಯವಾಣಿಗೆ ಮಾಹಿತಿ ನೀಡಿದ್ದು, ರೈತನಿಗೆ ಗುಣಮಟ್ಟದ ಬಿತ್ತನೆ ಬೀಜವು ಹೆಚ್ಚಿನ ಇಳುವರಿ ಪಡೆಯಲು  ತುಂಬಾ ಸಹಕಾರಿಯಾಗುತ್ತದೆ ಎಂದರು.

ಉತ್ತಮ ಗುಣಮಟ್ಟದ ಬಿತ್ತನೆ ಬೀಜವೆಂದರೆ ಭೌತಿಕವಾಗಿ ಶುದ್ಧವಾಗಿದ್ದು, ಶೇ.80 ಕ್ಕಿಂತ ಮೇಲ್ಪಟ್ಟು ಮೊಳಕೆಯೊಡೆಯುವ ಶಕ್ತಿ ಹೊಂದಿರಬೇಕು. ನಿಗದಿತ ಪ್ರಮಾಣದಲ್ಲಿ ತೇವಾಂಶ ಹೊಂದಿದ್ದು,  ಬಹುಮುಖ್ಯವಾಗಿ ರೋಗ ಹಾಗೂ ಕೀಟಬಾಧೆಯಿಂದ ಮುಕ್ತವಾಗಿರಬೇಕು. ಬೀಜೋಪಚಾರದಿಂದ ರೋಗ ಮತ್ತು ಕೀಟಗಳಿಂದ ರಕ್ಷಣೆಗೊಂಡ ಬೀಜಗಳು ಆರೋಗ್ಯವಂತ ಸಸಿಗಳನ್ನು ನೀಡುತ್ತವೆ.

ಕಡಿಮೆ ಖರ್ಚಿನಲ್ಲಿ  ರೈತನಿಗೆ ಹೆಚ್ಚಿನ ಇಳುವರಿ ಮತ್ತು ಆದಾಯ ದೊರೆಯುತ್ತದೆ ಎಂದರು. ಆದ್ದರಿಂದ ರೈತರು ರಾಗಿ, ನೆಲಗಡಲೆ, ತೊಗರಿ, ಅಲಸಂದಿ ಸೇರಿದಂತೆ ಎಲ್ಲ ರೀತಿಯ ಬಿತ್ತನೆ ಬೀಜಗಳನ್ನು ಬೀಜೋಪಚಾರ ಮಾಡಿ ಬಿತ್ತನೆ ಮಾಡಬೇಕೆಂದು  ಸೂಚಿಸಿದ್ದಾರೆ. ಮಾಹಿತಿಗಾಗಿ ಮೊಬೈಲ್‌ ನಂ 9480386651 ಸಂಪರ್ಕಿಸಬಹುದು.

Advertisement

Udayavani is now on Telegram. Click here to join our channel and stay updated with the latest news.

Next