ಪುರಿ: ಜಗತ್ಪ್ರಸಿದ್ಧ ಪುರಿ ಜಗನ್ನಾಥ ಮಂದಿರಕ್ಕೆ ಸೇರಿದ ಎಮಾರ್ ಮಠದ ಆವರಣದಲ್ಲಿ ನಿಧಿನಿಕ್ಷೇಪ ಶೋಧ ಕಾರ್ಯ ಆರಂಭಗೊಂಡಿದೆ.
ಉತ್ತರ ಪಾರ್ಶ್ವ ಮಠದ ಮಹಾಂತ ನಾರಾಯಣ ರಾಮಾನುಜ ದಾಸ್ ನೀಡಿದ ದೂರಿನನ್ವಯ ಪುರಾತತ್ವ ಇಲಾಖೆ ತಂಡ ನಿಧಿ ಶೋಧ ನಡೆಸುತ್ತಿದೆ.
2011ರಲ್ಲಿ ಎಮಾರ್ ಮಠದ ಮಹಾಂತರಾಗಿದ್ದ ರಾಜಗೋಪಾಲ್ ರಾಮಾನುಜ ದಶ್ ಅವರ ಆಡಳಿತದ ವೇಳೆ ಖಜಾನೆಯಲ್ಲಿದ್ದ ಅಪಾರ ಪ್ರಮಾಣದ ಬೆಳ್ಳಿ ಆಭರಣಗಳು ಕಳುವಾಗಿದ್ದವು. ಆಗ ಪೊಲೀಸ್ ತಂಡ ಶೋಧ ನಡೆಸಿ, ನೆಲದಡಿ ಹೂತಿದ್ದ ನಿಧಿ ಪೆಟ್ಟಿಗೆಗಳನ್ನು ಹೊರತೆಗೆದಿತ್ತು. 90 ಕೋಟಿ ರೂ. ಮೌಲ್ಯದ 18 ಟನ್ ತೂಕದ 552 ಬೆಳ್ಳಿ ಗಟ್ಟಿಗಳನ್ನು ಹೊರತೆಗೆಯುವಲ್ಲಿ ತಂಡ ಸಫಲವಾಗಿತ್ತು. ಈ ವರ್ಷದ ಎಪ್ರಿಲ್‌ನಲ್ಲೂ ಶೋಧ ನಡೆಸಿ, 35 ಕಿಲೋ ತೂಕದ 45 ಬೆಳ್ಳಿ ಗಟ್ಟಿಗಳನ್ನು ಶೋಧಿಸಲಾಗಿತ್ತು.
ಮತ್ತಷ್ಟು ಇರುವ ಶಂಕೆ: ಮಹಾಂತ ಸ್ವಾಮೀಜಿ ಮತ್ತು ಇತಿಹಾಸ ತಜ್ಞರು, ಮಠದ ಆವರಣದಲ್ಲಿ ಇನ್ನೂ ಸಾಕಷ್ಟು ಬೆಳ್ಳಿ ಗಟ್ಟಿಗಳ
ಖಜಾನೆ ಇರಬಹುದು ಎಂದು ಶಂಕಿಸಿದ್ದರು. ಆದಕಾರಣ, ಪುರಾತತ್ತÌ ಇಲಾಖೆಯ ನುರಿತ ತಂಡ, ಲೋಹಶೋಧಕ ಯಂತ್ರಗಳೊಂದಿಗೆ ಶೋಧ ನಡೆಸುತ್ತಿದೆ.